ETV Bharat / state

'ಸಾಕ್ಷಿ ಲಭ್ಯವಾದ್ರೆ ಎಸ್​ಡಿಪಿಐ, ಪಿಎಫ್ಐ, ಸಿಎಫ್ಐ ರೀತಿಯ ಸಂಘಟನೆಗಳ ನಿಷೇಧ' - ಅಶ್ವತ್ಥನಾರಾಯಣ್ ಸುದ್ದಿಗೋಷ್ಠಿ

ಯಾವುದೇ ಸಂಘಟನೆಗಳ ನಿಷೇಧಕ್ಕೆ ಬಲವಾದ ಸಾಕ್ಷಿಗಳು ಬೇಕು, ಇದರಲ್ಲಿ ಸಾಕಷ್ಟು ಸವಾಲು-ಸಮಸ್ಯೆಗಳಿವೆ. ಸದ್ಯಕ್ಕೆ ಹರ್ಷ ಕೊಲೆ ಪ್ರಕರಣದ ತನಿಖೆ ನಡೆಯುತ್ತಿದೆ. ಮೇಲ್ನೋಟಕ್ಕೆ ಸಮಾಜ ವಿರೋಧಿ ಕೃತ್ಯದ ದಾಖಲೆ ಲಭ್ಯವಾದರೆ ಅಂತಹ ಸಂಘಟನೆಗಳ ನಿಷೇಧಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ್ ಹೇಳಿದ್ದಾರೆ.

ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ್ ಸುದ್ದಿಗೋಷ್ಠಿ
ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ್
author img

By

Published : Feb 24, 2022, 1:29 PM IST

Updated : Feb 24, 2022, 2:18 PM IST

ಬೆಂಗಳೂರು: ದೇಶದ್ರೋಹಿ ಕೃತ್ಯದಲ್ಲಿ ಭಾಗಿಯಾಗಿರುವ ಸಾಕ್ಷಿಗಳು ಮೇಲ್ನೋಟಕ್ಕೆ ಲಭ್ಯವಾದರೂ ರಾಜ್ಯದಲ್ಲಿ ಎಸ್​ಡಿಪಿಐ, ಪಿಎಫ್ಐ, ಸಿಎಫ್ಐ ರೀತಿಯ ಸಂಘಟನೆಗಳ ನಿಷೇಧಕ್ಕೆ ಸರ್ಕಾರ ಮುಂದಾಗಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ್ ಸ್ಪಷ್ಟಪಡಿಸಿದರು.

ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಸ್​ಡಿಪಿಐ, ಪಿಎಫ್ಐ ತರದ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಯಾವುದೇ ದೇಶದ್ರೋಹಿ, ಸಮಾಜ ವಿರೋಧಿ ಸಂಘಟನೆ ಇದ್ದರೆ ಕ್ರಮ ವಹಿಸಲಾಗುತ್ತದೆ. ಕಾಂಗ್ರೆಸ್ ಪಕ್ಷ ಇವರಿಗೆ ರಕ್ಷಣೆ ಕೊಟ್ಟು ಬೆಳೆಸಿದೆ. ಸದ್ಯಕ್ಕೆ ಹರ್ಷ ಕೊಲೆ ಪ್ರಕರಣದ ತನಿಖೆ ನಡೆಯುತ್ತಿದೆ, ಮೇಲ್ನೋಟಕ್ಕೆ ಸಮಾಜ ವಿರೋಧಿ ಕೃತ್ಯದ ದಾಖಲೆ ಲಭ್ಯವಾದರೆ ಅಂತಹ ಸಂಘಟನೆಗಳ ನಿಷೇಧಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ. ಯಾವ ದೇಶದ್ರೋಹ ಸಂಘಟನೆ ಜೊತೆಯೂ ಬಿಜೆಪಿ ಕೈ ಜೋಡಿಸಲ್ಲ ಎಂದರು.

ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ್ ಸುದ್ದಿಗೋಷ್ಠಿ

ಯಾವುದೇ ಸಂಘಟನೆಗಳ ನಿಷೇಧಕ್ಕೆ ಬಲವಾದ ಸಾಕ್ಷಿಗಳು ಬೇಕು, ಇದರಲ್ಲಿ ಸಾಕಷ್ಟು ಸವಾಲು-ಸಮಸ್ಯೆಗಳು ಇವೆ. ಬಹಳ ತ್ವರಿತವಾಗಿ ತನಿಖೆ ನಡೆಸಲು ಎಲ್ಲ ಕ್ರಮ ಕೈಗೊಳ್ಳಲಾಗುತ್ತದೆ. ದೇಶ ವಿರೋಧಿ ಸಂಘಟನೆಗಳ ನಿಷೇಧ ಆಗಲೇಬೇಕು, ಆ ನಿಟ್ಟಿನಲ್ಲಿ ನಾವು ಮುಂದುವರೆಯಲಿದ್ದೇವೆ.

