ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಬಳಿಕ ಮಂತ್ರಿಮಂಡಲದ ಸಚಿವರಿಗೂ ವೈರಸ್ ತಗುಲುತ್ತಿದ್ದು, ಜೆ.ಸಿ.ಮಾಧುಸ್ವಾಮಿ, ನಾರಾಯಣ ಗೌಡ ಬಳಿಕ ಇದೀಗ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ವಿ.ಸುನಿಲ್ ಕುಮಾರ್ ಅವರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿರುವ ಸಚಿವರು, ಸೌಮ್ಯ ಲಕ್ಷಣಗಳೊಂದಿಗೆ ಕೋವಿಡ್ ದೃಢಪಟ್ಟಿದೆ. ತಮ್ಮ ಸಂಪರ್ಕಕ್ಕೆ ಬಂದ ಎಲ್ಲರೂ ಪರೀಕ್ಷೆ ಮಾಡಿಸಿಕೊಳ್ಳಿ, ಸ್ವಯಂ ಐಸೋಲೇಷನ್ ಆಗಿ ಎಂದು ಮನವಿ ಮಾಡಿದ್ದಾರೆ.
-
ನನಗೆ ಇಂದು ಕೋವಿಡ್-19 ಸೋಂಕು ದೃಢಪಟ್ಟಿದೆ.ನನ್ನ ಸಂಪರ್ಕಕ್ಕೆ ಬಂದವರು ದಯವಿಟ್ಟು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ.
— Sunil Kumar Karkala (@karkalasunil) January 14, 2022 " class="align-text-top noRightClick twitterSection" data="
I have tested positive for Covid-19 today with mild symptoms.
I request everyone who have recently come in contact with me to isolate and get themselves tested.
">ನನಗೆ ಇಂದು ಕೋವಿಡ್-19 ಸೋಂಕು ದೃಢಪಟ್ಟಿದೆ.ನನ್ನ ಸಂಪರ್ಕಕ್ಕೆ ಬಂದವರು ದಯವಿಟ್ಟು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ.
— Sunil Kumar Karkala (@karkalasunil) January 14, 2022
I have tested positive for Covid-19 today with mild symptoms.
I request everyone who have recently come in contact with me to isolate and get themselves tested.ನನಗೆ ಇಂದು ಕೋವಿಡ್-19 ಸೋಂಕು ದೃಢಪಟ್ಟಿದೆ.ನನ್ನ ಸಂಪರ್ಕಕ್ಕೆ ಬಂದವರು ದಯವಿಟ್ಟು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ.
— Sunil Kumar Karkala (@karkalasunil) January 14, 2022
I have tested positive for Covid-19 today with mild symptoms.
I request everyone who have recently come in contact with me to isolate and get themselves tested.
ಬೆಂಗಳೂರಿನ 164 ಪೊಲೀಸರಿಗೆ ಕೊರೊನಾ:
ಬೆಂಗಳೂರಿನಲ್ಲಿ ಶುಕ್ರವಾರ ಒಂದೇ ದಿನ 164 ಪೊಲೀಸರಲ್ಲಿ ಕೋವಿಡ್ ಕಾಣಿಸಿಕೊಂಡಿದ್ದು, ಮೂವರು ಚೇತರಿಸಿಕೊಂಡಿದ್ದಾರೆ. ನಗರದಲ್ಲಿ ಈವರೆಗೆ ಇಲಾಖೆಯಲ್ಲಿನ 504 ಸೋಂಕಿತರ ಪೈಕಿ 16 ಮಂದಿ ಗುಣಮುಖರಾಗಿದ್ದಾರೆ. ಕೆಂಪೇಗೌಡನಗರ ಪೊಲೀಸ್ ಠಾಣೆಯಲ್ಲಿ 13 ಹಾಗೂ ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ 15 ಮಂದಿಗೆ ಸೋಂಕು ದೃಢಪಟ್ಟಿದ್ದು, ಎರಡೂ ಠಾಣೆಗಳೀಗೂ ಬಿಬಿಎಂಪಿ ಸಿಬ್ಬಂದಿ ಸ್ಯಾನಿಟೈಸ್ ಮಾಡಿದ್ದಾರೆ.
ನಗರದಲ್ಲಿ 2021ರ ಡಿಸೆಂಬರ್ 28ರಿಂದ ಜನವರಿ 14ರವರೆಗೆ ಕೋವಿಡ್ ನಿಯಮ ಉಲ್ಲಂಘಿಸಿದ 474 ದ್ವಿಚಕ್ರವಾಹನ, 26 ಆಟೋ, 47 ಕಾರುಗಳು ಸೇರಿ ಒಟ್ಟು 547 ವಾಹನಗಳನ್ನು ಜಪ್ತಿ ಮಾಡಲಾಗಿದೆ. ಮಾಸ್ಕ್ ಧರಿಸದ ಬಗ್ಗೆ 33,640 ಪ್ರಕರಣ ದಾಖಲಿಸಿಕೊಂಡು 85,66,250 ರೂ. ದಂಡ ಸಂಗ್ರಹಿಸಲಾಗಿದೆ. ಇಂದು ಒಂದೇ ದಿನ 376 ಕೇಸ್ ದಾಖಲಿಸಿ 88 ಸಾವಿರ ರೂ. ದಂಡ ಸಂಗ್ರಹಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರು: ಬ್ಯಾಂಕ್ ಮ್ಯಾನೇಜರ್‌ಗೆ ಚಾಕು ತೋರಿಸಿ 4 ಲಕ್ಷ ಹಣದೊಂದಿಗೆ ಪರಾರಿ