ದಾವಣಗೆರೆ : ಜಿಲ್ಲೆಯಲ್ಲಿ ಲಾಕ್ಡೌನ್ ಘೋಷಣೆಯಾಗಿದ್ದರಿಂದ ಸಾಕಷ್ಟು ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಈ ನಡುವೆ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಉಡಾಫೆ ಮಾತುಗಳನ್ನಾಡಿ ಜನರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಈಗಾಗಲೇ ಜಿಲ್ಲೆಯ ರೈತರ ಭತ್ತದ ಬೆಳೆ ಮಾರಾಟಕ್ಕೆ ಬಂದಿದ್ದು, ಸರ್ಕಾರ ಖರೀದಿ ಕೇಂದ್ರ ತೆರೆಯಲು ಹಿಂದೇಟು ಹಾಕುತ್ತಿದೆ. ಭತ್ತವನ್ನು ಕಡಿಮೆ ಬೆಲೆಗೆ ಖರೀದಿದಾರರು ಕೊಂಡುಕೊಳ್ಳುತ್ತಿದ್ದು, ಸರ್ಕಾರದಿಂದ ಖರೀದಿ ಕೇಂದ್ರ ಪ್ರಾರಂಭಿಸಿ, ಬೆಂಬಲ ಬೆಲೆ ನೀಡಬೇಕು ಎಂಬ ಪ್ರಶ್ನೆಗೆ ಉತ್ತರಿಸಿದ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್, 'ರೈತರಿಗೆ ಈ ಬೆಳೆ ಹೋದ್ರೆ ಮತ್ತೆ ಬೆಳೆ ಬರುತ್ತೆ ಬಿಡಿ' ಎಂದಿದ್ದಾರೆ. ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಈಗಿನ ಕೋವಿಡ್ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಬೊಕ್ಕಸ ಖಾಲಿಯಾಗಿದ್ದು, ಟ್ಯಾಕ್ಸ್ ಕಲೆಕ್ಷನ್ ಆಗಿಲ್ಲ. ಈಗ ಖರೀದಿ ಕೇಂದ್ರ ತೆಗೆಯುವುದು ಹೇಗೆ?. ಸರ್ಕಾರದ ಪರಿಸ್ಥಿತಿ ಸರಿ ಇಲ್ಲ. ಈ ಬೆಳೆ ಹೋದರೆ ಹೋಗಲಿ, ಮತ್ತೆ ಬೆಳೆ ಬರಲ್ವಾ? ಎಂದಿದ್ದಾರೆ.
ಓದಿ: COVID update: ರಾಜ್ಯದಲ್ಲಿಂದು 14,304 ಮಂದಿಗೆ ವೈರಸ್.. 29,271 ಜನ ಡಿಸ್ಚಾರ್ಜ್