ETV Bharat / state

ಮಿಂಟೋ ಆಸ್ಪತ್ರೆಯಲ್ಲಿ ಆ್ಯಸಿಡ್​ ಸಂತ್ರಸ್ತೆಗೆ ಚಿಕಿತ್ಸೆ.. ಕನಕಪುರದ ಬಾಲಕಿಗೆ ಧೈರ್ಯ ತುಂಬಿದ ಸಚಿವ ಹಾಲಪ್ಪ ಆಚಾರ್ - ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ

ಭಗ್ನಪ್ರೇಮಿಯಿಂದ ಆ್ಯಸಿಡ್​ ದಾಳಿಗೊಳಗಾದ ಬಾಲಕಿಗೆ ಬೆಂಗಳೂರು ನಗರದ ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದ್ದು, ಸುದ್ದಿ ತಿಳಿದ ಸಚಿವ ಹಾಲಪ್ಪ ಆಚಾರ್​ ಆಸ್ಪತ್ರೆಗೆ ಭೇಟಿ ನೀಡಿ ಧೈರ್ಯ ತುಂಬಿದರು.

Minister Halappa Achar visited  Halappa Achar visited Minto Hospital  treatment of acid victims  Acid victim treated at Minto Hospital in Bengaluru  ಮಿಂಟೋ ಆಸ್ಪತ್ರೆಯಲ್ಲಿ ಆ್ಯಸಿಡ್​ ಸಂತ್ರಸ್ತೆಗೆ ಚಿಕಿತ್ಸೆ  ಕನಕಪುರದ ಬಾಲಕಿಗೆ ಧೈರ್ಯ ತುಂಬಿದ ಸಚಿವ  ಭಗ್ನಪ್ರೇಮಿಯಿಂದ ಆ್ಯಸಿಡ್​ ದಾಳಿಗೊಳಗಾದ ಬಾಲಕಿ  ಬಾಲಕಿಗೆ ಬೆಂಗಳೂರು ನಗರದ ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ  ಸಚಿವ ಹಾಲಪ್ಪ ಆಚಾರ್​ ಆಸ್ಪತ್ರೆಗೆ ಭೇಟಿ  ಬಾಲಕಿಯೊಬ್ಬಳು ಭಗ್ನಪ್ರೇಮಿಯಿಂದ ಆ್ಯಸಿಡ್ ದಾಳಿ  ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ  ಬಾಲಕಿ ಹಾಗೂ ಆಕೆಯ ತಾಯಿಗೆ ಧೈರ್ಯ ತುಂಬಿದ ಸಚಿವ
ಮಿಂಟೋ ಆಸ್ಪತ್ರೆಯಲ್ಲಿ ಆ್ಯಸಿಡ್​ ಸಂತ್ರಸ್ತೆಗೆ ಚಿಕಿತ್ಸೆ
author img

By

Published : Feb 18, 2023, 12:46 PM IST

ಬೆಂಗಳೂರು : ರಾಮನಗರ ಜಿಲ್ಲೆಯ ಕನಕಪುರದ ಬಾಲಕಿಯೊಬ್ಬಳು ಭಗ್ನಪ್ರೇಮಿಯಿಂದ ಆ್ಯಸಿಡ್ ದಾಳಿಗೊಳಗಾಗಿದ್ದಳು. ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಪ್ರಾಪ್ತ ವಯಸ್ಸಿನ ಸಂತ್ರಸ್ತೆಯ ಯೋಗಕ್ಷೇಮ ವಿಚಾರಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ‍್ಧಿ ಸಚಿವ ಹಾಲಪ್ಪ ಆಚಾರ್ ಅವರು ಧೈರ್ಯ ತುಂಬಿದರು. ದಾಳಿಯಿಂದ ಆಘಾತಕ್ಕೊಳಗಾಗಿರುವ ಬಾಲಕಿ ಹಾಗೂ ಆಕೆಯ ತಾಯಿಗೆ ಧೈರ್ಯ ತುಂಬಿದ ಸಚಿವರು, ಸರ್ಕಾರ ತಪ್ಪಿತಸ್ಥರಿಗೆ ಕಾನೂನು ಪ್ರಕಾರ ಕಠಿಣ ಶಿಕ್ಷೆ ನೀಡುತ್ತದೆ. ಆದಷ್ಟು ಬೇಗ ಚೇತರಿಸಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳುವಂತೆ ಬಾಲಕಿಗೆ ಧೈರ್ಯ ಹೇಳಿದರು.

ಈ ಸಂದರ್ಭದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಹಾಲಪ್ಪ ಆಚಾರ್, ಕನಕಪುರ ಪಟ್ಟಣದಲ್ಲಿ ಬಾಲಕಿ ಮೇಲೆ ಆ್ಯಸಿಡ್ ದಾಳಿ ನಡೆದಿದ್ದು, ಆಕೆಯ ಬೆನ್ನು, ಭುಜ, ಕಣ್ಣಿಗೆ ಹಾನಿಯಾಗಿದೆ. ಇಂತಹವರ ಮೇಲೆ ಸರ್ಕಾರ ಕಾನೂನು ಪ್ರಕಾರ ಕಠಿಣ ಕ್ರಮ ತೆಗೆದುಕೊಳ್ಳಲಿದೆ. ಆರೋಪಿಯನ್ನು ಈಗಾಗಲೇ ಬಂಧಿಸಿದ್ದು, ಕನಕಪುರ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೊತೆ ಈಗಾಗಲೇ ಚರ್ಚಿಸಿ, ಸೂಕ್ತ ಕ್ರಮಕ್ಕೆ ಸೂಚಿಸಲಾಗುವುದು ಎಂದು ಹೇಳಿದರು.

