ETV Bharat / state

ಸೆಮಿ ಲಾಕ್​ಡೌನ್ ಮಾಡುವಂತೆ ಆವತ್ತು ಸಚಿವ ಸುಧಾಕರ್ ಹೇಳಿದಾಗ ಮಂತ್ರಿಗಳು ನಕ್ಕರು... ಇಂದು ರಾಜ್ಯವೇ ಅಳುತ್ತಿದೆ...! - ಕೋವಿಡ್ ಎರಡನೇ ಅಲೆ

ಅವತ್ತು ಸಭೆಯಲ್ಲಿ ತಾಂತ್ರಿಕ ಸಲಹಾ ಸಮಿತಿ ನೀಡಿದ್ದ ವರದಿಯನ್ನು ಮುಂದಿಟ್ಟ ಸುಧಾಕರ್, ಕೋವಿಡ್ ಎರಡನೇ ಅಲೆಯ ರಕ್ಕಸ ಪರಿಣಾಮಗಳ ವಿವರ ನೀಡಿದರು. ಕೋವಿಡ್ ಸೋಂಕಿನ ಎರಡನೇ ಅಲೆ ಭಯಾನಕವಾಗಿರಲಿದ್ದು, ಇದನ್ನು ತಡೆಗಟ್ಟಲು ತಕ್ಷಣವೇ ಸೆಮಿ ಲಾಕ್​ಡೌನ್ ಜಾರಿಗೆ ತರಬೇಕು. ಅನಿವಾರ್ಯ ಸಂದರ್ಭಗಳನ್ನು ಹೊರತುಪಡಿಸಿದಂತೆ ಜನರ ಓಡಾಟವನ್ನು ನಿರ್ಬಂಧಿಸಬೇಕು ಎಂದಿದ್ದರು.

minister-sudhakar-had-warned-about-second-wave-of-corona

author img

By

Published : Apr 26, 2021, 7:21 PM IST

ಬೆಂಗಳೂರು: ಮಾರಕ ಕೋವಿಡ್ ಸೋಂಕನ್ನು ತಡೆಗಟ್ಟಲು ಸೆಮಿ ಲಾಕ್​ಡೌನ್ ಮಾಡುವಂತೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅಂದು ಸಲಹೆ ನೀಡಿದ್ದಾಗ, ಅವತ್ತು ಬಹುತೇಕ ಮಂತ್ರಿಗಳು ನಕ್ಕರು. ಆದರೆ ಇಂದು ರಾಜ್ಯ ಅಳುತ್ತಿದೆ!

ಹೌದು, ಈ ಮಾತನ್ನು ಖುದ್ದು ಮುಖ್ಯಮಂತ್ರಿಗಳೇ ಇಂದು ಪದೇ ಪದೆ ನೆನಪಿಸಿಕೊಳ್ಳುತ್ತಿದ್ದಾರೆ. ಅಂದ ಹಾಗೆ ಕೋವಿಡ್ ಸೋಂಕಿಗೆ ಸಂಬಂಧಿಸಿದಂತೆ ಮಾರ್ಚ್ ಮೊದಲ ವಾರ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು. ಈ ಸಭೆಯಲ್ಲಿ ಆರೋಗ್ಯ ಸಚಿವ ಸುಧಾಕರ್ ಸೇರಿದಂತೆ ಉಪಮುಖ್ಯಮಂತ್ರಿಗಳು ಮತ್ತು ಹಲವು ಪ್ರಮುಖ ಸಚಿವರು ಭಾಗವಹಿಸಿದ್ದರು. ಈ ಸಭೆಯಲ್ಲಿ ತಾಂತ್ರಿಕ ಸಲಹಾ ಸಮಿತಿಯ ಪ್ರಮುಖರು ಕೂಡಾ ಭಾಗವಹಿಸಿದ್ದರು.

