ETV Bharat / state

ವಿಶೇಷ ಅಭಿವೃದ್ಧಿ ಯೋಜನೆಗೆ ಕನಿಷ್ಠ ಕಾಳಜಿ: ಹೇಗಿದೆ ಬೊಮ್ಮಾಯಿ‌ ಸರ್ಕಾರದ ಬಜೆಟ್ ಪ್ರಗತಿ? - ಸಮಗ್ರ ಬಜೆಟ್ ಪ್ರಗತಿ

ವಿಶೇಷ ಅಭಿವೃದ್ಧಿ ಯೋಜನೆ ಸೇರಿದಂತೆ ಇಲಾಖಾವಾರು ಪ್ರಗತಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಹೇಳಿಕೊಳ್ಳುವಂಥ ಸಾಧನೆ ಮಾಡಿಲ್ಲ. ಕಳೆದ ಬಾರಿ ಬಜೆಟ್​ನಲ್ಲಿ ಘೋಷಣೆಯಾದ ಹಲವಾರು ಇಲಾಖೆಗಳ ಅನುದಾನಗಳು ಬಿಡುಗಡೆಯೇ ಆಗಿಲ್ಲ. ಈಗ ಮತ್ತೊಂದು ಬಜೆಟ್ ಬರುತ್ತಿದೆ. ಈ ಮಧ್ಯೆ ಸರ್ಕಾರದ ಸಮಗ್ರ ಬಜೆಟ್ ಪ್ರಗತಿ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ವಿಶೇಷ ಅಭಿವೃದ್ಧಿ ಯೋಜನೆಗೆ ಕನಿಷ್ಠ ಕಾಳಜಿ; ಹೇಗಿದೆ ಬೊಮ್ಮಾಯಿ‌ ಸರ್ಕಾರದ ಬಜೆಟ್ ಪ್ರಗತಿ?
minimum-concern-for-special-development-plan-how-is-the-budget-progress
author img

By

Published : Jan 23, 2023, 6:57 PM IST

ಬೆಂಗಳೂರು: ಇನ್ನೇನು 2022-23ರ ಆರ್ಥಿಕ ವರ್ಷ ಮುಕ್ತಾಯದ ಹಂತದಲ್ಲಿದೆ. ಆದರೆ, ಅತ್ಯಂತ ಹಿಂದುಳಿದ ತಾಲೂಕುಗಳ ಕಲ್ಯಾಣಕ್ಕಾಗಿನ ವಿಶೇಷ ಅಭಿವೃದ್ಧಿ ಯೋಜನೆಗೆ ಚುರುಕು ಮೂಡಿಸಲು ಬೊಮ್ಮಾಯಿ ಸರ್ಕಾರಕ್ಕೆ ಇನ್ನೂ ಸಾಧ್ಯವಾಗಿಲ್ಲ. ಬಜೆಟ್ ವರ್ಷ ಮುಗಿಯುತ್ತಾ ಬಂದರೂ ವಿಶೇಷ ಅಭಿವೃದ್ಧಿ ಯೋಜನೆಯ ಶೇಕಡಾವಾರಿನಲ್ಲಿ ಕಾಲು ಭಾಗವೂ ಪ್ರಗತಿ ಕಂಡಿಲ್ಲ.

ಬೊಮ್ಮಾಯಿ ಸರ್ಕಾರ ವಿಶೇಷ ಅಭಿವೃದ್ಧಿ ಯೋಜನೆಗೆ ಚುರುಕು ಮುಟ್ಟಿಸುವಲ್ಲಿ ಎಡವಿರೋದು ಎದ್ದು ಕಾಣುತ್ತದೆ. ಮೂರನೇ ತ್ರೈಮಾಸಿಕ ಅಂತ್ಯವಾಗಿ, ಬಜೆಟ್ ವರ್ಷದ ಕೊನೆ ತ್ರೈಮಾಸಿಕ ಪ್ರಗತಿಯಲ್ಲಿದ್ದರೂ ವಿಶೇಷ ಅಭಿವೃದ್ಧಿ ಯೋಜನೆಯಡಿ ಅನುದಾನ ಬಳಕೆ ಕುಂಟುತ್ತಲೇ ಸಾಗುತ್ತಿದೆ. ಬೊಮ್ಮಾಯಿ ಸರ್ಕಾರ ವಿಶೇಷ ಅಭಿವೃದ್ಧಿ ಯೋಜನೆಯಡಿ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗಾಗಿನ‌ ಅನುದಾನ ಬಳಸುವಲ್ಲಿ ಮುಗ್ಗರಿಸಿ ಬಿದ್ದಿದೆ.

ಡಾ. ನಂಜುಂಡಪ್ಪ ವರದಿಯಂತೆ ಹಿಂದುಳಿದ ತಾಲೂಕುಗಳಿಗೆ ವಿಶೇಷ ಅಭಿವೃದ್ಧಿ ಯೋಜನೆಯಡಿ ಅನುದಾನ ನೀಡಲಾಗುತ್ತದೆ. ಈ ಯೋಜನೆಗೆ ಪ್ರತಿವರ್ಷ ಕೋಟ್ಯಂತರ ಕೋಟಿ ರೂ. ಅನುದಾನ ನೀಡಲಾಗುತ್ತದೆ. ಆದರೆ, ಬೊಮ್ಮಾಯಿ ಸರ್ಕಾರ ತಮ್ಮ ಆಡಳಿತಾವಧಿಯಲ್ಲೂ ವಿಶೇಷ ಅಭಿವೃದ್ಧಿ ಯೋಜನೆಯ ಅನುದಾನದ ಸಮರ್ಪಕ ಬಳಕೆಯಲ್ಲಿ ಎಡವಿದ್ದಾರೆ. ಪ್ರಧಾನಿ ಮೋದಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಬಂದು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು. ಆದರೆ, ಈಗಲೂ ಆ ಭಾಗದ ವಿಶೇಷ ಅಭಿವೃದ್ಧಿಗೆ ಕೊಡಲಾದ ಅನುದಾನದಲ್ಲಿ ಎಳ್ಳಷ್ಟು ಮಾತ್ರ ಬಳಕೆ ಮಾಡಲಾಗಿದೆ.

ವಿಶೇಷ ಅಭಿವೃದ್ಧಿ ಯೋಜನೆ: ವಿಶೇಷ ಅಭಿವೃದ್ಧಿ ಯೋಜನೆಯಡಿ ಪ್ರಗತಿ ಕೇವಲ ಶೇ 23ರಷ್ಟಾಗಿದೆ. 2022-23 ಸಾಲಿನಲ್ಲಿ ವಿಶೇಷ ಅಭಿವೃದ್ಧಿ ಯೋಜನೆಗೆ (SDP) ಬೊಮ್ಮಾಯಿ ಸರ್ಕಾರ ಈವರೆಗೆ 3,426.37 ಕೋಟಿ ರೂ. ಅನುದಾನ ಹಂಚಿಕೆ ಮಾಡಿದೆ. ಆರ್ಥಿಕ ವರ್ಷದ 9 ತಿಂಗಳು ಪೂರ್ಣಗೊಂಡಿದೆ. ಆದರೆ ಪ್ರಗತಿ ಕಂಡಿದ್ದು ಎಳ್ಳಷ್ಟು.

ಮೂರನೇ ತ್ರೈಮಾಸಿಕದಲ್ಲೂ ವಿಶೇಷ ಅಭಿವೃದ್ಧಿ ಯೋಜನೆ ಪ್ರಗತಿಗೆ ಚುರುಕು ಸಿಗುತ್ತೆ ಅಂದುಕೊಂಡರೆ ಅದು ಸಾಧ್ಯವಾಗಿಲ್ಲ. 13 ಇಲಾಖೆಗಳಿಗೆ ವಿಶೇಷ ಅಭಿವೃದ್ಧಿ ಯೋಜನೆಯಡಿ 2022-23ಸಾಲಿನ ನವೆಂಬರ್ ವರೆಗೆ ಬಿಡುಗಡೆಯಾದ ಅನುದಾನ ಕೇವಲ 876.94 ಕೋಟಿ ರೂ. ಮಾತ್ರ. ಒಟ್ಟು 3,426.37 ಕೋಟಿ ಅನುದಾನ ಹಂಚಿಕೆಯಲ್ಲಿ ಈವರೆಗೆ ಕೇವಲ 876.94 ಕೋಟಿ ರೂ. ಮಾತ್ರ ಬಿಡುಗಡೆಯಾಗಿದೆ. ಆ ಮೂಲಕ ಶೇ 26ರಷ್ಟು ಅಷ್ಟೇ ಪ್ರಗತಿ ಕಂಡಿದೆ.

