ಕೆ.ಆರ್.ಪುರ: ಮಹದೇವಪುರ ಗ್ರಾಮದಲ್ಲಿ ರೆಡ್ಡಿ ಜನಸಂಘದ ವತಿಯಿಂದ ನಡೆದ 609ನೇ ಶ್ರೀ ಮಹಯೋಗಿ ವೇಮನ ಜಯಂತೋತ್ಸವವನ್ನು ಸಚಿವ ಭೈರತಿ ಬಸವರಾಜ್ ಉದ್ಘಾಟಿಸಿದರು.
ಓದಿ: ಡಿಜೆ ಹಳ್ಳಿ ಗಲಭೆ : ಕ್ಲೇಮ್ ಕಮಿಷನರ್ ಗೆ ಒದಗಿಸಿರುವ ಸೌಲಭ್ಯಗಳ ವಿವರ ಕೇಳಿದ ಹೈಕೋರ್ಟ್
ಕೆ.ಆರ್.ಪುರ ಕ್ಷೇತ್ರದ ದೇವಸಂದ್ರ ವಾಡ್೯ನ ಮಹದೇವಪುರ ಗ್ರಾಮದಲ್ಲಿ ಮಾತನಾಡಿದ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್, ರೆಡ್ಡಿ ಜನಾಂಗದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.
ರೆಡ್ಡಿ ಜನಾಂಗ ಅಭಿವೃದ್ಧಿಗೆ ಸಮುದಾಯ ಭವನ ನಿರ್ಮಾಣ, ರಿಂಗ್ ರಸ್ತೆಗೆ ಮಾಜಿ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಅವರ ಹೆಸರು ನಾಮಕರಣ ಮಾಡುವ ನಿಟ್ಟಿನಲ್ಲಿ ಶ್ರಮಿಸುವುದಾಗಿಯೂ ಈ ವೇಳೆ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ, ದಿನನಿತ್ಯದ ಜೀವನದಲ್ಲಿ ಮಹಾಯೋಗಿ ವೇಮನ ರೆಡ್ಡಿ ಅವರ ವಿಚಾರಧಾರೆಗಳನ್ನು ಅಳವಡಿಸಿಕೊಂಡು ನಡೆಯುವಂತೆ ಮನವಿ ಮಾಡಿದರು.
ಸಮಾಜವನ್ನು ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಯುವಜನತೆಯ ಶೈಕ್ಷಣಿಕ ಬೆಳವಣಿಗೆಗೆ ಹೆಚ್ಚು ಸಹಕಾರಿಯಾಗುವಂತ ಕಾರ್ಯಕ್ರಮವನ್ನು ಜಾರಿಗೊಳಿಸಲು ಶ್ರಮಿಸಲಿದ್ದೇವೆ. ಎಲ್ಲಾ ಸಮಾಜದ ಅಭಿವೃದ್ಧಿಗೆ ಸರ್ಕಾರ ಬದ್ದವಾಗಿದ್ದು, ಅದರಂತೆ ರೆಡ್ಡಿ ಜನ ಸಂಘಕ್ಕೂ ಪೂರಕ ಕಾರ್ಯಗಳನ್ನು ಮಾಡಲಿದ್ದೇವೆ ಎಂದು ಹೇಳಿದರು.