ಬೆಂಗಳೂರು: ಚಿತ್ರದುರ್ಗದಲ್ಲಿ ಅಸ್ವಸ್ಥರಾಗಿ ಅಲ್ಲಿನ ಬಸವೇಶ್ವರ ಮೆಡಿಕಲ್ ಕಾಲೇಜ್ನಲ್ಲಿ ಚಿಕಿತ್ಸೆ ಪಡೆದುಕೊಂಡು ಹೆಚ್ಚುವರಿ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಟರ್ ಆಸ್ಪತ್ರೆಗೆ ದಾಖಲಾಗಿದ್ದ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಇಂದು ಡಿಸ್ಚಾರ್ಜ್ ಆಗಿದ್ದಾರೆ.
ಲೋ ಶುಗರ್ನಿಂದ ಅಸ್ವಸ್ಥರಾಗಿದ್ದ ಡಿ.ವಿ.ಸದಾನಂದಗೌಡ ಚಿಕಿತ್ಸೆಗಾಗಿ ಆಸ್ಟರ್ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಅವರು ಸಂಪೂರ್ಣವಾಗಿ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಬಿಡುಗಡೆಯಾದ ಬಳಿಕ ಮಾತನಾಡಿರುವ ಅವರು, ಪೋಸ್ಟ್ ಕೋವಿಡ್ ಪರಿಣಾಮ ನನ್ನ ಮೇಲೆ ಪ್ರಭಾವ ಬೀರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಚಾನಕ್ಕಾಗಿ ನನ್ನ ಲೋಪದಿಂದಾಗಿ ಅಸ್ವಸ್ಥತೆಗೆ ಒಳಗಾಗಬೇಕಾಯಿತು. ಸಮಯಕ್ಕೆ ಸರಿಯಾಗಿ ಆಹಾರ ಸೇವನೆ ಮಾಡದ ಕಾರಣ ಮತ್ತು ಸ್ವಲ್ಪಮಟ್ಟಿನ ಕೊರೊನಾ ಸೋಂಕು ಕಾಣಿಸಿಕೊಂಡಿದ್ದರಿಂದ ಸ್ವಲ್ಪ ಸಕ್ಕರೆ ಪ್ರಮಾಣ ಕಡಿಮೆಯಾಗಿ ಈ ಸಮಸ್ಯೆ ಎದುರಾಯಿತು ಎಂದು ಅವರು ತಿಳಿಸಿದ್ದಾರೆ. ನಿನ್ನೆ ಮತ್ತು ಇಂದು ಚಿಕಿತ್ಸೆ ಪಡೆದ ನಂತರ ಗುಣಮುಖನಾಗಿದ್ದೇನೆ. ಸ್ವಲ್ಪ ಜಾಗ್ರತೆಯಿಂದ ಇರಬೇಕಿದೆ ಎಂದರು.
-
DV Sadananda Gowda (in file photo), Union Minister for Chemicals & Fertilizers has been discharged from Aster CMI Hospital, Bengaluru.
— ANI (@ANI) January 5, 2021 " class="align-text-top noRightClick twitterSection" data="
He was admitted to the hospital on January 3. pic.twitter.com/FcQvJ6DoVm
">DV Sadananda Gowda (in file photo), Union Minister for Chemicals & Fertilizers has been discharged from Aster CMI Hospital, Bengaluru.
— ANI (@ANI) January 5, 2021
He was admitted to the hospital on January 3. pic.twitter.com/FcQvJ6DoVmDV Sadananda Gowda (in file photo), Union Minister for Chemicals & Fertilizers has been discharged from Aster CMI Hospital, Bengaluru.
— ANI (@ANI) January 5, 2021
He was admitted to the hospital on January 3. pic.twitter.com/FcQvJ6DoVm
ಸಮಯಕ್ಕೆ ಸರಿಯಾಗಿ ಆಹಾರ ಸೇವನೆ, ಬೆಳಗ್ಗೆ ಮತ್ತು ಮಧ್ಯಾಹ್ನದ ನಡುವೆ ಏನಾದರೂ ಆಹಾರ ಸೇವನೆ ಮಾಡಬೇಕು. ಮಧ್ಯಾಹ್ನ ಮತ್ತು ರಾತ್ರಿಯ ನಡುವೆ ಸ್ವಲ್ಪ ಆಹಾರ ಸೇವನೆ ಮಾಡುವಂತೆ ವೈದ್ಯರು ಸಲಹೆ ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಬೆಡ್ ರೆಸ್ಟ್ಗೆ ವೈದ್ಯರು ಸಲಹೆ ನೀಡಿಲ್ಲ: ಬೆಡ್ ರೆಸ್ಟ್ ತೆಗೆದುಕೊಳ್ಳುವ ಕಾಲಘಟ್ಟ ಇದಲ್ಲ. ಬಜೆಟ್ ಪ್ರಾರಂಭವಾಗುವ ಹಿನ್ನೆಲೆಯಲ್ಲಿ ನಾವು ಕೂಡ ಕೆಲಸ ಕಾರ್ಯಗಳನ್ನು ಆರಂಭಿಸಿ ಬಜೆಟ್ ತಯಾರಿ ಕೆಲಸ ಮಾಡಬೇಕಿದೆ. 2-3 ದಿನ ವಿಶ್ರಾಂತಿ ಪಡೆದು ನಂತರ ನನ್ನ ಕೆಲಸ ಆರಂಭಿಸುತ್ತೇನೆ ಎಂದರು.
ಓದಿ: ಡಿವಿಎಸ್ ಆರೋಗ್ಯ ಸಹಜವಾಗಿದೆ, 24 ಗಂಟೆ ನಿಗಾದಲ್ಲಿರಿಸಿ ನಂತರ ಡಿಸ್ಚಾರ್ಜ್: ಡಾ.ಬೃಂದಾ
ನಿನ್ನೆ ಅವರ ಆರೋಗ್ಯ ವಿಚಾರಣೆಗೆ ತೆರಳಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಶೀಘ್ರವಾಗಿ ಗುಣಮುಖರಾಗಿ ಕೆಲ ಸಮಯ ವಿಶ್ರಾಂತಿ ಪಡೆದು ಕರ್ತವ್ಯಕ್ಕೆ ಮರಳುವಂತೆ ಸಲಹೆ ನೀಡಿದ್ದರು. ಇನ್ನು ಪ್ರಧಾನಿ ನರೇಂದ್ರ ಮೋದಿ ಕೂಡ ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದರು.