ETV Bharat / state

ಹಸಿರು ಇಂಧನ ಬಳಕೆಗೆ ಉತ್ತೇಜನ.. ಇವಿ ರ‍್ಯಾಲಿಗೆ ಇಂಧನ ಸಚಿವ ಸುನಿಲ್‌ ಕುಮಾರ್‌ ಚಾಲನೆ - ev rally bangalore

ಇವಿ ರ‍್ಯಾಲಿಗೆ ಚಾಲನೆ ನೀಡುವ ಮೂಲಕ ವಿಧಾನಸೌಧದಿಂದ ಅರಮನೆ ಮೈದಾನದ ಚಾಮರ ವಜ್ರ ಸಭಾಂಗಣದವರೆಗೆ ಇಲೆಕ್ಟ್ರಿಕ್‌ ದ್ವಿಚಕ್ರ ವಾಹನವನ್ನು ಸಚಿವ ಸುನೀಲ್​ಕುಮಾರ್​ ಚಲಾಯಿಸಿದರು.

ev rally bangalore
ಇವಿ ರ್ಯಾಲಿ ಬೆಂಗಳೂರು
author img

By

Published : Jul 2, 2022, 8:42 PM IST

ಬೆಂಗಳೂರು: ಇಂದು ನಗರದಲ್ಲಿ ಇವಿ(ಎಲೆಕ್ಟ್ರಿಕ್​ ವಾಹನ) ಅಭಿಯಾನದ ಭಾಗವಾಗಿ ಬೆಸ್ಕಾಂ ಆಯೋಜಿಸಿದ್ದ ಇವಿ ರ‍್ಯಾಲಿಯನ್ನು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್‌ ಕುಮಾರ್‌ ಅವರು ಉದ್ಘಾಟಿಸಿದರು.

ವಿಧಾನಸೌಧದಿಂದ ಅರಮನೆ ಮೈದಾನದ ಚಾಮರ ವಜ್ರ ಸಭಾಂಗಣದವರೆಗೆ ಇಲೆಕ್ಟ್ರಿಕ್‌ ದ್ವಿಚಕ್ರ ವಾಹನವನ್ನು ಚಲಾಯಿಸುವ ಮೂಲಕ ಸಚಿವರು ಇವಿ ರ‍್ಯಾಲಿಗೆ ಚಾಲನೆ ನೀಡಿದರು. ಸುಮಾರು 300 ಕ್ಕೂ ಹೆಚ್ಚು ಎಲೆಕ್ಟ್ರಿಕ್‌ ವಾಹನಗಳು ಇವಿ ರ‍್ಯಾಲಿಯಲ್ಲಿ ಭಾಗವಹಿಸಿದ್ದವು. ಹಸಿರು ಇಂಧನ ಬಳಕೆ ಕುರಿತು ಜನರಲ್ಲಿ ಅರಿವು ಮೂಡಿಸಲು ಬೆಸ್ಕಾಂ ಇವಿ ರ‍್ಯಾಲಿಯನ್ನು ಹಮ್ಮಿಕೊಂಡಿತ್ತು.

ನಗರದಲ್ಲಿ ಇವಿ ಬಳಕೆಯನ್ನು ಮುಂದಿನ ದಿನಗಳಲ್ಲಿ ಹೆಚ್ಚಿಸಲು ರಾಜ್ಯ ಸರ್ಕಾರ ನಿರಂತರ ಕಾರ್ಯಕ್ರಮಗಳನ್ನು ಹೊಮ್ಮಿಕೊಂಡಿದ್ದು, ಮುಂದಿನ ದಿನಗಳಲ್ಲಿ ಬೆಂಗಳೂರು ದೇಶದ ಇವಿ ರಾಜಧಾನಿಯಾಗಲಿದೆ ಎಂದು ಸಚಿವ ಸುನಿಲ್‌ ಕುಮಾರ್‌ ತಿಳಿಸಿದರು. ಇವಿ ಚಾರ್ಜಿಂಗ್‌ ಸ್ಟೇ಼ಷನ್‌ ನಿರ್ಮಾಣ, ಇವಿ ಉತ್ಪಾದನೆಗೆ ಬೆಂಬಲ, ಬ್ಯಾಟರಿ ತಯಾರಿಕೆ ಘಟಕ ನಿರ್ಮಾಣ ಮುಂತಾದ ಇವಿ ಸಂಬಂಧಿ ಯೋಜನೆಗಳಿಗೆ ರಾಜ್ಯ ಸರಕಾರ ಪ್ರೋತ್ಸಾಹ ನೀಡುತ್ತಿದೆ. ಇವಿ ಬಳಕೆ ದೊಡ್ಡ ಪ್ರಮಾಣದಲ್ಲಿ ಮಾಡುವುದೇ ನಮ್ಮ ಸರ್ಕಾರದ ಮುಖ್ಯ ಆದ್ಯತೆ ಆಗಿದೆ ಎಂದು ಸಚಿವರು ಅಭಿಪ್ರಾಯಪಟ್ಟರು.

ಇಂಧನ ಇಲಾಖೆ ಒಂದು ವಾರದ ಇವಿ ಅಭಿಯಾನ ಆಯೋಜಿಸಿದ್ದು, ಇವಿ ಅಭಿಯಾನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಇಂಧನ ಸಚಿವ ಸುನಿಲ್‌ ಕುಮಾರ್‌ ಅವರು ಶುಕ್ರವಾರ ಉದ್ಘಾಟಿಸಿದರು. ಬೆಸ್ಕಾಂ ಆಯೋಜಿಸಿರುವ ಮೂರು ದಿನಗಳ ಇವಿ ಎಕ್ಸ್ಫೊಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇವಿ ಕೃಷಿ ಸಂಬಂಧಿ ಉಪಕರಣಗಳು ಮತ್ತು ಮಿನಿ ಟ್ರಾಕ್ಟರ್‌ ಗಳನ್ನು ಮಳಿಗೆಯಲ್ಲಿ ಪ್ರದರ್ಶನಕ್ಕಿಡಲಾಗಿದೆ.

ಇದನ್ನೂ ಓದಿ: ಉಪ ರಾಷ್ಟ್ರಪತಿ ಚುನಾವಣೆ: ಎನ್​ಡಿಎ ಅಭ್ಯರ್ಥಿಯಾಗಿ ಕ್ಯಾಪ್ಟನ್​ ಅಮರೀಂದರ್ ಸಿಂಗ್?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.