ETV Bharat / state

ಗೋಮಾಂಸ ಖಾದ್ಯವನ್ನು ಟ್ವೀಟ್​ ಮಾಡಿ ಯಡವಟ್ಟು ಮಾಡಿಕೊಂಡ ಸಿ.ಟಿ. ರವಿ... ನೆಟ್ಟಿಗರು ಗರಂ

ಕೇರಳ ಪ್ರವಾಸೋದ್ಯಮ ಇಲಾಖೆ ಪ್ರಕಟಿಸಿದ್ದ ಗೋಮಾಂಸ ಖಾದ್ಯದ ಫೋಟೋವನ್ನು, ಸಚಿವ ಸಿ.ಟಿ ರವಿ ತಮ್ಮ ಟ್ವಿಟರ್ ಪೋಸ್ಟ್​ ಮಾಡಿ ಪ್ರವಾಸಿಗರನ್ನು ರಾಜ್ಯಕ್ಕೆ ಆಹ್ವಾನ ಮಾಡಿದ್ದಾರೆ. ಇದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

minister-ct-ravi-tweeted
ಸಚಿವ ಸಿ.ಟಿ ರವಿ ಟ್ವೀಟ್
author img

By

Published : Jan 16, 2020, 11:39 PM IST

Updated : Jan 17, 2020, 8:25 AM IST

ಬೆಂಗಳೂರು: ಕೇರಳ ಪ್ರವಾಸೋದ್ಯಮ ಇಲಾಖೆ ಪ್ರಕಟಿಸಿದ್ದ ಗೋಮಾಂಸ ಖಾದ್ಯದ ಫೋಟೋವನ್ನು, ಸಚಿವ ಸಿ.ಟಿ ರವಿ ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್​ ಮಾಡಿ ಪ್ರವಾಸಿಗರನ್ನು ರಾಜ್ಯಕ್ಕೆ ಆಹ್ವಾನ ಮಾಡಿದ್ದಾರೆ. ಇದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದ್ದು, ಸಚಿವರ ಟ್ವೀಟ್​ಗೆ ಕಮೆಂಟ್​ಗಳ ಸುರಿಮಳೆಯೇ ಆಗಿದೆ.

ನೀವು ಸ್ವಾಗತಿಸುತ್ತಿರುವುದು ಗೋ ಭಕ್ಷಣೆಯನ್ನೋ ಅಥವಾ ಕೇರಳ ಪ್ರವಾಸೋದ್ಯಮವನ್ನೋ ಎಂದು ಪ್ರಶ್ನೆ ಮಾಡಿದ್ದಾರೆ. ನಮ್ಮ ಹಿಂದೂ ಧರ್ಮ ಗೋ ಮಾತೆ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡಿ ಈ ರೀತಿ ಟ್ವೀಟ್ ಮಾಡಿದಿರಲ್ಲ ಸ್ವಾಮಿ. ಅಮಾಯಕರನ್ನು ಧರ್ಮದ ಖೆಡ್ಡಾದಲ್ಲಿ ಬೀಳಿಸಿ ನೀವು ಈತರಹ ಮಾಡೊದು ಸರಿಯೇ ಎಂದು ಪ್ರಶ್ನಿಸಿದ್ದಾರೆ.

