ETV Bharat / state

ರಾಮಭಕ್ತರನ್ನು ಟಾರ್ಗೆಟ್ ಮಾಡಿಲ್ಲ, ಅಶೋಕ್ ಅವರದ್ದು ತಪ್ಪು ಕಲ್ಪನೆ: ಸಚಿವ ಜಿ ಪರಮೇಶ್ವರ್ - ಆರ್ ಅಶೋಕ್

ರಾಮಭಕ್ತರನ್ನು ಟಾರ್ಗೆಟ್ ಮಾಡುವ ಪ್ರಯತ್ನ ಮಾಡಿಲ್ಲ. ಇದಕ್ಕೆ ಕೋಮು ಬಣ್ಣ ಬಳಿಯುವುದು ಸೂಕ್ತ ಅಲ್ಲ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿದ್ದಾರೆ.

minister-g-parameshwar-reaction-on  R Ashok Statement
ರಾಮಭಕ್ತರನ್ನು ಟಾರ್ಗೆಟ್ ಮಾಡಿಲ್ಲ, ಅಶೋಕ್ ಅರದ್ದು ತಪ್ಪು ಕಲ್ಪನೆ: ಸಚಿವ ಪರಮೇಶ್ವರ್
author img

By ETV Bharat Karnataka Team

Published : Jan 1, 2024, 10:34 PM IST

Updated : Jan 1, 2024, 11:02 PM IST

ಸಚಿವ ಜಿ ಪರಮೇಶ್ವರ್ ಪ್ರತಿಕ್ರಿಯೆ

ಬೆಂಗಳೂರು: ರಾಮಭಕ್ತರನ್ನು ಟಾರ್ಗೆಟ್ ಮಾಡುವ ಪ್ರಯತ್ನ ಮಾಡಿಲ್ಲ. ಇದಕ್ಕೆ ಕೋಮು ಬಣ್ಣ ಕಟ್ಟುವುದು ಸೂಕ್ತ ಅಲ್ಲ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿದರು. ಸೋಮವಾರ ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ರಾಮಭಕ್ತರನ್ನು ಗುರಿಯಾಗಿಸಿ ಸರ್ಕಾರ ಬಂಧನ ಮಾಡುತ್ತಿದೆ ಎಂಬ ಪ್ರತಿಪಕ್ಷ ನಾಯಕ ಆರ್ ಅಶೋಕ್ ಹೇಳಿಕೆಗೆ ಪ್ರತಿಕ್ರಿಯಿಸಿ, ಯಾವ ಕ್ರಮ ಆಗಬೇಕೋ ಅದನ್ನು ಪೊಲೀಸ್ ಇಲಾಖೆ ಮಾಡುತ್ತೆ. ಆ ರೀತಿ ಏನು ಇಲ್ಲ. ಹಳೆ ಕೇಸುಗಳನ್ನೆಲ್ಲ ಕ್ಲಿಯರ್ ಮಾಡಬೇಕು ಎಂದು ಸೂಚನೆ ಕೊಡಲಾಗಿದೆ. ರಾಜ್ಯಾದ್ಯಂತ ಇರುವ ಹಳೆ ಪ್ರಕರಣಗಳನ್ನು ಕ್ಲಿಯರ್ ಮಾಡುವಂತೆ ಸಂದೇಶ ಕೊಟ್ಟಿದ್ವಿ ಎಂದರು.

ವರ್ಷಾನುಗಟ್ಟಲೆ ಬಾಕಿ ಉಳಿದಿರುವ ಕೇಸ್ ಗಳು ಕ್ಲಿಯರ್ ಆಗಬೇಕು. ಅದರಲ್ಲಿ ಹುಬ್ಬಳ್ಳಿಯಲ್ಲಿ 32 ಕೇಸುಗಳು ಪೆಂಡಿಂಗ್ ಇದ್ದವು. ಅದನ್ನು ಓಪನ್ ಮಾಡುವಾಗ ಈ ಕೇಸ್ ಬಂದಿದೆ. ಈ ಪ್ರಕರಣದಲ್ಲಿ ಅರೆಸ್ಟ್ ಮಾಡಿ ಕಸ್ಟಡಿಗೆ ಕೊಟ್ಟಿದ್ದಾರೆ. ಇದರಲ್ಲಿ ಬೇರೆ ಉದ್ದೇಶ ಇಟ್ಕೊಂಡಿಲ್ಲ. ಆರ್​ ಅಶೋಕ್ ಅವರದ್ದು ತಪ್ಪು ಕಲ್ಪನೆ. ಇದನ್ನ ಬಿಟ್ರೆ ಬೇರೆ ಏನಿಲ್ಲ. ಆಕಸ್ಮಿಕವಾಗಿ ಆಗಿರಬಹುದು ಅಷ್ಟೇ. ಅವರೊಬ್ಬರನ್ನೇ ಬಂಧನ ಮಾಡಿದ್ದರೆ ಒಪ್ಪಿಕೊಳ್ಳಬಹುದಿತ್ತು. ಆದರೆ ಬೇರೆ ಬೇರೆ ಕಡೆ ಎಲ್ಲಾ ಮಾಡಿದ್ದಾರಲ್ಲಾ ಎಂದು ಹೇಳಿದರು.

