ETV Bharat / state

ಮೇಲ್ನೋಟಕ್ಕೆ ಹರ್ಷ ಹತ್ಯೆ ಪೂರ್ವ ನಿಯೋಜಿತ ಕೃತ್ಯವಾಗಿ ಕಂಡು ಬರುತ್ತಿದೆ: ಸಚಿವ ಡಾ. ಕೆ ಸುಧಾಕರ್ - ಹರ್ಷ ಹತ್ಯೆ ಕುರಿತು ಸಚಿವ ಡಾ. ಸುಧಾಕರ್​ ಪ್ರತಿಕ್ರಿಯೆ

ಹಿಂದೂ ಕಾರ್ಯಕರ್ತರೊಂದಿಗೆ ನಾನು ಸದಾ ಬೆಂಬಲವಾಗಿ ನಿಲ್ಲುತ್ತೇನೆ. ಇಲ್ಲಿ ಒಂದು ಕಡೆ ರಾಷ್ಟ್ರೀಯವಾದ, ಮತ್ತೊಂದೆಡೆ ಮೂಲಭೂತವಾದ ಕಾಣಿಸುತ್ತಿದೆ ಎಂದು ಸಚಿವ ಡಾ. ಕೆ ಸುಧಾಕರ್ ತಿಳಿಸಿದ್ದಾರೆ.

minister-sudhakar
ಸಚಿವ ಡಾ. ಕೆ ಸುಧಾಕರ್
author img

By

Published : Feb 21, 2022, 9:07 PM IST

ಬೆಂಗಳೂರು: ಹಿಂದೂ ಧರ್ಮಕ್ಕಾಗಿ ಕೆಲಸ ಮಾಡಿದ ಬಜರಂಗದಳದ ಕಾರ್ಯಕರ್ತ ಹರ್ಷ ಅವರ ಬರ್ಬರ ಹತ್ಯೆ ಪೂರ್ವ ನಿಯೋಜಿತ ಕೃತ್ಯ ಎಂದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಇದರಲ್ಲಿ ಭಾಗಿಯಾದವರ ವಿರುದ್ಧ ರಾಜ್ಯ ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ವಹಿಸಲಿದೆ ಎಂದು ಸಚಿವ ಡಾ. ಕೆ ಸುಧಾಕರ್ ತಿಳಿಸಿದರು.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಈ ದುಷ್ಕೃತ್ಯದಲ್ಲಿ ಭಾಗಿಯಾದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ವಹಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡುತ್ತೇನೆ. ಇಂತಹ ಘಟನೆಗಳಿಂದ ಹಿಂದೂ ಕಾರ್ಯಕರ್ತರಲ್ಲಿ ಆತಂಕ ಉಂಟಾಗುತ್ತದೆ.

ಸಚಿವ ಡಾ. ಕೆ ಸುಧಾಕರ್ ಮಾತನಾಡಿದರು

ಕೆಲ ವರ್ಷಗಳಿಂದ ದೇಶದಲ್ಲಿ ಹಿಂದೂ ಕಾರ್ಯಕರ್ತರನ್ನು ಪೂರ್ವ ನಿಯೋಜಿತವಾಗಿ ಕೊಲೆ ಮಾಡಲಾಗುತ್ತಿದೆ. ಇಂತಹ ಕೊಲೆಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇದಕ್ಕೆ ಯಾರೇ ಕಾರಣರಾಗಿದ್ದರೂ ಅಥವಾ ಯಾವುದೇ ಸಂಘಟನೆಯಾದರೂ ಕ್ರಮ ಕೈಗೊಳ್ಳಲೇಬೇಕು ಎಂದು ಸ್ಪಷ್ಟಪಡಿಸಿದರು.