ಅವ್ರೇನೋ ಸೆಕ್ಯೂಲರ್​ ಹೆಸರಲ್ಲಿ, ಸಂಸ್ಕೃತಿಯನ್ನೆಲ್ಲಾ ಬಿಟ್ಹಾಕಿ ಮಾಡಬಾರದ್ದನ್ನೆಲ್ಲಾ ಮಾಡ್ತಿದ್ದಾರೆ. ನೀವು ಅದನ್ನ ವೆಲ್​ಕಮ್​ ಅಂತೀದಿರಾ. ಇದನ್ನ ಬಿಜೆಪಿ ನಾಯಕರಿಂದ ನಿರೀಕ್ಷಿಸಿರಲಿಲ್ಲ ಎಂದು ಅಸಮಾಧಾನ ಹೊರ ಹಾಕಿದ್ದಾರೆ. ಕೇಡುಗಾಲಕ್ಕೆ ನಾಯಿ ಮೊಟ್ಟೆ ಇಟ್ಟಿತು ಅನ್ನೋ ಗಾದೆ ನಿಮಗೆ ಸರಿಯಾಗಿ ಅನ್ವಯಿಸುತ್ತೆ, ನೀವು ಯಾವುದನ್ನು ಸ್ವಾಗತಿಸುತ್ತಿದ್ದೀರಿ ಗೋಮಾಂಸ ಭಕ್ಷನೆಯನ್ನೋ ಕೇರಳ ಪ್ರವಾಸೋದ್ಯಮವನ್ನೋ ಎಂದು ಪ್ರಶ್ನೆ ಮಾಡಿದ್ದಾರೆ.

ಇಷ್ಟೆಲ್ಲಾ ಕಮೆಂಟ್​ಗಳಿಗೆ ಸ್ವತಃ ಸಚಿವ ಸಿ.ಟಿ ರವಿಯವರೇ ಸ್ಪಷ್ಟೀಕರಣ ನೀಡಿದ್ದಾರೆ. ಅಲ್ಲದೇ ಮತ್ತೊಂದು ಟ್ವೀಟ್ ಮಾಡಿ, ತುಳುನಾಡಿನ ಸ್ವಾದವನ್ನು ಆಹ್ಲಾದಿಸಿ, ಪತ್ರೊಡೆ, ಕೊಟ್ಟೆ ಕಡುಬು, ಹಲಸಿನ ಹಣ್ಣಿನ ಗಟ್ಟಿ, ಅವಲಕ್ಕಿ ಉಪ್ಕರಿ, ಬದನೆಕಾಯಿ ಮೊಸರು ಗೊಜ್ಜು ಸೇರಿದಂತೆ ಹಲವು ಸಸ್ಯಹಾರಿ ಖಾದ್ಯಗಳ ಫೋಟೋ ಪ್ರಕಟಿಸಿ, ರಾಜ್ಯಕ್ಕೆ ಆಗಮಿಸುವಂತೆ ಪ್ರವಾಸಿಗರನ್ನು ಆಹ್ವಾನಿಸಿ ಟ್ವೀಟ್ ಮಾಡಿದ್ದಾರೆ.

Intro:

ಬೆಂಗಳೂರು: ಕೇರಳ ಪ್ರವಾಸೋದ್ಯಮ ಇಲಾಖೆ ಪ್ರಕಟಿಸಿದ್ದ ಬೀಫ್ ಖಾದ್ಯದ ಫೋಟೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಾಕಿಕೊಂಡು ಪ್ರವಾಸಿಗರನ್ನು ರಾಜ್ಯಕ್ಕ ಆಹ್ವಾನ ಮಾಡಿರುವ ಸಚಿವ ಸಿ.ಟಿ ರವಿ ವಿರುದ್ಧ ನೆಟ್ಟಿಗರು ಕೆಂಡ ಕಾರಿದ್ದಾರೆ.

ಸಿ.ಟಿ ರವಿ ಟ್ವೀ್ ಗೆ ಕಮೆಂಟ್ ಗಳ ಸುರಿಮಳೆ ಸುರಿದಿದ್ದು,ನೀವು ಸ್ವಾಗತಿಸುತ್ತಿರುವುದು ಗೋ ಭಕ್ಷಣೆಯನ್ನೋ,ಕೇರಳ ಪ್ರವಾಸೋದ್ಯಮವನ್ನೋ? ಬೀಫ್ ಜನತಾ ಪಕ್ಷ ರಲ್ಲಿ ಎಂದೆಲ್ಲಾ ಟೀಕಾಪ್ರಹಾರ ನಡೆಸಿದ್ದಾರೆ.

