ETV Bharat / state

ಇಂದು ರಾಜ್ಯಕ್ಕೆ 7.95 ಲಕ್ಷ ವಯಲ್ಸ್ ಕೋವಿಶೀಲ್ಡ್ ಲಸಿಕೆ: ಸಚಿವ ಡಾ.ಕೆ.ಸುಧಾಕರ್ - ಮೊದಲ ಹಂತಲ್ಲಿ ಕೊರೊನಾ ವಾರಿಯರ್ಸ್​ಗೆ ಕೋವಿಡ್ ಲಸಿಕೆ

ಡಿವಿಜಿಐ ಕೋವಿಶೀಲ್ಡ್ ಗೆ ಪರವಾನಗಿ ಕೊಟ್ಟಿರುವ ಕಾರಣ ಕೇಂದ್ರ ಸರ್ಕಾರ ಒಟ್ಟು 1.1 ಕೋಟಿ ಡೋಸೇಜ್ ಖರೀದಿ ಮಾಡಿದೆ. ಇಡೀ ಜಗತ್ತಿನಲ್ಲಿ ಲಸಿಕೆಗೆ ಇಷ್ಟು ಕಡಿಮೆ ದರ ನಿಗದಿ ಮಾಡಿರುವ ಬೇರೆ ದೇಶವಿಲ್ಲ. ಕೇವಲ 210 ರೂ.ಗೆ ಒಂದು ಡೋಸೇಜ್ ಅನ್ನು ಪುಣೆಯ ಇನ್ಸಿಟ್ಯೂಟ್​ ಆಫ್ ಸಿರಂನಿಂದ ಖರೀದಿ ಮಾಡುತ್ತಿದೆ. ಅದರಲ್ಲಿ 10 ರೂ.ಜಿಎಸ್​ಟಿ ಕೂಡ ಸೇರಿದೆ ಎಂದು ಸಚಿವ ಸುಧಾಕರ ತಿಳಿಸಿದ್ದಾರೆ.

ಡಾ.ಕೆ.ಸುಧಾಕರ್
ಡಾ.ಕೆ.ಸುಧಾಕರ್
author img

By

Published : Jan 12, 2021, 12:06 PM IST

Updated : Jan 12, 2021, 1:07 PM IST

ಬೆಂಗಳೂರು: ಜನವರಿ 16 ರಿಂದ ರಾಜ್ಯದಲ್ಲಿ ಕೊರೊನಾ ಲಸಿಕೆ ನೀಡುವ ಪ್ರಕ್ರಿಯೆ ಆರಂಭಗೊಳ್ಳಲಿದ್ದು, ಇಂದು ಮಧ್ಯಾಹ್ನ 12 ಗಂಟೆಗೆ 7.95 ಲಕ್ಷ ವಯಲ್ಸ್ (ಬಾಟಲ್) ಕೋವಿಶೀಲ್ಡ್ ಲಸಿಕೆ ನಮ್ಮ ಸಂಗ್ರಹಗಾರಕ್ಕೆ ಬರಲಿದೆ. ಇದನ್ನು ಮಾರಾಟ ಮಾಡುವಂತಿಲ್ಲ ಎಂದು ವಯಲ್ಸ್ ಮೇಲೆಯೇ ಬರೆಯಲಾಗಿದ್ದು ಕೇವಲ ಕೊರೊನಾ ವಾರಿಯರ್ಸ್​ಗೆ ಮಾತ್ರ ಮೀಸಲಾಗಿರಲಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.

ಸದಾಶಿವನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿವಿಜಿಐ ಕೋವಿಶೀಲ್ಡ್ ಗೆ ಪರವಾನಗಿ ಕೊಟ್ಟಿರುವ ಕಾರಣ ಕೇಂದ್ರ ಸರ್ಕಾರ ಒಟ್ಟು 1.1 ಕೋಟಿ ಡೋಸೇಜ್ ಖರೀದಿ ಮಾಡಿದೆ. ಇಡೀ ಜಗತ್ತಿನಲ್ಲಿ ಲಸಿಕೆಗೆ ಇಷ್ಟು ಕಡಿಮೆ ದರ ನಿಗದಿ ಮಾಡಿರುವ ಬೇರೆ ದೇಶವಿಲ್ಲ. ಕೇವಲ 210 ರೂ.ಗೆ ಒಂದು ಡೋಸೇಜ್ ಅನ್ನು ಪುಣೆಯ ಇನ್ಸಿಟ್ಯೂಟ್​ ಆಫ್ ಸಿರಂನಿಂದ ಖರೀದಿ ಮಾಡುತ್ತಿದೆ. ಅದರಲ್ಲಿ 10 ರೂ.ಜಿಎಸ್​ಟಿ ಕೂಡ ಸೇರಿದೆ ಎಂದರು.