ನಾವು ವಿರೋಧ ಪಕ್ಷವಾಗಿದ್ದಾಗ ಹತ್ಯೆಯಾದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಎಲ್ಲಾ ಕೇಸ್​ಗಳ ಫಾಲೋಅಪ್​ನಲ್ಲಿದ್ದೇವೆ, ಕೇಸ್​ಗಳ ಪರಿಶೀಲನೆ ಮಾಡುತ್ತಿದ್ದೇವೆ, ಮೃತರ ಕುಟುಂಬ ಸದಸ್ಯರ ಜೊತೆ ಸಂಪರ್ಕದಲ್ಲಿದ್ದೇವೆ, ಹತ್ಯೆಯಾದವರ ಕುಟುಂಬಕ್ಕೆ ನ್ಯಾಯ ಕೊಡುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

ನಾವು ಆಡಳಿತದಲ್ಲಿದ್ದರೂ ಶಿವಮೊಗ್ಗದಲ್ಲಿ ಹಿಂದೂಪರ ಸಂಘಟನೆ ಕಾರ್ಯಕರ್ತರನ ಹತ್ಯೆಯಾಗಿದೆ. ಹರ್ಷನ ಹತ್ಯೆ ಘಟನೆ ನಡೆಯಬಾರದಿತ್ತು, ಮುಂಜಾಗ್ರತೆ ಇನ್ನಷ್ಟು ಹೆಚ್ಚಿಸಬೇಕಿದೆ. ಮತ್ತಷ್ಟು ಕ್ರಮ, ಜಾಗೃತಿ ವಹಿಸಲಿದ್ದೇವೆ, ಎಲ್ಲರ ರಕ್ಷಣೆ ನಮ್ಮ ಕರ್ತವ್ಯ, ನಮ್ಮ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ, ಘಟನೆ ಮತ್ತೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗುತ್ತದೆ.

ಪ್ರತಿಪಕ್ಷ ಕಾಂಗ್ರೆಸ್ ಸಮಾಜದಲ್ಲಿ ಸಮಸ್ಯೆ, ಗೊಂದಲ ಉಂಟುಮಾಡಿ ದ್ವೇಶ, ವೈಮನಸ್ಸು ಹುಟ್ಟಿಸುತ್ತಿದೆ. ಸಂಸದೀಯ ವ್ಯವಸ್ಥೆಗೆ ಧಕ್ಕೆ ತಂದಿದೆ. ಕಲಾಪ ನಡೆಯದಂತೆ ಮಾಡುವ ಉದ್ದೇಶದಿಂದ ಸತತವಾಗಿ ಕಾರ್ಯ ಮಾಡುತ್ತಿದೆ. ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಹರಿಪ್ರಸಾದ್ ಯಾವ ವಿಚಾರದಲ್ಲಿ ಸ್ಪಷ್ಟತೆ ಇಲ್ಲದೇ ಸುಳ್ಳು ಮಾಹಿತಿ ನೀಡಿ‌ ಅದನ್ನೇ ಸತ್ಯ ಎಂದು ಹೇಳುವ ಕೆಲಸ ಮಾಡುತ್ತಿದ್ದಾರೆ.

