ETV Bharat / state

ತಾವು ಜನಿಸಿದ ಕೆಸಿ ಜನರಲ್ ಆಸ್ಪತ್ರೆಯಲ್ಲೇ ಲಸಿಕೆ ಪಡೆದ ಸಚಿವ ಸುರೇಶ್ ಕುಮಾರ್ - ಬೆಂಗಳೂರು

ಬೆಂಗಳೂರಿನ ಕೆ‌ಸಿ ಜನರಲ್ ಆಸ್ಪತ್ರೆಯಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಕೋವಿಶೀಲ್ಡ್ ಲಸಿಕೆ ಹಾಕಿಸಿಕೊಂಡಿದ್ದಾರೆ.

Minister Suresh Kumar
ಕೋವಿಡ್ ಲಸಿಕೆ ಪಡೆದ ಸಚಿವ ಸುರೇಶ್ ಕುಮಾರ್
author img

By

Published : Mar 3, 2021, 2:41 PM IST

ಬೆಂಗಳೂರು: ರಾಜ್ಯಾದ್ಯಂತ 2ನೇ ಹಂತದ ಕೋವಿಡ್​ ಲಸಿಕಾ ಅಭಿಯಾನ‌ ನಡೆಯುತ್ತಿದ್ದು, ರಾಜಕೀಯ ರಂಗದ ಹಲವು ನಾಯಕರು ಕೂಡ ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ.

Minister Suresh Kumar
ಜನ್ಮ ದಾಖಲೆಯನ್ನು ವೀಕ್ಷಿಸುತ್ತಿರುವ ಸಚಿವ ಸುರೇಶ್ ಕುಮಾರ್

ಇಂದು ಕೆ‌ಸಿ ಜನರಲ್ ಆಸ್ಪತ್ರೆಯಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಕೋವಿಶೀಲ್ಡ್ ಲಸಿಕೆ ಹಾಕಿಸಿಕೊಂಡಿದ್ದಾರೆ. ಈ ಬಗ್ಗೆ ಸಚಿವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ನಾನು ಹುಟ್ಟಿದ್ದು ಮಲ್ಲೇಶ್ವರದಲ್ಲಿನ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ. ಅದೇ ಆಸ್ಪತ್ರೆಯಲ್ಲಿಯೇ ಇಂದು ಈ ವ್ಯಾಕ್ಸಿನ್ ಪಡೆದಿದ್ದು ನನ್ನ ಅದೃಷ್ಟ ಎಂದು ಬರೆದುಕೊಂಡಿದ್ದಾರೆ.

ಈ ವೇಳೆ ಆಸ್ಪತ್ರೆಯ ಹಳೆಯ ರೆಕಾರ್ಡ್​ನಲ್ಲಿ ಸಚಿವರು ಅವರ ಜನ್ಮ ದಿನದ ಪುಟ ಹುಡುಕಿ ಜನ್ಮ ದಾಖಲೆಯನ್ನು ವೀಕ್ಷಿಸಿದೆ ಎಂದು ತಿಳಿಸಿದ್ದಾರೆ.

ಓದಿ: ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸಚಿವ ಸುರೇಶ​ ಕುಮಾರ ಪಾಠ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.