ETV Bharat / state

ಖಾಸಗಿ ಶಾಲೆಗಳ ಶುಲ್ಕ ವಿಚಾರ.. ಸಂಬಂಧ ಪಟ್ಟವರಿಗೆ ನೋಟಿಸ್: ಸಚಿವ ಸುರೇಶ್ ಕುಮಾರ್ - Bangalore

ಫೈನಾನ್ಸ್​​ಗಳ ಜೊತೆ ಖಾಸಗಿ ಶಾಲೆಗಳು‌ ಶಾಮೀಲಾಗಿವೆ. ತಾತ್ವಿಕವಾಗಿ ಈ ವಿಚಾರ ಯಾರು ಒಪ್ಪಿಕೊಳ್ಳಲಾಗುತ್ತಿಲ್ಲ. ಎಲ್ಲೂ ಮುಂಚೆ ಕೇಳಿರಲಿಲ್ಲ. ಇದು ಆಗಬಾರದಿತ್ತು ಎಂದು ಸಚಿವ ಸುರೇಶ್ ಕುಮಾರ್ ಹೇಳಿದರು.

Minister Suresh Kumar
ಸಚಿವ ಸುರೇಶ್ ಕುಮಾರ್
author img

By

Published : Jun 12, 2021, 9:59 PM IST

ಬೆಂಗಳೂರು: ಲಾಕ್​​ಡೌನ್ ಜಾರಿಯಲ್ಲಿದ್ದು, ಇನ್ನೂ ಶೈಕ್ಷಣಿಕ ವರ್ಷ ಆರಂಭವಾಗಿಲ್ಲ. ಇಂತಹ ಸಮಯದಲ್ಲಿ ಆನ್​ಲೈ​ನ್ ಕ್ಲಾಸ್ ಮಾಡುವುದಿಲ್ಲ ಎಂದು ಖಾಸಗಿ ಶಾಲೆಗಳು ಬೆದರಿಕೆ ಹಾಕುತ್ತಿವೆ. ಈ ಕೊರೊನಾ ಸಂಕಷ್ಟದ ಕಾಲದಲ್ಲಿಯೂ ಕಂತೆ ಕಂತೆ ಹಣ ಎಲ್ಲಿಂದ ತರೋದು ಎಂದು ಪೋಷಕರು, ವಿದ್ಯಾರ್ಥಿಗಳು ತಮ್ಮ ಅಳಲನ್ನು ಸಾಕಷ್ಟು ಬಾರಿ ತೋಡಿಕೊಂಡಿದ್ದಾರೆ.

ಸಚಿವ ಸುರೇಶ್ ಕುಮಾರ್ ಪ್ರತಿಕ್ರಿಯೆ

ಇದರಿಂದ ಕೊನೆಗೂ ಎಚ್ಚೆತ್ತ ಶಿಕ್ಷಣ ಸಚಿವರು ಖಾಸಗಿ ಶಾಲೆಗಳು ಪೋಷಕರಿಂದ ಹಣ ವಸೂಲಿ ಯಾಕೆ ಮಾಡುತ್ತಿವೆ? ಎನ್ನುವುದರ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ಸಚಿವ ಸುರೇಶ್ ಕುಮಾರ್ ಮಾತನಾಡಿ ಫೈನಾನ್ಸ್​​ಗಳ ಜೊತೆ ಖಾಸಗಿ ಶಾಲೆಗಳು‌ ಶಾಮೀಲಾಗಿವೆ. ತಾತ್ವಿಕವಾಗಿ ಈ ವಿಚಾರ ಯಾರು ಒಪ್ಪಿಕೊಳ್ಳಲಾಗುತ್ತಿಲ್ಲ. ಎಲ್ಲೂ ಮುಂಚೆ ಕೇಳಿರಲಿಲ್ಲ. ಇದು ಆಗಬಾರದಿತ್ತು ಎಂದರು.

ಪೋಷಕರಿಗೆ ಫೈನಾನ್ಸ್ ಸಾಲ ಕೊಡಿಸುತ್ತಿರುವುದು ಗೊತ್ತಾಗಿದ್ದು, ನಿನ್ನೆ ಮುಖ್ಯಮಂತ್ರಿಗಳಿಗೆ ಈ ವಿಚಾರ ತಿಳಿಸಿದ್ದೇನೆ. ಮುಖ್ಯಮಂತ್ರಿ ಯಡಿಯೂರಪ್ಪ ಬಹಳ ನಿಷ್ಠುರವಾಗಿ ಪ್ರತಿಕ್ರಿಯಿಸಿದ್ದಾರೆ. ಪ್ರತಿಕ್ರಿಯಿಸುವುದಕ್ಕಿಂತ ಸಂಬಂಧ ಪಟ್ಟವರಿಗೆ ನೋಟಿಸ್ ಕೊಡುತ್ತೇವೆ. ಕೆಲವೊಂದು‌ ಖಾಸಗಿ ಶಾಲೆಗಳು ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ನಿಟ್ಟಿನಲ್ಲಿ ಗಲಾಟೆ ಮಾಡದೇ ಪೋಷಕರು ಖಾಸಗಿ ಶಾಲೆಗಳು ಕುಳಿತು ಸಮಸ್ಯೆ ಬಗೆಹರಿಸಿಕೊಂಡರೆ ಒಳ್ಳೆಯದು ಎಂದರು.