ಸದನದಲ್ಲಿ ಸಮಾಜದ ಜ್ವಲಂತ ಸಮಸ್ಯೆ ಮಂಡಿಸದೆ ಶಿವಮೊಗ್ಗದಲ್ಲಿ ಹಿಜಾಬ್ ಪ್ರಕರಣ ಪ್ರಾರಂಭವಾದಾಗ ಯಾವುದೋ ಒಂದು ಶಾಲೆಯಲ್ಲಿ ರಾಷ್ಟ್ರ ಧ್ವಜ ಇಳಿಸಿ ಕೇಸರಿ ಧ್ವಜ ಹಾರಿಸಿದ್ದಾರೆ ಎಂದು ತಪ್ಪು ಮಾಹಿತಿ ನೀಡಿ, ಗೊಂದಲ ಮಾಡುತ್ತಿದ್ದಾರೆ. ಅಧಿವೇಶನದಲ್ಲಿ ಕಲಾಪ ನಡೆಯಲು ಬಿಡದೆ ಅಡೆತಡೆ ಮಾಡಿ ಹಣಕಾಸು ವ್ಯರ್ಥ ಮಾಡಿದ್ದಾರೆ. ಸದನ ಕರೆದ ಉದ್ದೇಶ ಈಡೇರಿಕೆಗೆ ಅವಕಾಶ ನೀಡಲಿಲ್ಲ, ತನ್ನ ಹಿರಿತನಕ್ಕೆ ತಕ್ಕ ರೀತಿ ನಡೆದುಕೊಳ್ಳಲಿಲ್ಲ. ವೀರೇಂದ್ರ ಪಾಟೀಲ್, ಬಿಡಿ ಜತ್ತಿ, ನಿಜಲಿಂಗಪ್ಪರಂತಹ ವ್ಯಕ್ತಿಗಳು ಇದ್ದ ಪಕ್ಷ, ಅದಕ್ಕೆಲ್ಲಾ ಈಗ ತಿಲಾಂಜಲಿ ಹೇಳಿ ಮನ ಬಂದಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.

ಈಶ್ವರಪ್ಪ ಮೇಲೆ ಹಲ್ಲೆ ಯತ್ನ: ರಾಜ್ಯದ ಜ್ವಲಂತ ಸಮಸ್ಯೆಗಳನ್ನು ಸದನದಲ್ಲಿ ಗಮನಕ್ಕೆ ತರುವ ಬದಲು ಸಮಯ ವ್ಯರ್ಥ ಮಾಡಿದ್ದಾರೆ. ಹಿಜಾಬ್ ವಿಚಾರದಲ್ಲಿಯೂ ಕಾಂಗ್ರೆಸ್ ಒಂದು ನಿಲುವು ತಳೆದಿಲ್ಲ. ಕ್ಷುಲ್ಲಕ ಕಾರಣ ತೆಗೆದುಕೊಂಡು ಕಲಾಪ ನಡೆಯದಂತೆ ಮಾಡಿದರು. ಹಿಜಾಬ್ ವಿಚಾರ ಚರ್ಚೆಗೂ ಕಾಂಗ್ರೆಸ್ ಸಿದ್ಧವಿಲ್ಲ, ಮೊದಲಿನಿಂದ ಇದ್ದ ಕಾನೂನು, ಕೋರ್ಟ್ ನೀಡಿದ ಮಧ್ಯಂತರ ತೀರ್ಪಿನಲ್ಲಿ ಸ್ಪಷ್ಟತೆ ಕೊಟ್ಟರೂ ಕಾಂಗ್ರೆಸ್​ನವರಿಗೆ ಇದರ ಬಗ್ಗೆ ಸ್ಪಷ್ಟತೆ ಇಲ್ಲ, ಇವರು ವಿಷಯಾಂತರ ಮಾಡಬೇಕಿತ್ತು. ಅದಕ್ಕೆ ಕಲಾಪದಲ್ಲಿ ಧರಣಿ ಮಾಡಿದರು. ಡಿಕೆಶಿ ನೇರವಾಗಿ ಈಶ್ವರಪ್ಪ ಮೇಲೆ ಹಲ್ಲೆ ಮಾಡಲು ಹೋಗಿದ್ದಾರೆ. ಇತಿಹಾಸದಲ್ಲಿ ಮೊದಲ ಬಾರಿ ಇಂತಹ ಘಟನೆ ಆಗಿದೆ, ಇವರಿಗೆ ಮಾತು ಬರಲ್ಲ, ಬರೀ ದೈಹಿಕ ವಿಚಾರ ಬರಲಿದೆ. ಶಕ್ತಿ ಪ್ರಹಾರ ಮಾಡುತ್ತಿದ್ದಾರೆ. ಇವರ ಬಗ್ಗೆ ಏನು ಹೇಳಬೇಕು, ಸಚಿವರೊಬ್ಬರನ್ನು ನೇರವಾಗಿ ಸದನದಲ್ಲೇ ಹಲ್ಲೆ ಮಾಡಲು ಹೋಗಿ ಅದನ್ನೂ ಸಮರ್ಥನೆ ಮಾಡುಕೊಳ್ಳುತ್ತಿದ್ದಾರೆ, ಇದು ಕಾಂಗ್ರೆಸ್​ನ ದೌರ್ಭಾಗ್ಯ ಎಂದು ಟೀಕಿಸಿದರು.

