ಬೆಂಗಳೂರು : ಕೊರೊನಾ ವೈರೆಸ್ ಹಿನ್ನೆಲೆಯಲ್ಲಿ ಇಡೀ ರಾಜ್ಯ ಲಾಕ್‌ಡೌನ್ ಆಗಿದೆ. ನಗರದಲ್ಲಿರುವ ಮಂಗಳಮುಖಿಯರ ಜೀವನೋಪಾಯ ಕಷ್ಟವಾಗಿದೆ. ಈ ಹಿನ್ನೆಲೆ ಸಚಿವ ವಿ ಸೋಮಣ್ಣ ಐವತ್ತಕ್ಕೂ ಹೆಚ್ಚು ಮಂಗಳಮುಖಿಯರಿಗೆ ಉಚಿತ ಆಹಾರ ಸಾಮಾಗ್ರಿ ವಿತರಿಸಿದರು.
ಮೂಡಲಪಾಳ್ಯ ಸರ್ಕಲ್‌ನಲ್ಲಿ ಮಂಗಳಮುಖಿಯರಿಗೆ ಉಚಿತ ಆಹಾರ ಸಾಮಾಗ್ರಿಗಾಗಿ ವಿತರಣೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಸಾಮಾಜಿಕ ಅಂತರಕ್ಕಾಗಿ ಮಾರ್ಕಿಂಗ್ ಹಾಕಿದ್ದರೂ ಜನರು ಗುಂಪು ಗುಂಪಾಗಿ ಸೇರಿದ್ದು ಕಂಡು ಬಂತು. ಇನ್ನೂ ಮಂಗಳಮುಖಿಯರೊಂದಿಗೆ ಸುತ್ತಮುತ್ತಲಿನ ಜನರೂ ಆಹಾರ ಸಾಮಾಗ್ರಿ ಪಡೆಯಲು ಬಂದ ಕಾರಣ ಜನದಟ್ಟಣೆ ಹೆಚ್ಚಾಯಿತು. ಈ ವೇಳೆ ಗುಂಪು ಚದುರಿಸಿ ಜನರನ್ನು ದೂರ ದೂರ ನಿಲ್ಲಿಸಲು ಪೊಲೀಸರು ಹರಸಾಹಸ ಪಟ್ಟರು.