ETV Bharat / state

ಸಿಸಿಬಿ ದೋಷಾರೋಪ ಪಟ್ಟಿ ಸಲ್ಲಿಸಿರುವುದು ಸತ್ಯಕ್ಕೆ ಸಿಕ್ಕ ಜಯ: ಅಖಂಡ ಶ್ರೀನಿವಾಸ ಮೂರ್ತಿ - ಶಾಸಕ ಅಖಂಡ ಶ್ರೀನಿವಾಸ ಮೂರ್ತಿ

ಮಾಜಿ ಮೇಯರ್​ ಸಂಪತ್ ರಾಜ್ ಹಾಗೂ ಕಾರ್ಪೊರೇಟರ್​ ಜಾಕೀರ್​ ಈ ರೀತಿಯ ಕೆಲಸ ಮಾಡುತ್ತಾರೆಂದು ನಾನು ಅಂದುಕೊಂಡಿರಲಿಲ್ಲ ಎಂದು ಶಾಕಸ ಅಖಂಡ ಶ್ರೀನಿವಾಸ ಮೂರ್ತಿ ಹೇಳಿದ್ದಾರೆ. ಅಲ್ಲದೆ ಆರೋಪಿಗಳ ವಿರುದ್ಧ ಚಾರ್ಜ್​ ಶೀಟ್​ ದಾಖಲಿಸಿರುವುದು ಸತ್ಯಕ್ಕೆ ಸಿಕ್ಕ ಜಯ ಎಂದಿದ್ದಾರೆ.

Akhanda Srinivas Murthy
ಶಾಸಕ ಅಖಂಡ ಶ್ರೀನಿವಾಸ ಮೂರ್ತಿ
author img

By

Published : Oct 13, 2020, 3:45 PM IST

ಬೆಂಗಳೂರು: ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆಗೆ ಬೆಂಕಿ‌ಬಿದ್ದ ಪ್ರಕರಣ ಸಂಬಂಧಪಟ್ಟಂತೆ ಸಿಸಿಬಿ ಅಧಿಕಾರಿಗಳು ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದು, ಈ ಬಗ್ಗೆ ಅಖಂಡ ಶ್ರೀನಿವಾಸ ಮೂರ್ತಿ ಪ್ರತಿಕ್ರಿಯೆ ನೀಡಿದ್ದಾರೆ.

ನಾನು ಶಾಸಕನಾದ ಮೇಲೆ ಯಾವುದೇ ಗಲಾಟೆ ಇರ್ಲಿಲ್ಲ, ಯಾರೋ ಬೇಕಂತ ಕಿಡಿಗೇಡಿಗಳು ಮಾಡಿರೋ ಕೆಲಸ ಅನ್ಕೊಂಡಿದ್ದೆ. ನಾನು ನಮ್ಮ ಕಾರ್ಪೊರೇಟರ್​ಗಳು ಹಾಗೂ ಕಾರ್ಯಕರ್ತರ ಜೊತೆ ಅಣ್ಣ ತಮ್ಮಂದಿರಂತೆ ಕೆಲಸ ಮಾಡ್ಕೊಂಡಿದ್ದೆ. ಮಾಜಿ ಮೇಯರ್ ಸಂಪತ್​ ಅವರಿಗೆ ನನ್ನ ಮೇಲೆ ಏನೇ ದ್ವೇಷ ಇದ್ರು ನಮ್ಮ ಪಕ್ಷದ ಮುಖಂಡರಾದ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್, ಜಮೀರ್​ ಬಳಿ ಹೇಳಬೇಕಿತ್ತು. ಆದರೆ ಈ ರೀತಿ ಗಲಭೆ ಮಾಡುವ ಅವಶ್ಯಕತೆ ಇರಲಿಲ್ಲ ಎಂದು ಅಖಂಡ ಶ್ರೀನಿವಾಸ ಮೂರ್ತಿ ಹೇಳಿದರು.

ನಮ್ಮ ಮನೆ ಹಾಗೂ ನನ್ನ ತಮ್ಮನ ಮನೆಗೆ ಬೆಂಕಿ ಹಚ್ಚುವ ಕೆಲಸ, ಜೊತೆಗೆ ಡಿ ಜೆ ಹಳ್ಳಿ, ಕೆ ಜಿ ಹಳ್ಳಿ ಪೊಲೀಸ್ ಸ್ಟೇಷನ್​ಗೆ ಅವರು ಬೆಂಕಿ ಇಟ್ಟಿದ್ದಾರೆ. ಯಾರು ಅಪರಾಧಿಗಳಿದ್ದಾರೆಯೋ ಅವರ ವಿರುದ್ಧ ಸಿಸಿಬಿ ಪೊಲೀಸರು ಚಾರ್ಜ್ ಶೀಟ್​ ಹಾಕಿ ಶಿಕ್ಷೆ ಆಗುವಂತೆ ಮಾಡಿದ್ದಾರೆ. ಇದರಿಂದ ಸತ್ಯಕ್ಕೆ ಜಯ ಸಿಕ್ಕಿದೆ ಎಂದರು.

ಸಂಪತ್ ರಾಜ್ ಇರ್ಲಿ ಜಾಕಿರ್ ಇರ್ಲಿ ಅವರೆಲ್ಲ ನಮ್ಮ ಜೊತೆ ಇದ್ದೋರು ವಾರ್ಡ್ ನಲ್ಲಿ ಯಾವುದೇ ಕೆಲಸ ಆಗಬೇಕಂದ್ರು ಅವರ ಸಲಹೆ ಪಡೆದು ಕೆಲಸ ಮಾಡ್ತಿದ್ದೆ. ಅವರು ಈ ರೀತಿಯ ಕೃತ್ಯವೆಸಗಿರುವುದು ಬೇಸರ ಮೂಡಿಸಿದೆ ಎಂದು ಶಾಸಕರು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.