ಕಾಂಗ್ರೆಸ್​ನವರು ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ.ಇವರಲ್ಲಿ ಯಾವುದೇ ಸ್ಪಷ್ಟತೆ ಇಲ್ಲ, ಬಡ ಮಕ್ಕಳು ವಿದ್ಯಾಭ್ಯಾಸದಿಂದ ದೂರ ಉಳಿಯುವುದು ಇವರ ಮೂಲ ಉದ್ದೇಶ. ಬಡ ಮಕ್ಕಳಿಗೆ ತಿಳುವಳಿಕೆ ಬರಬಾರದು. ಹಾಗೆಯೇ ಇರಬೇಕು ಎನ್ನುವ ಧೋರಣೆ ಇವರದ್ದು ಎಂದರು.

ಕಾಂಗ್ರೆಸ್ ಅಧಿಕಾರವಿದ್ದಾಗ ಲಾಲ್​ಚೌನ್​ನಲ್ಲಿ ರಾಷ್ಟಧ್ವಜ ಹಾರಿಸಲು ಅವಕಾಶವಿರಲಿಲ್ಲ, ನಮ್ಮ ರಾಷ್ಟ್ರೀಯತೆ ವಿಚಾರದಲ್ಲಿ ಇವರಿಂದ ನಮಗೆ ತಿಳುವಳಿಕೆ ಬೇಕಿಲ್ಲ, ಸಂವಿಧಾನದ ಪಾಠ ಬೇಕಿಲ್ಲ, ಇವರಿಗೆ ಅಧಿಕಾರ ಬಿಟ್ಟು ಬೇರೆ ಏನು ಗೊತ್ತಿಲ್ಲ, ಸಂವಿಧಾನ ಗೊತ್ತಿಲ್ಲ, ನಮಗೆ ರಾಷ್ಟ್ರಧ್ವಜ, ಸಂವಿಧಾನ ವಿಚಾರದಲ್ಲಿ ಸ್ಪಷ್ಟತೆ ಇದೆ, ದೇಶ ಮೊದಲು ಎನ್ನುವುದೇ ನಮ್ಮ ನಿಲುವು ಎಂದರು.

ಕೋರ್ಟ್ ಮೊರೆ ಹೋಗಬೇಕಿತ್ತು: ಕಾಂಗ್ರೆಸ್​ನವರಿಗೆ ಅಷ್ಟು ಕಾಳಜಿ ಇದ್ದರೆ ಕೋರ್ಟ್ ಮೊರೆ ಹೋಗಬೇಕಿತ್ತು, ದೂರು ಕೊಡಬೇಕಿತ್ತು. ಅದನ್ನು ಬಿಟ್ಟು ಸದನ ಹಾಳು ಮಾಡಿದ್ದು ಯಾಕೆ?. ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ನಡುವೆ ಪೈಪೋಟಿ ನಡೆಯುತ್ತಿದೆ. ಯಾವುದೇ ಕಾಳಜಿ ಇಲ್ಲದ ಪಕ್ಷ ಅದು, ಮುಖ್ಯಮಂತ್ರಿ ಸ್ಥಾನಕ್ಕಾಗಿ ಈಗಲೇ ಪೈಪೋಟಿ ನಡೆಸುತ್ತಿದ್ದಾರೆ. ಇದರಿಂದಾಗಿಯೇ ಕಲಾಪ ಹಾಳಾಯಿತು. ಈಗ ವಿಧಾನ ಮಂಡಲದ ಖರ್ಚು ವೆಚ್ಚ ಕಾಂಗ್ರೆಸ್​ನವರಿಂದ ವಸೂಲಿ ಮಾಡುವ ಕುರಿತು ಸಭಾಧ್ಯಕ್ಷರು ನೀಡಿರುವ ಹೇಳಿಕೆ ಸ್ವಾಗತಾರ್ಹ, ಒಳ್ಳೆಯ ಸಂದೇಶ ಕೊಟ್ಟಿದ್ದಾರೆ, ಸದನ ಹಾಳು ಮಾಡಿದವರಿಂದ ಹಣ ವಸೂಲಿ ಮಾಡುವ ನಿರ್ಧಾರವನ್ನು ನಾಡಿನ ಜನರು, ದೇಶದ ಜನರು ಸ್ವಾಗತಿಸಲಿದ್ದಾರೆ. ಕಾಂಗ್ರೆಸ್ ನಿಲುವು ಖಂಡಿಸಲಿದ್ದೇವೆ. ಸದನದಲ್ಲಿ ಕಾಂಗ್ರೆಸ್ ಧೋರಣೆ ಸರಿಯಲ್ಲ. ಈಶ್ವರಪ್ಪ ಹೇಳಿಕೆ ತಪ್ಪಿದ್ದರೆ ಕೇಸ್ ದಾಖಲಿಸಬೇಕಿತ್ತು. ಅದರ ಬದಲು ಧರಣಿ ಸರಿಯಲ್ಲ ಎಂದರು.

