ETV Bharat / state

ಕೊರೊನಾ ವಾರಿಯರ್​​ ಪುರಸ್ಕಾರ ಸ್ವೀಕರಿಸಿದ ಸಚಿವ ಸುಧಾಕರ್​​! - Covid 19 Warrior 'Award

ವಿಧಾನಸೌಧದಲ್ಲಿ ಫೋರಂ ಪ್ರತಿನಿಧಿಯಿಂದ ಕೊರೊನಾ ವಾರಿಯರ್ ಪುರಸ್ಕಾರವನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಸ್ವೀಕರಿಸಿದರು.

Covid 19 Warrior 'Award
ಕೋವಿಡ್ -19 ವಾರಿಯರ್ ಪುರಸ್ಕಾರ ಸ್ವೀಕರಿಸಿದ ಸಚಿವ ಸುಧಾಕರ್
author img

By

Published : May 14, 2020, 10:34 PM IST

ಬೆಂಗಳೂರು: ಸಿಎಸ್ಆರ್ ಟೈಮ್ಸ್, ಇಂಡಿಯಾ ಅಚೀವರ್ಸ್ ಫೋರಂ ವತಿಯಿಂದ ಇಂದು ನೀಡಲಾಗಿರುವ 'ಕೊರೊನಾ ವಾರಿಯರ್' ಪುರಸ್ಕಾರವನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಸ್ವೀಕರಿಸಿದರು.

ವಿಧಾನಸೌಧದಲ್ಲಿ ಫೋರಂ ಪ್ರತಿನಿಧಿಯಿಂದ ಪುರಸ್ಕಾರ ಸ್ವೀಕರಿಸಿದ ಸಚಿವರು, ಈ ಪುರಸ್ಕಾರವನ್ನು ಅತ್ಯಂತ ವಿನಮ್ರತೆಯಿಂದ ಸ್ವೀಕರಿಸುತ್ತಿದ್ದೇನೆ. ರಾಜ್ಯದಲ್ಲಿ ಕೊರೊನಾ ಎದುರಿಸುವ ನಿಟ್ಟಿನಲ್ಲಿ ನಮ್ಮ ಪ್ರಯತ್ನಗಳನ್ನು ಪರಿಗಣಿಸಿ ಈ ಗೌರವ ನೀಡಲಾಗಿದ್ದು, ಮತ್ತಷ್ಟು ಹೆಚ್ಚು ಪರಿಶ್ರಮದಿಂದ ಕಾರ್ಯನಿರ್ವಹಿಸಲು ಪ್ರೇರಣೆ ನೀಡುತ್ತಿದೆ ಎಂದು ಟ್ವೀಟ್ ಮೂಲಕ ಸಂತಸ ಹಂಚಿಕೊಂಡಿದ್ದಾರೆ.

ಲಾಕ್​ಡೌನ್ ಪರಿಸ್ಥಿತಿಯಲ್ಲಿ ನಷ್ಟ ಅನುಭವಿಸಿರುವ ರೈತರಿಗೆ ನೆರವಾಗಲು, ಸಿಎಂ ಬಿ.ಎಸ್‌.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯು 50,083 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ತರಕಾರಿ ರೈತರಿಗೆ, 41,054 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಹಣ್ಣು ಬೆಳೆಗಾರರಿಗೆ ಪ್ರತೀ ಹೆಕ್ಟೇರ್​​ಗೆ 15,000 ರೂ.ನಂತೆ ಪರಿಹಾರ ನೀಡಲು ಅನುಮೋದಿಸಿದೆ. ಇದರಿಂದ ರೈತರಿಗೆ ಅನುಕೂಲ ಆಗಲಿದೆ ಎಂದು ಟ್ವೀಟ್ ಮಾಡಿದ್ದಾರೆ.

ಸುಮಾರು 8 ಕೋಟಿ ವಲಸೆ ಕಾರ್ಮಿಕರಿಗೆ 2 ತಿಂಗಳ ಉಚಿತ ಆಹಾರ ಧಾನ್ಯ, ಬೀದಿಬದಿ ವ್ಯಾಪಾರಿಗಳಿಗೆ ನೆರವು ಸೇರಿದಂತೆ ಪ್ರಧಾನಿ ಮೋದಿಯವರ ಆತ್ಮ ನಿರ್ಭರ ಭಾರತ ಅಭಿಯಾನ ಪ್ಯಾಕೇಜಿನ ವಿವರಗಳನ್ನು ಇಂದಿನ 2ನೇ ಸುದ್ದಿಗೋಷ್ಠಿಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮ್ ಪ್ರಕಟಿಸಿದ್ದು, ಸಂಕಷ್ಟ ಎದುರಿಸುತ್ತಿರುವ ಜನರಿಗೆ ಸಹಾಯವಾಗಲಿದೆ ಎಂದು ಸಚಿವ ಸುಧಾಕರ್ ಟ್ವೀಟ್ ಮಾಡಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪ್ರತಿ ದಶಲಕ್ಷ ಜನಸಂಖ್ಯೆಗೆ 4110 ಕೋವಿಡ್ ಪರೀಕ್ಷೆ ಮಾಡಲಾಗುತ್ತಿದೆ. ನಮ್ಮ ರಾಜ್ಯದಲ್ಲೇ ಎರಡನೇ ಅತಿ ಹೆಚ್ಚು ಪರೀಕ್ಷೆ ಇಲ್ಲಿ ನಡೆಸಲಾಗುತ್ತಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಪರೀಕ್ಷೆ ನಂತರವೂ ಸಕಾರಾತ್ಮಕ ದರ 0.5% ಇದೆ. ಅಂದರೆ ಪ್ರತಿ 200 ಪರೀಕ್ಷೆಗಳಿಗೆ ಕೇವಲ 1 ಪ್ರಕರಣ ಪತ್ತೆಯಾಗುತ್ತಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲೆಯ ಕೋವಿಡ್ ನಿರ್ವಹಣೆಯನ್ನು ಸಮರ್ಥನೆ ಮಾಡಿಕೊಂಡು‌ ಸಚಿವ ಸುಧಾಕರ್ ಟ್ವೀಟ್ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.