ಈ ಕೇಸ್ ಯಾಕೆ ಪೆಂಡಿಂಗ್ ನಲ್ಲಿ ಇತ್ತು ಎಂಬ ಪ್ರಶ್ನೆಗೆ ಉತ್ತರಿಸಿ, ಈ ರೀತಿ ಬಹಳ ಕಡೆ ಕೇಸುಗಳನ್ನು ಬಿಟ್ಟು ಬಿಡುತ್ತಾರೆ. ಯಾವಾಗ್ಲೋ ಒಮ್ಮೆ ಕೇಸ್ ರೀ ಓಪನ್ ಆಗುತ್ತೆ. ಅಂತದ್ರಲ್ಲಿ ಇದು ಒಂದು. ಕಮಿಷನರ್‌ ಜೊತೆ ನಾನು ಮಾತನಾಡುತ್ತೇನೆ. ಅಂಥದ್ದು ಏನಿತ್ತು ಈ ಪ್ರಕರಣದಲ್ಲಿ ಅನ್ನೋದರ ಕುರಿತಾಗಿ ಮಾತನಾಡುತ್ತೇನೆ. ಎಲ್ಲಾ ಹಳೆ ಪ್ರಕರಣಗಳಲ್ಲೂ ಇದೇ ರೀತಿ ಕ್ರಮ ಆಗುತ್ತಿದೆ. ಉದ್ದೇಶ ಪೂರ್ವಕವಾಗಿ ಈ ಸಮಯದಲ್ಲಿ ಯಾರಾದರೂ ಮಾಡುತ್ತಾರೆಯೇ. ಆ ರೀತಿ ಏನೂ ಇಲ್ಲ ಎಂದು ಗೃಹ ಸಚಿವರು ಸ್ಪಷ್ಟಪಡಿಸಿದರು.

ಏನಿದು ಪ್ರಕರಣ; ರಾಮ ಮಂದಿರ ಹೋರಾಟದ ಸಂದರ್ಭದಲ್ಲಿ ಕರಸೇವೆಗೂ ಮುನ್ನ ಡಿಸೆಂಬರ್ 5, 1992 ರಂದು ಹುಬ್ಬಳ್ಳಿ ನಗರದಲ್ಲಿ ಗಲಭೆ ಸಂಭವಿಸಿತ್ತು. ಗಲಭೆಯಲ್ಲಿ ಒಂದು ಮಳಿಗೆಗೆ ಬೆಂಕಿ ಹಚ್ಚಲಾಗಿತ್ತು. ಈ‌ ಪ್ರಕರಣದಲ್ಲಿ 9 ಜನರ ವಿರುದ್ಧ ಶಹರ್​ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ 31 ವರ್ಷದ ಬಳಿಕ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್​ ಆಯುಕ್ತೆ ರೇಣುಕಾ ಸುಕುಮಾರ್​, 'ಇದರಲ್ಲಿ ಯಾವುದೇ ರೀತಿಯ ಒತ್ತಡ ಇರುವುದಿಲ್ಲ. ಇದೆಲ್ಲವೂ ಪೊಲೀಸ್ ಇಲಾಖೆಯಲ್ಲಿ ಕೋರ್ಟ್ ನಿರ್ದೇಶನದ ಮೇರೆಗೆ ನಡೆಯುವ ಸಾಮಾನ್ಯ ಪ್ರಕ್ರಿಯೆಯಾಗಿದೆ'' ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ರಾಮ ಜನ್ಮಭೂಮಿ ಹೋರಾಟದ ಆರೋಪಿಗಳ ಬಂಧನ ಪ್ರಕರಣ: ಹು-ಧಾ ಪೊಲೀಸ್ ಆಯುಕ್ತರು ಹೇಳಿದ್ದೇನು?

Last Updated : Jan 1, 2024, 11:02 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.