ETV Bharat / state

ಕೃಷಿ ಕ್ಷೇತ್ರದ ಸುಧಾರಣೆ ಕುರಿತು ಎಫ್​ಕೆಸಿಸಿಐ ಪದಾಧಿಕಾರಿಗಳೊಂದಿಗೆ ಸಚಿವ ಚಲುವರಾಯಸ್ವಾಮಿ ಚರ್ಚೆ - ​ ETV Bharat Karnataka

ವಿಕಾಸಸೌಧದ ಕಚೇರಿಯಲ್ಲಿ ಎಫ್​ಕೆಸಿಸಿಐ ಪದಾಧಿಕಾರಿಗಳು ಹಾಗು ಕೈಗಾರಿಕೋದ್ಯಮಿಗಳು ಸಚಿವ ಚಲುವರಾಯಸ್ವಾಮಿ ಅವರನ್ನು ಭೇಟಿಯಾದರು.

ಸಚಿವ ಚಲುವರಾಯಸ್ವಾಮಿ
ಸಚಿವ ಚಲುವರಾಯಸ್ವಾಮಿ
author img

By ETV Bharat Karnataka Team

Published : Oct 30, 2023, 9:39 PM IST

ಬೆಂಗಳೂರು: ರಾಜ್ಯದಲ್ಲಿ ಕೃಷಿ ಕ್ಷೇತ್ರದ ಸುಧಾರಣೆ ಕುರಿತಂತೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಎಫ್​ಕೆಸಿಸಿಐ ಪದಾಧಿಕಾರಿಗಳು ಹಾಗು ಕೈಗಾರಿಕೋದ್ಯಮಿಗಳೊಂದಿಗೆ ಮಹತ್ವದ ಚರ್ಚೆ ನಡೆಸಿದ್ದಾರೆ. ವಿಕಾಸಸೌಧದ ಕಚೇರಿಯಲ್ಲಿ ಸೋಮವಾರ ಸಂಜೆ ತಮ್ಮನ್ನು ಭೇಟಿಯಾದ ಎಫ್​ಕೆಸಿಸಿಐ ಪದಾಧಿಕಾರಿಗಳು ಹಾಗು ಕೈಗಾರಿಕೋದ್ಯಮಿಗಳೊಂದಿಗೆ 'ನಮ್ಮ ರಾಜ್ಯ ನಮ್ಮ ಕೃಷಿ' ಸಮ್ಮೇಳನ ಆಯೋಜನೆ, ಕೃಷಿ ಉತ್ಪಾದನೆ ಮತ್ತು ಮಾರುಕಟ್ಟೆ ವ್ಯವಸ್ಥೆ, ಮೌಲ್ಯವರ್ಧನೆ, ಕೃಷಿ ಯಾಂತ್ರೀಕರಣಗಳ ಕುರಿತು ಸಚಿವರು ವಿಸೃತ ಚರ್ಚೆ ನಡೆಸಿದರು.

ರಾಜ್ಯದಲ್ಲಿ ಯಾಂತ್ರೀಕರಣ ಯೋಜನೆಯನ್ನು ಒಳಪಡಿಸುವಾಗ ಕರ್ನಾಟಕದಲ್ಲಿಯೇ ಯಂತ್ರಗಳನ್ನು ತಯಾರಿಸುವ ಉದ್ದಿಮೆದಾರರಿಗೆ ಆದ್ಯತೆ ನೀಡುವುದು. ಆಂಧ್ರಪ್ರದೇಶದ ಮಾದರಿಯಂತೆ ರಾಜ್ಯದಲ್ಲಿ ಗುಣಮಟ್ಟದ ಬೀಜಗಳನ್ನು ಉತ್ಪಾದಿಸಲು ಹಾಗು ಉತ್ಪಾದನೆ ಹೆಚ್ಚಿಸಲು ವಿದೇಶಗಳಿಂದ ಬೀಜಗಳನ್ನು ಆಮದು ಮಾಡಿಕೊಳ್ಳಲು ಪ್ರಸ್ತುತವಿರುವ ಮಾರ್ಗಸೂಚಿಗಳನ್ನು ಸುಲಭಗೊಳಿಸುವ ಕುರಿತು ಮಾತನಾಡಿದರು.

ಉದ್ದಿಮೆದಾರರು ರಾಜ್ಯದಲ್ಲಿ ಉದ್ದಿಮೆ ಪ್ರಾರಂಭಿಸಲು ಶೇ 70ರಷ್ಟು ಹಣ, ಭೂಮಿ ಖರೀದಿಸಲು ವೆಚ್ಚವಾಗುವುದರಿಂದ ವಿಶೇಷವಾಗಿ ರಾಜ್ಯ ಸರ್ಕಾರವು ಬೀಜ ಸಂಶೋಧನೆ, ಬೀಜ ಸಂಸ್ಕರಣೆ ಕೃಷಿ ಉಪಕರಣಗಳ ತಯಾರಿಕೆಗೆ ಆದ್ಯತೆಯ ಮೇಲೆ ಕಡಿಮೆ ದರದಲ್ಲಿ ಭೂಮಿ ಒದಗಿಸುವ ನೀತಿಯಲ್ಲಿ ತೆರವು ಕುರಿತು ಸಮಾಲೋಚನೆ ನಡೆಸಲಾಯಿತು.

