ಬೆಂಗಳೂರು: ಸದನದಲ್ಲಿ ಇಬ್ಬರು ಪಕ್ಷೇತರ ಶಾಸಕರು ಹೇಗೆ ಬಿಜೆಪಿ ಬೆಂಬಲಿಸುತ್ತಾರೆ ಎಂಬುದನ್ನು ನಾನೂ ನೋಡ್ತೀನಿ ಎಂದು ಸಚಿವ ಡಿ.ಕೆ.ಶಿವಕುಮಾರ್ ವಾರ್ನ್ ಮಾಡಿದ್ದಾರೆ.
ಸಿಎಂ ಕುಮಾರಸ್ವಾಮಿ ಜೊತೆ ಸದನಕ್ಕೆ ಬಂದ ಸಚಿವ ಡಿಕೆ ಶಿವಕುಮಾರ್ ಚುಟುಕಾಗಿ ಮಾತನಾಡಿ, ಬಿಜೆಪಿ ಇಬ್ಬರು ಪಕ್ಷೇತರ ಶಾಸಕರನ್ನು ಹಿಡಿದಿಟ್ಟುಕೊಂಡಿದೆ. ಈ ಶಾಸಕರು ಹೇಗೆ ಬಿಜೆಪಿ ಪರ ಕೈ ಎತ್ತುತ್ತಾರೆ ಎಂಬುದನ್ನು ನಾನು ನೋಡ್ತಿನಿ ಎಂದು ಖಾರವಾಗಿ ನುಡಿದರು.