ಟ್ವಿಟ್ಟಿಗರ ಪ್ರಶ್ನೆಗಳು:

ನಮ್ ಹಿಂದೂ ಧರ್ಮ ಗೋ ಮಾತೆ ಬಗ್ಗೆ ಪುಂಕಾನು ಪುಂಕ ಪುಂಗಿ ಈರೀತಿ ಟ್ವೀಟ್ ಮಾಡಿದಿರಲ್ಲ ಸ್ವಾಮಿ. ಅಮಾಯಕರನ್ನು ಧರ್ಮದ ಬಗ್ಗೆ ತಲೆಗೆ ತುಂಬಿ ನೀವು ಈತರ ಮಾಡೊದು ಸರಿಯೇ...

ಏನ್ಸಾರ್​ ಇದು, ಬೀಪ್​ ವೆಲ್​ಕಮ್​ ಮಾಡ್ತೀದಿರಾ..? ಅವ್ರೇನೋ ಸೆಕ್ಯೂಲರ್​ ಹೆಸರಲ್ಲಿ, ಸಂಸ್ಕ್ರತಿಯನ್ನೆಲ್ಲಾ ಬಿಟ್ಟಾಕಿ ಮಾಡಬಾರದ್ದನ್ನೆಲ್ಲಾ ಮಾಡ್ತೀದಾರೆ. ನೀವು ಅದನ್ನ ವೆಲ್​ಕಮ್​ ಅಂತೀದಿರಾ...! ನಾವು ಇದನ್ನ ಬಿಜೆಪಿ ನಾಯಕರಿಂದ ನಿರೀಕ್ಷಿಸಿರಲಿಲ್ಲ.

ಕೇಡುಗಾಲಕ್ಕೆ ನಾಯಿ ಮೊಟ್ಟೆ ಇಟ್ಟಿತು ಅನ್ನೋ ಗಾದೆ ನಿಮಗೆ ಸರಿಯಾಗಿ ಅನ್ವಯಿಸುತ್ತೆ, ನೀವು ಯಾವುದನ್ನ ಸ್ವಾಗತಿಸುತ್ತಿದ್ದೀರಿ ಗೋಮಾಂಸ ಭಕ್ಷನೆಯನ್ನೋ !? ಕೇರಳ ಪ್ರವಾಸೋದ್ಯಮವನ್ನೋ!?

ಇಷ್ಟೆಲ್ಲಾ ಕಮೆಂಟ್ ಗಳಿಗೆ ಸ್ವತಃ ಸಿ.ಟಿ ರವಿ ಸ್ಪಷ್ಟೀಕರಣ ನೀಡಿದ್ದಾರೆ ಅಲ್ಲದೇ ಮತ್ತೊಂದು ಟ್ವೀಟ್ ಮಾಡಿದ್ದಾರೆ. ತುಳುನಾಡಿನ ಸ್ವಾದವನ್ನು ಆಹ್ಲಾದಿಸಿ, ಪತ್ರೊಡೆ,ಕೊಟ್ಟೆ ಕಡುಬು,ಹಲಸಿನ ಹಣ್ಣಿನ ಗಟ್ಟಿ,ಅವಲಕ್ಕಿ ಉಪ್ಕರಿ,ಬದನೆಕಾಯಿ ಮೊಸರು ಗೊಜ್ಜು ಸೇರಿದಂತೆ ಹಲವು ಸಸ್ಯಹಾರಿ ಖಾದ್ಯಗಳ ಫೋಟೋ ಪ್ರಕಟಿಸಿ ರಾಜ್ಯಕ್ಕೆ ಆಗಮಿಸುವಂತೆ ಪ್ರವಾಸಿಗರನ್ನು ಆಹ್ವಾನಿಸಿ ಟ್ವೀಟ್ ಮಾಡಿದ್ದಾರೆ.Body:.Conclusion:
Last Updated : Jan 17, 2020, 8:25 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.