ಒಟ್ಟು 231 ಕೋಟಿ ರೂ. ವೆಚ್ಚದಲ್ಲಿ ಲಸಿಕೆ ಖರೀದಿ ಮಾಡುತ್ತಿದ್ದು, ಪ್ರತಿಯೊಂದು ಡೋಸ್ ಕೂಡ 0.5 ಎಂಎಲ್ ಇರಲಿದೆ. ಒಂದು ವಯಲ್ಸ್ ವ್ಯಾಕ್ಸಿನ್ ನಲ್ಲಿ ಹತ್ತು ಜನರಿಗೆ ಕೊಡಬಹುದು. ಅಂದರೆ ಒಂದು ವಯಲ್​​​​​ನಲ್ಲಿ 5 ಎಂಎಲ್ ಇರಲಿದೆ. ಮೊದಲ ಡೋಸೇಜ್ ಪಡೆದು 28 ದಿನ ಆದ ನಂತರ ಎರಡನೇ ಡೋಸೇಜ್ ತೆಗೆದುಕೊಳ್ಳಬೇಕು. ಈ ಲಸಿಕೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಸೋಂಕಿನ ವಿರುದ್ಧ ಹೋರಾಡುವ ಶಕ್ತಿ ಮಾನವನ ದೇಹಕ್ಕೆ ಬರಲಿದೆ ಎಂದರು.ಇದು ಸಂಪೂರ್ಣ ಸುರಕ್ಷಿತವಾಗಿದೆ ಎಂದು ಮತ್ತೊಮ್ಮೆ ಜನರಲ್ಲಿ ವಿಶ್ವಾಸ ಮೂಡಿಸುವ ಕೆಲಸವಾಗಬೇಕಿದೆ. ಯಾರೂ ಭಯ - ಆತಂಕ ಪಡಬೇಕಾಗಿಲ್ಲ ಹಾಗೂ ಈ ಲಸಿಕೆಯ ಮೇಲೆ ಇದು ಮಾರಾಟಕ್ಕಲ್ಲ ಎಂದು ಬರೆಯಲಾಗಿದೆ. ಜನಸಾಮಾನ್ಯರು ಇದನ್ನು ಖರೀದಿಸುವಂತಿಲ್ಲ. ಆರಂಭದಲ್ಲಿ ಕೊರೊನಾ ವಾರಿಯರ್ಸ್‌ ಗೆ ಮಾತ್ರ ವ್ಯಾಕ್ಸಿನ್ ಕೊಡಲಾಗುತ್ತದೆ. ಎರಡನೇ ಹಂತದಲ್ಲಿ 50 ವರ್ಷದ ಮೇಲ್ಪಟ್ಟವರಿಗೆ ಹಾಗೂ ಮೂರನೇ ಹಂತದಲ್ಲಿ ಜನ ಸಮಾನ್ಯರಿಗೆ ಕೊಡಲಾಗುತ್ತದೆ ಎಂದರು.ಈಗಾಗಲೇ ಲಸಿಕೆ ನೀಡುವ ಕುರಿತು ಕೇಂದ್ರ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ.‌ ಕಂಪನಿ ಮತ್ತು ನಮ್ಮ ವ್ಯವಸ್ಥೆಯಲ್ಲಿ ಯಾರಿಗಾದರೂ ಸಣ್ಣ ಅಡ್ಡಪರಿಣಾಮ ಆದರೂ ಅದನ್ನು ಕೂಡ ದಾಖಲಿಸಿಕೊಳ್ಳಬೇಕು. ಎಲ್ಲವೂ ಕೂಡ ದಾಖಲೆಗಳ ರೀತಿಯಲ್ಲಿ ಆಗಲಿದೆ. ಎಷ್ಟು ಜನ ಡೋಸೇಜ್ ಪಡೆಯಲಿದ್ದಾರೆ ಎನ್ನುವ ಎಲ್ಲ ಮಾಹಿತಿಯನ್ನು ಸಂಗ್ರಹ ಮಾಡಲಿದೆ. ಲಸಿಕೆ ಪಡೆದವರು ಅರ್ಧಗಂಟೆ ನಿಗಾದಲ್ಲಿ ಇರಬೇಕಾಗಿದೆ. ಈ ವೇಳೆ ಯಾರಿಗಾದರೂ ಸಣ್ಣ ಅಡ್ಡಪರಿಣಾಮ ಆದರೂ ಕೂಡ ಅದಕ್ಕೆ ಬೇಕಾದ ಚಿಕಿತ್ಸೆಗೆ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಆದರೆ ಇಲ್ಲಿಯವರೆಗೂ ನಮಗೆ ಇರುವ ಮಾಹಿತಿಯ ಪ್ರಕಾರ ಕ್ಲಿನಿಕಲ್ ಟ್ರಯಲ್ ಆಗಿರುವ ಕಡೆ ಸಂಪೂರ್ಣ ಸುರಕ್ಷಿತ ಎಂದು ಮಾಹಿತಿ ಬಂದಿದೆ ಹಾಗಾಗಿ ಜನರು ಯಾವುದಕ್ಕೂ ಹೆದರಬೇಕಿಲ್ಲ ಎಂದರು.ಇಂದು ಮಧ್ಯಾಹ್ನ 12 ಗಂಟೆಗೆ 7.95 ಲಕ್ಷ ವಯಲ್ಸ್ ಕೋವಿಶೀಲ್ಡ್ ಬರಲಿದೆ. ಉಳಿದದ್ದು ಸದ್ಯದಲ್ಲೇ ಮತ್ತೆ ಬರಲಿದೆ 2ನೇ ಹಂತದಲ್ಲಿ ಯಾವಾಗ ಬರಲಿದೆ ಎಂದು ಮತ್ತೆ ತಿಳಿಸಲಾಗುತ್ತದೆ. ಸದ್ಯ ಆನಂದರಾವ್ ವೃತ್ತದಲ್ಲಿರುವ ಕೇಂದ್ರ ಲಸಿಕೆ ಸಂಗ್ರಹಗಾರದಲ್ಲಿ ಲಸಿಕೆಯನ್ನು ಶೇಖರಣೆ ಮಾಡಲಾಗುತ್ತದೆ ಎಂದರು.

Last Updated : Jan 12, 2021, 1:07 PM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.