ಬೆಂಗಳೂರು : ಪ್ರತಿ ವರ್ಷ (ಫೆಬ್ರವರಿ 21)ರಂದು ಅಂತಾರಾಷ್ಟ್ರೀಯ ಮಾತೃಭಾಷಾ ದಿನವನ್ನಾಗಿ ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಡಾ. ಸುಧಾಕರ್ ಅವರು, ನಾನು ಮನೆಯಲ್ಲಿ ಕನ್ನಡ ಮಾತನಾಡುವ ಹೆಮ್ಮೆಯ ಕನ್ನಡಿಗ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ವೊಂದನ್ನ ಹಂಚಿಕೊಂಡಿದ್ದಾರೆ.
ಈ ಬಗ್ಗೆ ಫೇಸ್ಬುಕ್ನಲ್ಲಿ ವಿಸ್ತೃತವಾಗಿ ಪೋಸ್ಟ್ ಮಾಡಿರುವ ಸಚಿವರು, ನಾನು ಮನೆಯಲ್ಲಿ ಕನ್ನಡ ಮಾತನಾಡುವ ಹೆಮ್ಮೆಯ ಕನ್ನಡಿಗ. ನಿಮ್ಮ ಮನೆಯಲ್ಲಿ ಯಾವ ಭಾಷೆ ಮಾತನಾಡುತ್ತೀರಿ?, ನಿಮ್ಮ ಮಾತೃಭಾಷೆಯಲ್ಲಿ ಕೆಳಗೆ ಕಾಮೆಂಟ್ ಮಾಡಿ ಎಂದು ಕೇಳಿದ್ದಾರೆ.
ಅಂತಾರಾಷ್ಟ್ರೀಯ ಮಾತೃಭಾಷಾ ದಿನದ ಹಿನ್ನೆಲೆ : ಅಂತಾರಾಷ್ಟ್ರೀಯ ಮಾತೃಭಾಷಾ ದಿನವನ್ನಾಗಿ ಈ ದಿನವನ್ನ ಆಚರಿಸಲು ಕಾರಣ ಅಂದ್ರೆ, ಭಾಷೆಯ ಭಾವುಕತೆ. ಮಾತೃಭಾಷೆಗೆ ಹಲವು ಮಹನೀಯರು ಪ್ರಾಣ ಕೊಟ್ಟಿದ್ದಾರೆ.
ಬಾಂಗ್ಲಾದೇಶಿಯರು ತಮ್ಮ ಮಾತೃಭಾಷೆಗಾಗಿ ಹೋರಾಡಿದ, ಅದಕ್ಕಾಗಿ ಪ್ರಾಣತ್ಯಾಗ ಮಾಡಿದ ಮಹತ್ವದ ದಿನದ ನೆನಪಿಗಾಗಿ ಪ್ರತಿ ವರ್ಷ ಫೆಬ್ರವರಿ 21ರಂದು ಅಂತಾರಾಷ್ಟ್ರೀಯ ಮಾತೃಭಾಷಾ ದಿನವನ್ನಾಗಿ ಆಚರಿಸಲಾಗುತ್ತದೆ. 1999ರಲ್ಲಿ ಈ ದಿನವನ್ನು ಯುನೆಸ್ಕೋ ಗುರುತಿಸಿದೆ.