ETV Bharat / state

ಆರ್ಥಿಕ ಸುಧಾರಣೆಯಲ್ಲಿ ರಾಜ್ಯ ದ್ವಿತೀಯ ಸ್ಥಾನದಲ್ಲಿದೆ: ಶಾಸಕ ಕುಮಾರ್​ ಬಂಗಾರಪ್ಪ - MLA kumar bangarappa reaction about flood releif fund

ಆರ್ಥಕ ಸುಧಾರಣೆಯಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದೆ. ಜಿಎಸ್​ಟಿ ಪರಿಹಾರ ಬಂದರೆ ಮತ್ತಷ್ಟು ಸುಧಾರಣೆ ಕಾಣುತ್ತೇವೆ ಎಂದು ಬೆಂಗಳೂರಿನಲ್ಲಿ ಶಾಸಕ ಕುಮಾರ ಬಂಗಾರಪ್ಪ ಹೇಳಿದ್ದಾರೆ.

MLA kumar bangarappa pressmeet in bangalore
ಶಾಸಕ ಕುಮಾರ ಬಂಗಾರಪ್ಪ
author img

By

Published : Jan 5, 2021, 3:07 PM IST

ಬೆಂಗಳೂರು: ಆರ್ಥಿಕ ಸುಧಾರಣೆಯಲ್ಲಿ ರಾಜ್ಯ ಮುಂದಿದೆ. ಗುಜರಾತ್ ಪ್ರಥಮ ಸ್ಥಾನದಲ್ಲಿದ್ದು, ನಾವು ದ್ವಿತೀಯ ಸ್ಥಾನದಲ್ಲಿದ್ದೇವೆ ಎಂದು ಬಿಜೆಪಿ ಶಾಸಕ ಕುಮಾರ್​ ಬಂಗಾರಪ್ಪ ತಿಳಿಸಿದ್ದಾರೆ.

ಶಾಸಕ ಕುಮಾರ್​ ಬಂಗಾರಪ್ಪ

ವಿಧಾನಸೌಧದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬರಬೇಕಾದ ನಾಲ್ಕನೇ ಕ್ವಾರ್ಟರ್​​ನಲ್ಲಿ ರಾಜ್ಯದ ಸುಧಾರಣೆ ಇದೆ. ಜಿಎಸ್​ಟಿ ಪರಿಹಾರ ಬಂದರೆ ಮತ್ತಷ್ಟು ಸುಧಾರಣೆ ಕಾಣುತ್ತೇವೆ ಎಂದರು. ಕೇಂದ್ರದಿಂದ 7694 ಕೋಟಿ ರೂ. ಜಿಎಸ್​ಟಿ ಹಣ ರಿಲೀಸ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಪ್ರಸ್ತುತ 7600 ಕೋಟಿ ರೂ.ನಷ್ಟು ಜಿಎಸ್​ಟಿ ಹಣ ಬಂದಿದೆ. ನಮಗೆ GSTಯ ಶೇ. 15ರಷ್ಟು ಫಂಡ್‌ ಬರಬೇಕು. ಕೆಲವು ಕಮಾಡಿಟೀಸ್​ನಲ್ಲಿ ಬರಬೇಕಿತ್ತು. ಸೆಸ್ ಹಾಕುವ ಸ್ವಾತಂತ್ರ್ಯವನ್ನು ನಾವು ಕಳೆದುಕೊಂಡಿದ್ದೇವೆ. ಆದರೂ ಈಗ ಕೇಂದ್ರದಿಂದ ಬಂದಿದೆ. ಉಳಿದ ಏಳು ಸಾವಿರ ಕೋಟಿ ರೂ. ರೀಫಂಡ್ ಮಾಡಬೇಕು. ಆಗ ಸ್ವಲ್ಪಮಟ್ಟಿಗೆ ಉಸಿರಾಟ ಸಾಧ್ಯವಾಗುತ್ತದೆ ಎಂದು ಹೇಳಿದರು.

ಪ್ರವಾಹ ಪರಿಹಾರ ಬಾರದ ವಿಚಾರ ಸಂಬಂಧ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕುಮಾರ್​ ಬಂಗಾರಪ್ಪ, 33 ಸಾವಿರ ಕೋಟಿ ರೂ. ನಷ್ಟ ಆಗಿತ್ತು. ನೆರವಿಗಾಗಿ ನಾವು ಕೇಂದ್ರಕ್ಕೆ ಮನವಿ ಮಾಡಿದ್ದೆವು. ನಷ್ಟ ಆಗಿರುವಷ್ಟೂ ಕೊಡುವುದಕ್ಕೆ ಅವಕಾಶವಿಲ್ಲ. ಅದಕ್ಕೆ ಸಮರ್ಪಕ ಗೈಡ್​ಲೈನ್ಸ್ ಇದೆ. 33 ಸಾವಿರ ಕೋಟಿ ರೂ. ನಮಗೆ ನಷ್ಟ ಆಗಿದೆ ನಿಜ. ಎನ್​​ಡಿಆರ್​ಎಫ್​​ನಲ್ಲಿ ಗೈಡ್​​ಲೈನ್ಸ್ ಬೇರೆಯೇ ಇದೆ. ಅದರ ಪ್ರಕಾರ ಈಗ ನಮಗೆ ನೆರವು ಬಂದಿದೆ. ಉಳಿದ ನೆರವು ಶೀಘ್ರದಲ್ಲೇ ಬರಲಿದೆ. ಕೇಂದ್ರಕ್ಕೆ ರಾಜ್ಯವೂ ಮನವಿ ಮಾಡಿದೆ ಎಂದು ಹೇಳಿದರು.

ಇದನ್ನೂ ಓದಿ:ಇನ್ನೊಂದೆರಡು ದಿನದಲ್ಲಿ ಸಚಿವ ಸ್ಥಾನ:ಕತ್ತಿ, ಶಂಕರ್​ಗೆ ಸಿಹಿ ಸುದ್ದಿ ನೀಡ್ತಾರಾ ಸಿಎಂ?

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.