ಬೆಂಗಳೂರು: ಸಚಿವ ಭೈರತಿ ಬಸರಾಜ್ ದಿನಸಿ ಕಿಟ್ ವಿತರಣೆ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಜನರು ಮುಗಿಬಿದ್ದಿದ್ದರು. ಅಲ್ಲದೆ ಕಿಟ್ಗಳನ್ನು ಹಂಚುವ ವೇಳೆ ಬಿಜೆಪಿ ನಾಯಕರು ಸಹ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ಲಾಕ್ಡೌನ್ ಆದೇಶವನ್ನು ಉಲ್ಲಂಘಿಸಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ರಾಮಮೂರ್ತಿನಗರದ ಕುವೆಂಪು ಕ್ರೀಡಾಂಗಣದಲ್ಲಿ ಸಚಿವ ಭೈರತಿ ಬಸವರಾಜ್, ಬಿಜೆಪಿ ಸ್ಥಳೀಯ ಮುಖಂಡ ಬಾಕ್ಸರ್ ನಾಗರಾಜ್ರಿಂದ ದಿನಸಿ ಕಿಟ್ ವಿತರಣೆ ಮಾಡುವ ವೇಳೆ ಜನರು ಮುಗಿಬಿದ್ದರು. ಕಿಟ್ ವಿತರಣೆ ವೇಳೆ ಸಾಮಾಜಿಕ ಅಂತರ ಮರೆತ ನಾಯಕರು, ಜನಸಂದಣಿಯಲ್ಲೇ ಕಿಟ್ ಹಂಚಿದ್ದಾರೆ. ಸಾವಿರಾರು ಜನರಿಗೆ ಕಿಟ್ ಹಂಚಿದ್ದು, ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.