ಬೆಂಗಳೂರು: ರಾಜ್ಯದಲ್ಲಿ ಕನ್ನಡ ಭಾಷೆಯನ್ನ ಉಳಿಸುವ ದುಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ರಾಜಧಾನಿ ಅನ್ಯ ಭಾಷಿಕರಿಂದ ಕೂಡಿದ್ದು, ಕನ್ನಡ ಮಾತಾಡುವವರನ್ನ ಹುಡುಕುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಈ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕನ್ನಡವನ್ನ ಉಳಿಸುವ, ಬೆಳಸುವ ದೃಷ್ಟಿಯಿಂದ ಹೊಸ ಹೊಸ ಕಾರ್ಯಕ್ರಮವನ್ನು ಹಾಕಿಕೊಂಡಿದೆ.
66ನೇ ಕನ್ನಡ ರಾಜ್ಯೋತ್ಸವದ ಹಿನ್ನಲೆ ʻಕನ್ನಡಕ್ಕಾಗಿ ನಾವುʼ ವಿಶೇಷ ಅಭಿಯಾನದ ಸ್ವಯಂ ಭಾವಚಿತ್ರದ ಕೇಂದ್ರವನ್ನ ನಗರದ ಹಲವು ಮೆಟ್ರೋ ನಿಲ್ದಾಣಗಳಲ್ಲಿ ನಿರ್ಮಿಸಲಾಗಿದೆ.
ಈ ಕೇಂದ್ರಕ್ಕೆ ಇಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ಲಾಲ್ ಬಾಗ್ ಮೆಟ್ರೋ ನಿಲ್ದಾಣದಲ್ಲಿ ಕನ್ನಡ ಅಭಿಯಾನದ ಸ್ವಯಂ ಭಾವ ಚಿತ್ರ ಕೇಂದ್ರ (ಸೆಲ್ಫಿ) ಅನಾವರಣ ಮಾಡಿದರು. ಜೊತೆಗೆ ತಾವು ಈ ಕೇಂದ್ರದ ಮುಂದೆ ನಿಂತು ಫೋಟೋ ತೆಗೆಸಿಕೊಂಡು ಪ್ರಯಾಣಿಕರಿಗೂ ಕನ್ನಡ ಭಾಷೆಯನ್ನ ಬಳಸುವಂತೆ ಮನವಿ ಮಾಡಿದರು.
ಓದಿ: ಕಿತ್ತೂರಿನಲ್ಲಿ ರಾಣಿ ಚೆನ್ನಮ್ಮ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ: ಸಚಿವ ನಿರಾಣಿ