ಹುಚ್ಚು ಕ್ರಿಮಿಗಳು ಇಂತಹ ದುಷ್ಕೃತ್ಯ ಎಸಗಿದ್ದು, ಇಂತಹ ಘಟನೆಗಳು ಮರುಕಳಿಸಬಾರದು. ಘಟನೆ ಬಗ್ಗೆ ಇಂದು ಬೆಳಗ್ಗೆ ತಮಗೆ ಮಾಹಿತಿ ತಿಳಿಯುತ್ತಿದ್ದಂತೆ ಎಲ್ಲಾ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಸರ್ಕಾರದ ಪರವಾಗಿ ಸಾಂತ್ವನ ಹೇಳಿದ್ದೇನೆ. ಯುವತಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಕಾರ್ನಿಯಾ ತಜ್ಞರು ಪರಿಶೀಲಿಸಲಿದ್ದಾರೆ. ತಜ್ಞ ವೈದ್ಯರ ಚಿಕಿತ್ಸೆಗೆ ಸರ್ಕಾರ ಸೂಕ್ತ ರೀತಿಯಲ್ಲಿ ನೆರವಾಗಲಿದೆ ಎಂದರು.

ಏನಿದು ಘಟನೆ?: ಬಂಧಿತ ಆರೋಪಿ ಸುಮಂತ್​ ಎಂದು ಗುರುತಿಸಲಾಗಿದೆ. ಸುಮಂತ್​ ಕಾರ್​ ಮೆಕ್ಯಾನಿಕ್​ ಕೆಲಸ ಮಾಡುತ್ತಿದ್ದ ಎನ್ನಲಾಗಿದ್ದು, ಆತ ತಮ್ಮ ಗ್ಯಾರೇಜ್​ ಬಳಿ ಇರುವ ಬಾಲಕಿಯನ್ನು ಪ್ರೀತಿಸುತ್ತಿದ್ದ. ಆ ಬಾಲಕಿ ಪ್ರತಿನಿತ್ಯ ಗ್ಯಾರೇಜ್​ ಮುಂದಿನಿಂದಲೇ ಕಾಲೇಜ್​ ಹೋಗಿ ಬರುತ್ತಿದ್ದಳು. ಇನ್ನು ಸುಮಂತ್​ ನಿತ್ಯ ಬಾಲಕಿ ಕಾಲೇಜ್​ಗೆ ಹೋಗುವ ದಾರಿ ಮಧ್ಯ ಅಡ್ಡ ಹಾಕಿ ಪ್ರೀತಿಸುವಂತೆ ಪೀಡಿಸುತ್ತಿದ್ದನು. ಬಾಲಕಿ ಇವನ ಪ್ರೀತಿಯನ್ನು ನಿರಾಕರಿಸುತ್ತಲೇ ಬಂದಿದ್ದಾಳೆ.

ಬಾಲಕಿ ಬಗ್ಗೆ ಸುಮಂತ್​ ಬಹಳ ತಲೆಕೆಡಿಸಿಕೊಂಡಿದ್ದನು. ಶುಕ್ರವಾರ ರಾತ್ರಿ 8-9 ಗಂಟೆ ಸುಮಾರು ಕನಕಪುರ ತಾಲೂಕಿನ ಬೈಪಾಸ್ ರಸ್ತೆ ನಾರಾಯಣಪ್ಪ ಕೆರೆ ಬಳಿ ಬಾಲಕಿಯನ್ನು ಅಡ್ಡಗಟ್ಟಿ ಪ್ರೀತಿಸುವಂತೆ ಪೀಡಿಸಿದ್ದಾನೆ. ಆಗ ಬಾಲಕಿ ಸಹ ಅವನ ಪ್ರೀತಿಯನ್ನು ಮತ್ತೆ ನಿರಾಕರಿಸಿದ್ದಾಳೆ. ಈ ವೇಳೆ, ಸುಮಂತ್ ತಾನೂ ತಂದಿದ್ದ ಆ್ಯಸಿಡ್​ ಅನ್ನು ಅವಳ ಮುಖದ ಮೇಲೆ ಎರಚಿ ಪರಾರಿಯಾಗಿದ್ದನು.

ಆ್ಯಸಿಡ್​ ದಾಳಿಯಿಂದ ನರಳಾಡುತ್ತಿದ್ದ ಬಾಲಕಿಯನ್ನು ಸ್ಥಳೀಯ ಜನ ಕೂಡಲೇ ಆಸ್ಪತ್ರೆಗೆ ದಾಖಲಿಸಿ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಆ್ಯಸಿಡ್ ದಾಳಿಯಿಂದ ಬಾಲಕಿಯ ಎಡ ಕಣ್ಣಿಗೆ ತೀವ್ರ ಗಾಯವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನೆ ಮಾಡಲಾಗಿತ್ತು.

ಓದಿ: ರಾಮನಗರ: ಪ್ರೀತಿ ನಿರಾಕರಿಸಿದ್ದ ವಿದ್ಯಾರ್ಥಿನಿ ಮೇಲೆ ಆ್ಯಸಿಡ್​ ಎರಚಿದ್ದ ಮೆಕ್ಯಾನಿಕ್​ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.