ETV Bharat / state

ಮಹಿಳೆಯೊಂದಿಗೆ ಅನುಚಿತ ವರ್ತನೆ ತೋರಿದ ಪಿಎಸ್ಐ ಸಸ್ಪೆಂಡ್, FIR ದಾಖಲು: ಡಿಸಿಪಿ ಮಾಹಿತಿ

ಠಾಣೆಗೆ ಸಾಕ್ಷಿಯಾಗಿ ಹೇಳಿಕೆ ನೀಡಲು ಬಂದಿದ್ದ ಮಹಿಳೆ ಮೇಲೆ ಅನುಚಿತವಾಗಿ ವರ್ತಿಸಿದ ಪಿಎಸ್​ಐ ಅಮಾನತಾಗಿದ್ದಾರೆ.

South East Division DCP C.K. Baba
ಆಗ್ನೇಯ ವಿಭಾಗದ ಡಿಸಿಪಿ ಸಿ ಕೆ ಬಾಬಾ
author img

By

Published : Apr 12, 2023, 6:26 PM IST

Updated : Apr 12, 2023, 7:23 PM IST

ಆಗ್ನೇಯ ವಿಭಾಗದ ಡಿಸಿಪಿ ಸಿ ಕೆ ಬಾಬಾ

ಬೆಂಗಳೂರು: ಮಹಿಳೆಯೊಂದಿಗೆ ಅನುಚಿತ ವರ್ತನೆ ತೋರಿದ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಸುದ್ದುಗುಂಟೆ ಪಾಳ್ಯ ಪೊಲೀಸ್ ಠಾಣೆಯ ಸಬ್​ ಇನ್​ಸ್ಪೆಕ್ಟರ್ ಅನ್ನು ಅಮಾನತುಗೊಳಿಸಲಾಗಿದ್ದು, ಅವರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿರುವುದಾಗಿ ನಗರ ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ ತಿಳಿಸಿದ್ದಾರೆ. ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಪಿಎಸ್ಐ ಮಂಜುನಾಥ್ ಸ್ವಾಮಿ ವಿರುದ್ಧ ಐಪಿಸಿ ಸೆಕ್ಷನ್ 354 ಎ ಹಾಗೂ 354 ಬಿ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಏಪ್ರಿಲ್ 10 ರಂದು ಪಿಎಸ್ಐ ಮಂಜುನಾಥ್ ಸ್ವಾಮಿ ತನ್ನೊಂದಿಗೆ ಮೈ-ಕೈ ಮುಟ್ಟಿ ಅನುಚಿತ ವರ್ತನೆ ತೋರಿರುವುದಾಗಿ ಸಂತ್ರಸ್ತೆ ಟ್ವೀಟ್ ಮಾಡಿ ಡಿಸಿಪಿಗೆ ಟ್ಯಾಗ್ ಮಾಡಿದ್ದರು. ಕೃತ್ಯ ಸಂಬಂಧ ಮಾಹಿತಿ ಪಡೆದುಕೊಂಡ ಆಗ್ನೇಯ ವಿಭಾಗದ ಡಿಸಿಪಿ, ನೊಂದ ಮಹಿಳೆಯಿಂದ ಲಿಖಿತ ದೂರು ಪಡೆದುಕೊಂಡಿದ್ದರು. ಪಿಎಸ್ಐ ವಿರುದ್ಧ ಗಂಭೀರ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ತನಿಖೆ ನಡೆಸದೆ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. ಮೇಲ್ನೋಟಕ್ಕೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಮಾನತುಗೊಳಿಸಲಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ.

ಸಂತ್ರಸ್ತೆ ಸಹೋದರನ ಸ್ನೇಹಿತನ ವರದಕ್ಷಿಣೆ ಪ್ರಕರಣದ ಆರೋಪಕ್ಕೆ ಸಂಬಂಧಿಸಿದಂತೆ ಸಾಕ್ಷಿಯಾಗಿ ಹೇಳಿಕೆ ನೀಡಲು ಸುದ್ದುಗುಂಟೆ ಪಾಳ್ಯ ಪೊಲೀಸ್ ಠಾಣೆಗೆ ಹೋಗಿದ್ದರು. ಹೇಳಿಕೆ ಪಡೆಯುವಾಗ ಉದ್ದೇಶಪೂರ್ವಕವಾಗಿ ಮೈ-ಕೈ ಮುಟ್ಟಿ ಅನುಚಿತ ವರ್ತನೆ ತೋರಿದ್ದಾರೆ. ಮನೆಗೆ ಹೋದ ಮೇಲೆ ಪೋಟೋಗಳನ್ನು ಕಳುಹಿಸುವಂತೆ ಒತ್ತಾಯಿಸಿದ್ದಾರೆ. ವಾಟ್ಸ್‌ಆ್ಯಪ್ ಮೆಸೇಜ್ ಮೂಲಕ ಕಿರುಕುಳ ನೀಡಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪಿಎಸ್ಐ ವಿರುದ್ಧ ಕಿಡಿಕಾರಿ ನ್ಯಾಯಕ್ಕಾಗಿ ಆಗ್ರಹಿಸಿದ್ದರು. ಈ ಬಗ್ಗೆ ಮಾಹಿತಿ ಪಡೆದುಕೊಂಡ ಡಿಸಿಪಿ ಯುವತಿಯನ್ನು ಕರೆಯಿಸಿಕೊಂಡು ಲಿಖಿತವಾಗಿ ದೂರು ಪಡೆದುಕೊಂಡು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಪೂರ್ಣ ತನಿಖೆ ಬಳಿಕ ಸತ್ಯಾಂಶ ಹೊರಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಡಿಕ್ಷನರಿ ತರಹ ಕಾಣುವ ಮಿನಿಲಾಕರ್​ನಲ್ಲಿ ಡ್ರಗ್ಸ್ ಪತ್ತೆ: ಆರೋಪಿ ಪರಾರಿ

Last Updated : Apr 12, 2023, 7:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.