ಹಿಂದೂ ಕಾರ್ಯಕರ್ತರೊಂದಿಗೆ ನಾನು ಸದಾ ಬೆಂಬಲವಾಗಿ ನಿಲ್ಲುತ್ತೇನೆ. ಇಲ್ಲಿ ಒಂದು ಕಡೆ ರಾಷ್ಟ್ರೀಯವಾದ, ಮತ್ತೊಂದೆಡೆ ಮೂಲಭೂತವಾದ ಕಾಣಿಸುತ್ತಿದೆ. ದೇಶದಲ್ಲಿ ಅಶಾಂತಿ ನೆಲೆಸಲು ಬೇರೆ ದೇಶದವರ ಕುಮ್ಮಕ್ಕು ಕೂಡ ಇದೆ ಎಂದೂ ಅನ್ನಿಸುತ್ತಿದೆ. ಈ ಬಗ್ಗೆ ಗೃಹ ಸಚಿವರಿಗೆ ಮನವಿ ಮಾಡಿ, ಇಂತಹ ಘಟನೆಗೆ ಕಾರಣರಾದವರ ವಿರುದ್ಧ ಕ್ರಮ ವಹಿಸಬೇಕು ಹಾಗೂ ಇನ್ನು ಮುಂದೆ ಇಂತಹ ಘಟನೆ ನಡೆಯದಂತೆ ತಡೆಯಬೇಕು ಎಂದು ಕೋರುತ್ತೇನೆ ಎಂದರು.

ಈ ಘಟನೆಯಿಂದ ಮನಸ್ಸಿಗೆ ಬಹಳ ನೋವಾಗಿದೆ. ಹತ್ಯೆಗೀಡಾದ ಯುವಕನ ಮನೆಯವರು ಈ ದುಃಖವನ್ನು ಹೇಗೆ ಭರಿಸಲು ಸಾಧ್ಯ ಎಂದು ಆಲೋಚಿಸಿ ಬಹಳ ನೋವುಂಟಾಗಿದೆ. ಈ ನೊಂದ ಕುಟುಂಬದೊಂದಿಗೆ ಸರ್ಕಾರ ನಿಂತಿದೆ. ಯಾವುದೇ ಹಿಂದೂ ಸಂಘಟನೆಗಳ ಕಾರ್ಯಕರ್ತರು ಆತಂಕ ಪಡಬೇಕಿಲ್ಲ.

ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು: ಎಲ್ಲ ಧರ್ಮಗಳಂತೆ ನಮ್ಮ ಹಿಂದೂ ಧರ್ಮವನ್ನೂ ರಕ್ಷಣೆ ಮಾಡುತ್ತೇವೆ. ಈ ಘಟನೆಯಿಂದಾಗಿ ಜನರು ಬೀದಿಗೆ ಬರುತ್ತಿದ್ದಾರೆ. ಆದರೆ, ಯಾರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಸರ್ಕಾರ ಎಲ್ಲರ ರಕ್ಷಣೆಗೆ ಬದ್ಧವಾಗಿದೆ. ಪ್ರತಿಭಟನಾಕಾರರು ಶಾಂತಿಯನ್ನು ಕಾಪಾಡಿಕೊಂಡು ಹೋರಾಟ ಮಾಡಬೇಕು ಎಂದು ಕೋರಿದರು. ಹಿರಿಯ ನಾಯಕರು ಇಂತಹ ಸಮಯದಲ್ಲಿ ಬೇಜವಾಬ್ದಾರಿ ಹೇಳಿಕೆ ನೀಡಬಾರದು. ನೊಂದ ಕುಟುಂಬಕ್ಕೆ ಮನೋಸ್ಥೈರ್ಯ ತುಂಬುವ ಕೆಲಸವನ್ನು ಪಕ್ಷಾತೀತವಾಗಿ ಮಾಡಬೇಕು.

ಆದರೆ, ಇದರಲ್ಲೂ ರಾಜಕೀಯ ಮಾಡಿದರೆ ಅದು ಹೇಯ ಕೃತ್ಯ. ಬಿಜೆಪಿ ರಾಷ್ಟ್ರೀಯ ಪಕ್ಷವಾಗಿದ್ದು, ಇದು ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಸಂಘಟನೆ. ಯಾವುದೇ ಕಾರಣಕ್ಕೂ ನಮ್ಮ ಪಕ್ಷ ಸಮಾಜದಲ್ಲಿ ವಿಷಬೀಜ ಬಿತ್ತುವ ಕೆಟ್ಟ ಪ್ರವೃತ್ತಿಯನ್ನು ಎಂದೂ ಮಾಡುವುದಿಲ್ಲ ಎಂದು ಸಚಿವ ಸುಧಾಕರ ಹೇಳಿದ್ದಾರೆ.

ಓದಿ: ಕೊಲೆ ಆರೋಪಿಗಳಲ್ಲಿ ಮೂವರು ಶಿವಮೊಗ್ಗದವರು, ಇಬ್ಬರ ಬಗ್ಗೆ ಶೋಧ ನಡೆಯುತ್ತಿದೆ : ಗೃಹ ಸಚಿವ ಆರಗ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.