ಈ ಅತ್ಯಲ್ಪ ಬಿಡುಗಡೆಯಾದ ಅನುದಾನದ ಪೈಕಿ ಈವರೆಗೆ ಖರ್ಚು ಮಾಡಿದ್ದು ಕೇವಲ 791.42 ಕೋಟಿ ರೂ. ಮಾತ್ರ. ಇನ್ನು ಒಟ್ಟು ಹಂಚಿಕೆ ಮುಂದೆ ಈವರೆಗೆ ಬೊಮ್ಮಾಯಿ‌ ಸರ್ಕಾರ ವೆಚ್ಚ ಮಾಡಿದ್ದು ಕೇವಲ ಶೇ. 23.10ರಷ್ಟು ಮಾತ್ರ ಎಂದು ಸಾಂಖ್ಯಿಕ ಇಲಾಖೆಯ ಅಂಕಿ - ಅಂಶ ನೀಡಿದೆ. ಒಟ್ಟು 7 ಇಲಾಖೆಗಳು ಅತ್ಯಂತ ಕಳಪೆ ಪ್ರಗತಿ ತೋರಿವೆ.

ಇಲಾಖಾವಾರು ಪ್ರಗತಿ ಹೀಗಿದೆ: ಲೋಕೋಪಯೋಗಿ ಇಲಾಖೆಗೆ SDPಯಡಿ ಒಟ್ಟು 70 ಕೋಟಿ ರೂ.‌ ಹಂಚಿಕೆಯಾಗಿದೆ‌. ಆದರೆ, ಬಿಡುಗಡೆಯೂ ಶೂನ್ಯ, ವೆಚ್ಚವೂ ಶೂನ್ಯ. ಇನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಒಟ್ಟು 75 ಕೋಟಿ ರೂ‌. ಹಂಚಿಕೆಯಾಗಿದ್ದು, ಬಿಡುಗಡೆಯಾಗಿರುವುದು 2.50 ಕೋಟಿ. ಆದರೆ, ವೆಚ್ಚ ಹಾಗೂ ಪ್ರಗತಿ ಕಂಡಿದ್ದು ಶೂನ್ಯ. ಇತ್ತ ವಸತಿ ಇಲಾಖೆಯಲ್ಲಿ ಒಟ್ಟು ಹಂಚಿಕೆಯಾಗಿರುವುದು 450 ಕೋಟಿ. ಬಿಡುಗಡೆ 37.50 ಕೋಟಿ, ವೆಚ್ಚ 306 ಕೋಟಿ ರೂ‌. ಆಗಿದ್ದು, ಶೇ 68ರಷ್ಟು ಪ್ರಗತಿ ಕಂಡಿದೆ. ಯೋಜನಾ ಇಲಾಖೆಯಲ್ಲಿ ಒಟ್ಟು 1,000 ಕೋಟಿ ರೂ.ಹಂಚಿಕೆ ಮಾಡಲಾಗಿದೆ. ಬಿಡುಗಡೆಯಾಗಿರವುದು 250 ಕೋಟಿ, ವೆಚ್ಚವಾಗಿರುವುದು 96.40 ಕೋಟಿ. ಆ ಮೂಲಕ ಪ್ರಗತಿ ಕೇವಲ 9.65.

ಸಮಾಜ ಕಲ್ಯಾಣ ಇಲಾಖೆಯಲ್ಲಿ ಒಟ್ಟು 85 ಕೋಟಿ ರೂ. ಹಂಚಿಕೆಯಾಗಿದೆ. ಈವರೆಗೆ ಬಿಡುಗಡೆಯಾಗಿದ್ದು, 70 ಕೋಟಿ, ವೆಚ್ಚ 70 ಕೋಟಿ ರೂ. ಪ್ರಗತಿ ಕಂಡಿರುವುದು ಶೇ 82.35ರಷ್ಟು. ಕೃಷಿ ಇಲಾಖೆಯಲ್ಲಿ ಒಟ್ಟು 45 ಕೋಟಿ ರೂ. ಹಂಚಿಕೆ ಮಾಡಿದೆ. ಈವರೆಗೆ 21 ಕೋಟಿ ರೂ. ಬಿಡುಗಡೆ ಮಾಡಿದೆ. 20.02 ಕೋಟಿ ರೂ. ವೆಚ್ಚ ಮಾಡಿದ್ದು, ಈವರೆಗೆ
ಶೇ 44.49ರಷ್ಟು ಪ್ರಗತಿ ಕಂಡಿದೆ. ಇನ್ನು ಕೌಶಲ್ಯಾಭಿವೃದ್ಧಿ ಇಲಾಖೆಯಲ್ಲಿ ಒಟ್ಟು ಹಂಚಿಕೆಯಾಗಿದ್ದು, 30 ಕೋಟಿ ರೂ., 15 ಕೋಟಿ ರೂ. ಬಿಡುಗಡೆಯಾಗಿದ್ದು, 15 ಕೋಟಿ ವೆಚ್ಚ ಮಾಡಿದ್ದು, ಶೇ 50ರಷ್ಟು ಪ್ರಗತಿ ಕಂಡಿದೆ.

ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಲ್ಲಿ ಒಟ್ಟು 60 ಕೋಟಿ ರೂ. ಹಂಚಿಕೆ ಮಾಡಿದೆ. ಬಿಡುಗಡೆ 36.16 ಕೋಟಿ ರೂ‌., ವೆಚ್ಚವಾಗಿದ್ದು 18.56 ಕೋಟಿ, ಪ್ರಗತಿ ಕಂಡಿದ್ದು ಶೇ 30.93%. ಇನ್ನು ಆರೋಗ್ಯ ಇಲಾಖೆಯಲ್ಲಿ ಒಟ್ಟು ಹಂಚಿಕೆಯಾಗಿರುವುದು 483.20 ಕೋಟಿ. ಬಿಡುಗಡೆ‌ ಮಾಡಿರುವುದು 264.70 ಕೋಟಿ ರೂ.‌, 198.75 ಕೋಟಿ ರೂ.‌ ವೆಚ್ಚ ಮಾಡಲಾಗಿದೆ. ಪ್ರಗತಿಯಾಗಿರುವುದು 41.13%. ಇತ್ತ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಒಟ್ಟು 527.67 ಕೋಟಿ ಹಂಚಿಕೆಯಾಗಿದೆ. ಆ ಪೈಕಿ 20.29 ಕೋಟಿ ಬಿಡುಗಡೆಯಾಗಿದ್ದರೆ, 40.41ಕೋಟಿ ರೂ. ವೆಚ್ಚವಾಗಿದೆ. ಕೇವಲ 7.66% ಪ್ರಗತಿ ಕಂಡಿದೆ.

ಉನ್ನತ ಶಿಕ್ಷಣ ಇಲಾಖೆಯಲ್ಲಿ ಒಟ್ಟು ಹಂಚಿಕೆಯಾಗಿದ್ದು 50 ಕೋಟಿ, ಈ ಪೈಕಿ ಬಿಡುಗಡೆಯಾಗಿರುವುದು 1.50 ಕೋಟಿ ರೂ., ವೆಚ್ಚವಾಗಿರುವುದು 1.50 ಕೋಟಿ ರೂ. ಪ್ರಗತಿ ಕಂಡಿರುವುದು ಕೇವಲ 3%. ಇನ್ನು ಶಿಕ್ಷಣ ಇಲಾಖೆಯಲ್ಲಿ ಒಟ್ಟು ಹಂಚಿಕೆಯಾಗಿರುವುದು 443.26 ಕೋಟಿ ರೂ., ಬಿಡುಗಡೆಯಾಗಿರುವುದು 140.87 ಕೋಟಿ, ವೆಚ್ಚವಾಗಿದ್ದು 17.94 ಕೋಟಿ ರೂ., ಪ್ರಗತಿ ಕಂಡಿದ್ದು ಕೇವಲ 4.05%. ಮಹಿಳಾ ಮತ್ತ ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಒಟ್ಟು 107.50 ಕೋಟಿ ಹಂಚಿಕೆಯಾಗಿದೆ. ಈ ಪೈಕಿ 17.40 ಕೋಟಿ ಬಿಡುಗಡೆಯಾಗಿದ್ದರೆ, 6.75 ಕೋಟಿ ವೆಚ್ಚವಾಗಿದ್ದು, ಕೇವಲ 6.28% ಪ್ರಗತಿಯಾಗಿದೆ ಎಂದು ಕೆಡಿಪಿ ಅಂಕಿ - ಅಂಶ ನೀಡಿದೆ.

ಸಮಗ್ರ ಬಜೆಟ್ ಪ್ರಗತಿ ಹೀಗಿದೆ:

ಇಲಾಖಾವಾರು ಬಜೆಟ್ ಅನುಷ್ಠಾನ - ಶೇ 55.82
ಪ.ಜಾತಿ ಉಪಯೋಜನೆ- ಶೇ 49.44
ಪ.ಪಂಗಡ ಉಪಯೋಜನೆ- ಶೇ.47.27
ಕೇಂದ್ರ ಪುರಸ್ಕೃತ ಯೋಜನೆ- ಶೇ 47.92
ಬಾಹ್ಯಾನುದಾನಿತ ಯೋಜನೆ- ಶೇ 31.93
ಮಹಿಳೆ/ಮಕ್ಕಳ ಬಜೆಟ್- ಶೇ 55.98

ಇದನ್ನೂ ಓದಿ: ಮುಂಬರುವ ಚುನಾವಣೆಗೆ ತಾರಾ ಮೆರುಗು ನೀಡಲು ಕಾಂಗ್ರೆಸ್ ಯತ್ನ.. ಸಿಗಲಿದೆಯಾ ಯಶಸ್ಸು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.