ಬೆಂಗಳೂರು : ಕೆಎಸ್ಆರ್ಟಿಸಿ ಬಸ್ಗಳ ಮೂಲಕ ತಮ್ಮ-ತಮ್ಮ ಸ್ಥಳಗಳಿಗೆ ಹೋಗಲು ಬೆಂಗಳೂರಿನ ಕೇಂದ್ರ ಬಸ್ ನಿಲ್ದಾಣದಲ್ಲಿ ಕಾದಿರುವ "ಕಾರ್ಮಿಕ" ರಿಗೆ Single Fare ದರದಲ್ಲಿ ಹೋಗಲು ಅನುವು ಮಾಡಿಕೊಡಲು ಮುಖ್ಯಮಂತ್ರಿಗಳು ಹಸಿರು ನಿಶಾನೆ ತೋರಿದ್ದಾರೆ ಎಂದು ಸಚಿವ ಸುರೇಶ್ ಕುಮಾರ್ ಟೀಟ್ವ್ ಮಾಡಿದ್ದಾರೆ.
ಸಾರಿಗೆ ಇಲಾಖೆಗೆ ಸಿಎಂ ಬಿಎಸ್ವೈ ಸೂಚನೆ ನೀಡಿದ್ದು, ಒಂದು ಕಡೆಯ ದರವನ್ನ ಮಾತ್ರ ವಿಧಿಸುವಂತೆ ತಿಳಿಸಲಾಗಿದೆ. ಮತ್ತೊಂದು ಕಡೆಯ ದರವನ್ನ ಕಾರ್ಮಿಕ ಇಲಾಖೆ ಭರಿಸಲಿದೆ. ಕಾರ್ಮಿಕರಿಂದ ಡಬಲ್ ದರ ವಸೂಲಿ ಮಾಡುತ್ತಿದ್ದ ಸಾರಿಗೆ ಇಲಾಖೆಗೆ ನಿರ್ದೇಶನ ನೀಡಲಾಗಿದೆ.
ಇಂದು ಯಶವಂತಪುರದ ಬಳಿ ಎಪಿಎಂಸಿ ಕಾರ್ಮಿಕರು ಹಾಗೂ ಮಾಗಡಿ ರಸ್ತೆ ಬಳಿ ಕಟ್ಟಡ ಕಾರ್ಮಿಕರನ್ನು (ಎರಡೂ ಕಡೆ ಹೊರ ರಾಜ್ಯದ ಕಾರ್ಮಿಕರು) ಸಚಿವ ಸುರೇಶ್ ಕುಮಾರ್ ಭೇಟಿ ಮಾಡಿದರು. ಅವರ ಸಮಸ್ಯೆಗಳನ್ನು ಆಲಿಸಿ ವಲಸೆ ಕಾರ್ಮಿಕರನ್ನ ಊರಿಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಿದರು. ಇವರಿಗೆ ಸಮಾಜ ಕಲ್ಯಾಣ ಇಲಾಖೆ ಕಾರ್ಯದರ್ಶಿಗಳಾದ ಕುಮಾರ ನಾಯ್ಕ್ ಸಾಥ್ ನೀಡಿದರು.