ಡಿ.ಕೆ.ಶಿವಕುಮಾರ್ ಅವರ ತಂದೆಯ ಬಗ್ಗೆ ಈಶ್ವರಪ್ಪ ಮಾತನಾಡಿದ್ದರೆ. ಅದಕ್ಕೆ ಪ್ರತಿಯಾಗಿ ಮಾತಿಗೆ ಮಾತಾಗಬೇಕು, ಅದನ್ನು ಬಿಟ್ಟು ದೈಹಿಕ ಹಲ್ಲೆಗೆ ಮುಂದಾಗಿದ್ಯಾಕೆ?. ಮಾತು ಬಿಟ್ಟು ದಬ್ಬಾಳಿಕೆ ಮಾಡಲು ಹೊರಟರೆ ಹೇಗೆ?. ಪದ ಬಳಕೆ ಸರಿ ಇರಲಿಲ್ಲ ಅಂದರೆ ಕಡತದಿಂದ ತೆಗೆಸಬೇಕಿತ್ತು. ಅದು ಬಿಟ್ಟು ದೈಹಿಕ ಹಲ್ಲೆಗೆ ಮುಂದಾಗಿದ್ಯಾಕೆ? ಎಂದು ಪ್ರಶ್ನಿಸಿದರು.

ಮೇಕೆದಾಟು ಪಾದಯಾತ್ರೆ ಕಾಂಗ್ರೆಸ್​ನ ಮತ್ತೊಂದು ಡ್ರಾಮಾ: ಮೇಕೆದಾಟು ಪಾದಯಾತ್ರೆ ಮತ್ತೆ ಆರಂಭವಾಗುತ್ತಿದೆ, ಯಾವ ಪಕ್ಷ ಕೂಡ ಈ ರೀತಿ ಕಾವೇರಿ ವಿಚಾರದಲ್ಲಿ ರಾಜಕಾರಣ ಮಾಡಿಲ್ಲ, ಎಲ್ಲಾ ಪಕ್ಷಗಳು ಈವರೆಗೆ ನೆಲ-ಜಲದ ವಿಚಾರದಲ್ಲಿ ರಾಜಕಾರಣ ಮಾಡಿಲ್ಲ. ಈಗ ಕಾಂಗ್ರೆಸ್ ತನ್ನ ವೈಫಲ್ಯ ಮರೆಮಾಚಲು ಇದೆಲ್ಲಾ ಮಾಡುತ್ತಿದೆ. ಡಿ.ಕೆ. ಶಿವಕುಮಾರ್ ಜಲಸಂಪನ್ಮೂಲ ಸಚಿವರಾಗಿದ್ದಾಗ ಏನು ಮಾಡಿದರು? , ಯಾವ ಜನ್ಮದಲ್ಲಿಯೂ ಮೇಕೆದಾಟು ಜಾರಿಗೆ ತರಲು ಕಾಂಗ್ರೆಸ್​ಗೆ ಸಾಧ್ಯವಿಲ್ಲ. ನಾವು ಬಿಜೆಪಿಯವರು ಇದಕ್ಕೆ ಬದ್ಧರಿದ್ದೇವೆ. ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ತರಲು ಬದ್ಧರಿದ್ದೇವೆ, ಮೇಕೆದಾಟು ಪಾದಯಾತ್ರೆ ಕಾಂಗ್ರೆಸ್ ಡ್ರಾಮಾ ಅಷ್ಟೇ ಎಂದರು.

Last Updated : Feb 24, 2022, 2:18 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.