ರಾಜ್ಯದಲ್ಲಿ ಈಗಾಗಲೇ ಕೃಷಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ಒದಗಿಸಿರುವ 150 ಕಬ್ಬು ಕತ್ತರಿಸುವ ಯಂತ್ರಗಳನ್ನು ಒದಗಿಸಿದ್ದು ಬಹುತೇಕ ರೈತರು ಇಲ್ಲಿಯವರೆಗೆ ನೋಂದಣಿ ಶುಲ್ಕ ದುಬಾರಿಯಾಗಿರುವುದರಿಂದ ಹಾಗು ಈ ವರ್ಷದ ಆಯವ್ಯಯದಲ್ಲಿ ಹಾರ್ವೆಸ್ಟರ್ ಹಬ್ ಮಾಡುವಾಗ ಕಬ್ಬು ಕಟಾವು ಯಂತ್ರಗಳ ನೋಂದಣಿ ಶುಲ್ಕವನ್ನು ಆಂಧ್ರ ಹಾಗು ಮಹಾರಾಷ್ಟ್ರ ಮಾದರಿಯಲ್ಲಿ ರಾಜ್ಯ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಂಡು ಕಡಿತಗೊಳಿಸುವುದರ ಬಗ್ಗೆಯೂ ಚರ್ಚಿಸಲಾಯಿತು.

ಬೆಂಗಳೂರಿನಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಇರುವುದರಿಂದ ದೆಹಲಿ, ಚೆನೈ, ಮುಂಬೈನಲ್ಲಿರುವಂತೆ ಬೆಂಗಳೂರಿನಲ್ಲಿ ಪ್ರಾದೇಶಿಕ ಘಟಕ ಕ್ವಾರಟೈನ್ ಸ್ಥಾಪನೆ ಮಾಡಿ ವಿದೇಶಗಳಿಂದ ಉತ್ತಮ ತಳಿಯ ಬೀಜಗಳನ್ನು ಆಮದು ಮಾಡಿಕೊಳ್ಳಲು ನಿಯಮಗಳನ್ನು ಸಡಿಲಗೊಳಿಸುವ ಕುರಿತು ಮಾತಾಡಲಾಯಿತು.

ಚಲುವರಾಯಸ್ವಾಮಿ ಎಫ್​ಕೆಸಿಸಿಐ ಮನವಿ ಪರಿಶೀಲಿಸಿ 'ನಮ್ಮ ರಾಜ್ಯ ನಮ್ಮ ಕೃಷಿ' ಕಾರ್ಯಕ್ರಮಕ್ಕೆ ಬರುವುದಾಗಿ ಸಮ್ಮತಿಸಿದರು. ಹಾಗೂ ಚರ್ಚಿಸಿದ ವಿಷಯಗಳ ಕುರಿತು ಮಾನ್ಯ ಮುಖ್ಯಮಂತ್ರಿಗಳ ಹಾಗು ಇಲಾಖೆ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೃಷಿ ಆಧಾರಿತ ಸಂಸ್ಥೆಗಳನ್ನು ಸ್ಥಾಪಿಸಲು ಸೂಕ್ತ ನಿಯಮಗಳನ್ನು ತರಲು ಪ್ರಯತ್ನಿಸುತ್ತೇನೆ. ಒಟ್ಟಾರೆ ರಾಜ್ಯದ ಕೃಷಿ ಅಭಿವೃದ್ಧಿಯಲ್ಲಿ ರೈತರು ಅಧಿಕಾರಿಗಳು, ಉದ್ದಿಮೆದಾರರು ಹಾಗು ವಿಜ್ಞಾನಿಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಲು ರಾಜ್ಯದಲ್ಲಿ ಸೂಕ್ತ ವಾತಾವರಣ ನಿರ್ಮಿಸಲು ಎಲ್ಲಾ ಪ್ರಯತ್ನ ಮಾಡುತ್ತೇನೆಂದೂ ತಿಳಿಸಿದರು.‌

ಸಭೆಯಲ್ಲಿ ಎಫ್​ಕೆಸಿಸಿಐ ಮುಖ್ಯಸ್ಥ ಶಾಜ್ ಮಂಗಲಂ ಹಾಗು ರವೀಂದ್ರ ಅಗರವಾಲ್ ಸೇರಿದಂತೆ ಇತರೆ ಕೈಗಾರಿಕೋದ್ಯಮಿಗಳು ಭಾಗವಹಿಸಿದ್ದರು.

ಇದನ್ನೂ ಓದಿ: ನ.9 ರಿಂದ ಮೈಸೂರಿನಲ್ಲಿ ಮುಖ್ಯಮಂತ್ರಿ ನಿವಾಸದ‌ ಮುಂದೆ ರೈತರಿಂದ ಧರಣಿ ಸತ್ಯಾಗ್ರಹ: ಕುರುಬೂರು ಶಾಂತಕುಮಾರ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.