ಖಾಸಗಿ ಶಾಲೆಗಳಿಂದ ಶುಲ್ಕ ಕಟ್ಟುವಂತೆ ಒತ್ತಾಯ:

ರಾಜಧಾನಿಯಲ್ಲಿ ದಿನಕ್ಕೊಂದರಂತೆ ಖಾಸಗಿ ಶಾಲೆಗಳು ಧನದಾಹಿಯಂತೆ ಪೋಷಕರ ರಕ್ತ ಹೀರಲು ನಿಂತಂತಿದೆ. ಇತ್ತ ಶಿಕ್ಷಣ ಸಚಿವರು ಇದಕ್ಕೆ ಕಡಿವಾಣ ಹಾಕ್ತರಾ? ಇಲ್ವಾ ? ಎಂದು ಪೋಷಕರು ಕಾದು ಕುಳಿತಿದ್ದರು. ಶುಲ್ಕದ ಟಾರ್ಚರ್​​ಗೆ ಅಂತ್ಯ‌ ಹಾಡ್ತಾರ ಶಿಕ್ಷಣ ಸಚಿವರು ಎನ್ನುವ ಅನುಮಾನಕ್ಕೆ ಸಚಿವ ಸುರೇಶ್ ಕುಮಾರ್ ಇಂದು ಪ್ರತಿಕ್ರಿಯಿಸಿ ಸಮಾಧಾನ ನೀಡಿದ್ದಾರೆ. ಖಾಸಗಿ ಫೈನಾನ್ಸ್​​ಗಳ ಜೊತೆ ಖಾಸಗಿ ಶಾಲೆಗಳ ಶಾಮೀಲಿನ ಬಗ್ಗೆಯೂ ಅವರು ಮಾತನಾಡಿದ್ದಾರೆ.

ರಾಜ್ಯದಲ್ಲಿ ಪ್ರತಿ ದಿನ ಖಾಸಗಿ ಶಾಲೆಗಳು ಹಣ ವಸೂಲಿ ಮಾಡುವುದನ್ನೇ ತನ್ನ ಕಾಯಕವೆಂದು ಭಾವಿಸಿರುವ ಹಾಗೆ ಕಾಣುತ್ತಿತ್ತು. ನಿತ್ಯವೂ ಒಂದಲ್ಲ ಒಂದು ಶಾಲೆ ಶುಲ್ಕ ವಿಷಯವಾಗಿ ಸುದ್ದಿಯಾಗುತ್ತಿತ್ತು. ಆದರೆ, ಪೋಷಕರು ಮಾತ್ರ ಈ ಖಾಸಗಿ ಶಾಲೆಗಳ ಶುಲ್ಕ ಹಾವಳಿಯಿಂದ ಬಳಲುತ್ತಿದ್ದರು.

ಅಲ್ಲದೇ ಶುಲ್ಕ ಕಟ್ಟಲಾಗದೇ ಕೆಲವು ಪೋಷಕರು ಮಕ್ಕಳನ್ನ ಶಾಲೆಗೆ ಕಳಿಸುವುದನ್ನೇ ನಿಲ್ಲಿಸಿ ಬಿಡುವ ಹಂತಕ್ಕೆ ಹೋಗಿದ್ದರು. ಒಟ್ಟಿನಲ್ಲಿ ಖಾಸಗಿ ಶಾಲೆಗಳ ಶುಲ್ಕ ವಿಚಾರ ಮುಖ್ಯಮಂತ್ರಿಗಳವರೆಗೂ ಹೋಗಿದೆ. ಇನ್ನು ಶುಲ್ಕದ ಟಾರ್ಚರ್​​ಗೆ ಕಡಿವಾಣ ಬೀಳುವ ‌ಲಕ್ಷಣ ಕಂಡು ಬಂದಿದೆ.

ಓದಿ: ಎಎಸ್​ಐ ವಿರುದ್ಧ ಲಂಚಾವತಾರದ ಬಗ್ಗೆ ಆರೋಪಿಸಿದ್ದ ಉದ್ಯಮಿ ಭರತ್ ಶೆಟ್ಟಿ ವಿರುದ್ಧವೇ ದೂರು..!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.