ಅವತ್ತು ಸಭೆಯಲ್ಲಿ ತಾಂತ್ರಿಕ ಸಲಹಾ ಸಮಿತಿ ನೀಡಿದ್ದ ವರದಿಯನ್ನು ಮುಂದಿಟ್ಟ ಸುಧಾಕರ್, ಕೋವಿಡ್ ಎರಡನೇ ಅಲೆಯ ರಕ್ಕಸ ಪರಿಣಾಮಗಳ ವಿವರ ನೀಡಿದರು. ಕೋವಿಡ್ ಸೋಂಕಿನ ಎರಡನೇ ಅಲೆ ಭಯಾನಕವಾಗಿರಲಿದ್ದು, ಇದನ್ನು ತಡೆಗಟ್ಟಲು ತಕ್ಷಣವೇ ಸೆಮಿ ಲಾಕ್​ಡೌನ್ ಜಾರಿಗೆ ತರಬೇಕು. ಅನಿವಾರ್ಯ ಸಂದರ್ಭಗಳನ್ನು ಹೊರತುಪಡಿಸಿದಂತೆ ಜನರ ಓಡಾಟವನ್ನು ನಿರ್ಬಂಧಿಸಬೇಕು. ಚಿತ್ರಮಂದಿರಗಳ ಪ್ರವೇಶಾತಿ ಶೇ. 50ಕ್ಕೆ ಕುಗ್ಗಿಸಬೇಕು, ಜಿಮ್, ಪಬ್, ಮಾಲ್​ಗಳನ್ನು ಬಂದ್ ಮಾಡಬೇಕು. ಉತ್ಪಾದಕ ವಲಯವನ್ನು ಬಿಟ್ಟು ಉಳಿದಂತೆ ಎಲ್ಲವುಗಳಿಗೂ ನಿರ್ಬಂಧ ಹೇರಬೇಕು. ನಾವು ತಕ್ಷಣ ಈ ಕೆಲಸ ಮಾಡದಿದ್ದರೆ ಕೋವಿಡ್ ಎರಡನೇ ಅಲೆ ಮಾರಣಾಂತಿಕ ಹೊಡೆತ ನೀಡುತ್ತದೆ. ಮೊದಲ ಅಲೆಯ ಪೀಕ್ ಹಂತದಲ್ಲಿ ದಿನವೊಂದಕ್ಕೆ ನಾಲ್ಕೂವರೆ ಸಾವಿರ ಮಂದಿಗೆ ಸೋಂಕು ತಗಲುತ್ತಿತ್ತು. ಆದರೆ ಈಗ ದಿನವೊಂದಕ್ಕೆ ಮೂವತ್ತೈದರಿಂದ ನಲವತ್ತೈದು ಸಾವಿರ ಮಂದಿಗೆ ಸೋಂಕು ತಗಲುವ ಸಾಧ್ಯತೆಗಳಿವೆ. ಇದನ್ನು ತಡೆಗಟ್ಡಲು ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸಚಿವ ಸುಧಾಕರ್ ಹೇಳಿದ್ದರು.

ಅವರ ಮಾತಿಗೆ ಪೂರಕವಾಗಿ ಸಭೆಯಲ್ಲಿದ್ದ ವೈರಾಲಜಿ ತಜ್ಞ ರವಿ ಅವರಿಂದಲೂ ಸುಧಾಕರ್ ಮಾಹಿತಿ ಕೊಡಿಸಿದರು.

ಆದರೆ, ಸುಧಾಕರ್ ಮಾತಿಗೆ ಸಭೆಯಲ್ಲೇ ತಿರುಗಿ ಬಿದ್ದ ಹಲವು ಮಂತ್ರಿಗಳು ಯಾವ ಕಾರಣಕ್ಕೂ ಈ ಸಲಹೆ ಒಪ್ಪುವುದು ಬೇಡ ಎಂದು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಿದ್ದರು. ಇವತ್ತು ನಾವು ಕೋವಿಡ್ ಜತೆ ಬದುಕುವುದನ್ನು ಅಭ್ಯಾಸ ಮಾಡಿಕೊಳ್ಳಲೇಬೇಕು. ಹೀಗಾಗಿ ಇದಕ್ಕೆ ಅಂಜುತ್ತಾ ಕೂರಲು ಸಾಧ್ಯವಿಲ್ಲ. ಚಿತ್ರಮಂದಿರಗಳ ಪ್ರವೇಶಾವಕಾಶ ಕಡಿತ ಮಾಡಿದರೆ ಕನ್ನಡ ಚಿತ್ರಗಳನ್ನು ಕೊಲೆ ಮಾಡಿದಂತಾಗುತ್ತದೆ. ಹಾಗೆ ಮಾಡಿದರೆ ಚಿತ್ರರಂಗವನ್ನು ನಂಬಿ ಬದುಕಿದವರು ಬೀದಿಗೆ ಬೀಳಬೇಕಾಗುತ್ತದೆ ಎಂದು ಬೆಂಗಳೂರಿನ ನಾಯಕರೊಬ್ಬರು ಅಬ್ಬರಿಸಿದ್ದರು.

ಇದೇ ರೀತಿ ಬಹುತೇಕ ಮಂತ್ರಿಗಳು ಸೆಮಿ‌ ಲಾಕ್​ಡೌನ್ ಪ್ರಸ್ತಾಪವೇ ಅಪ್ರಸ್ತುತ ಎಂದು ಸಭೆಯಲ್ಲಿ ವ್ಯಂಗ್ಯವಾಡಿದರು. ತಾಂತ್ರಿಕ ಸಲಹಾ ಸಮಿತಿಯ ಮಾತುಗಳು ಹಿಂದಿನಿಂದಲೂ ನಿಜವಾಗುತ್ತಾ ಬಂದಿದೆ. ಅದರ ಮಾತನ್ನು ನಾವು ಮಾತ್ರವಲ್ಲ, ದೇಶದ ವಿವಿಧ ರಾಜ್ಯಗಳು ಪಾಲಿಸುತ್ತಿವೆ. ಹೀಗಾಗಿ ನಾವು ಅದನ್ನು ನಿರ್ಲಕ್ಷಿಸುವುದು ಬೇಡ ಎಂದು ಸುಧಾಕರ್ ಮತ್ತೆ ಸಭೆಯಲ್ಲಿ ಪರಿಪರಿಯಾಗಿ ಹೇಳಿದ್ದರು. ಆದರೆ ಬಹುತೇಕರ ಅಭಿಪ್ರಾಯ ಒಂದೇ ಆಗಿದ್ದರಿಂದ ಸಚಿವ ಸುಧಾಕರ್ ಮಾತು ಅರಣ್ಯ ರೋಧನವಾಯಿತು.

ಆದರೆ, ಅವತ್ತು ಸುಧಾಕರ್ ಆಡಿದ ಮಾತಿನ ಸಚಿತ್ರ ರೂಪ ಕರ್ನಾಟಕದಲ್ಲಿ ಅವತರಿಸಿದೆ. ದಿನವೊಂದಕ್ಕೆ ಮೂವತ್ತು ಸಾವಿರಕ್ಕಿಂತ ಹೆಚ್ಚು ಮಂದಿಗೆ ಸೋಂಕು ತಗಲುತ್ತಿದೆ. ಅವತ್ತು ಮುಖ್ಯಮಂತ್ರಿಗಳ ಸಭೆಯಲ್ಲಿ ನಕ್ಕ ಮಂತ್ರಿಗಳು ಇವತ್ತು ಚಕಾರ ಎತ್ತುತ್ತಿಲ್ಲ. ಆದರೆ ರಾಜ್ಯ ಅಳುತ್ತಿದೆ. ಸೆಮಿ ಲಾಕ್​ಡೌನ್ ಮಾಡದ ಪರಿಣಾಮ ಏನಾಗಿದೆ ಎಂಬುದರ ವಿವರವೂ ಇದೆ. ಹೀಗಾಗಿ ಇಂದು ಸಂಪುಟ ಸಭೆಯಲ್ಲಿ ಈ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಸಿಎಂ ಕೊನೆಗೂ ಮಾರ್ಚ್ ಮೊದಲ ವಾರ ಸುಧಾಕರ್ ಹೇಳಿದ್ದನ್ನು ಈಗ ಜಾರಿಗೊಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.