ಬೆಂಗಳೂರು: ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದರಿಂದ 'ನಮ್ಮ ಮೆಟ್ರೋ' ತನ್ನ ಸಮಯವನ್ನು ಮತ್ತಷ್ಟು ಬದಲಾಯಿಸಿಕೊಂಡಿದೆ. ಆರಂಭದಲ್ಲಿ ದಿನವೊಂದಕ್ಕೆ ಕನಿಷ್ಠ ಪ್ರಮಾಣ 4000 ಪ್ರಯಾಣಿಕರು ಓಡಾಡುತ್ತಿದ್ದರು. ಈಗ 55,000ಕ್ಕೆ ಹೆಚ್ಚಾಗಿದ್ದರಿಂದ ಪ್ರಯಾಣಿಕರ ಅನುಕೂಲತೆಗಾಗಿ ತನ್ನ ಸೇವಾ ಅವಧಿಯನ್ನು ಹೆಚ್ಚಿಸಿಕೊಂಡಿದೆ. ಇದರಿಂದ ಸಿಲಿಕಾನ್ ಸಿಟಿಯ ಜನರು ಇನ್ನು ಮುಂದೆ ಈ ಸಮಯದಲ್ಲೂ ಓಡಾಡಬಹುದು.
ಸಾಮಾಜಿಕ ಅಂತರ ಮಾನದಂಡಗಳ ಪಾಲನೆಯ ನಂತರವೂ ರೈಲಿನಲ್ಲಿ ಜನದಟ್ಟಣೆಯ ಸಮಯದಲ್ಲಿ ಕೂಡ ಸಾಕಷ್ಟು ಸ್ಥಳಾವಕಾಶ ಇದೆ. ಹೀಗಾಗಿ ನಮ್ಮ ಮೆಟ್ರೋ ಕಾರ್ಯಾಚರಣೆಯಲ್ಲಿ ಅ. 22 ರಿಂದ ವಾರದ ವಿವಿಧ ದಿನಗಳಲ್ಲಿ ಮೆಟ್ರೋ ಸೇವೆಗಳು ಲಭ್ಯವಿರಲಿದೆ.
ಮೆಟ್ರೋ ವೇಳಾಪಟ್ಟಿ ಹೀಗಿದೆ:
ಸೋಮವಾರದಿಂದ - ಶುಕ್ರವಾರದವರೆಗೆ (2ನೇ/4ನೇ ಶನಿವಾರಗಳನ್ನು ಹೊರತುಪಡಿಸಿ)
1) 5 ನಿಮಿಷಗಳ ಅಂತರದಲ್ಲಿ ಬೆಳಗ್ಗೆ 9.00 ರಿಂದ 10.00 ಗಂಟೆಯವರೆಗೆ ಮತ್ತು ಸಂಜೆ 5.30 ರಿಂದ 6.30 ಗಂಟೆಯವರೆಗೆ
2) 6 ನಿಮಿಷಗಳ ಅಂತರದಲ್ಲಿ ಬೆಳಗ್ಗೆ 8.00 ರಿಂದ 9.00 ಗಂಟೆಯವರೆಗೆ ಮತ್ತು ಬೆಳಗ್ಗೆ 10.00 ರಿಂದ 11.00 ಗಂಟೆಯವರೆಗೆ
3) 6 ನಿಮಿಷಗಳ ಅಂತರದಲ್ಲಿ ಸಂಜೆ 4.30 ರಿಂದ 5.30 ಗಂಟೆಯವರೆಗೆ ಮತ್ತು ಸಂಜೆ 6.30 ರಿಂದ ರಾತ್ರಿ 8.00 ಗಂಟೆಯವರೆಗೆ
4) ಉಳಿದ ಸಮಯದಲ್ಲಿ 12 ನಿಮಿಷಗಳ ಅಂತರದಲ್ಲಿ ರೈಲುಗಳು ಸಂಚರಿಸುತ್ತವೆ.
2ನೇ/4ನೇ ಶನಿವಾರಗಳು, ಭಾನುವಾರ ಮತ್ತು ಸಾಮಾನ್ಯ ರಜಾ ದಿನಗಳಂದು 8 ನಿಮಿಷಗಳ ಅಂತರದಲ್ಲಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಮತ್ತು ಸಂಜೆ 5 ರಿಂದ 7 ಗಂಟೆಯವರೆಗೆ ಓಡಾಡಲಿದೆ. ಉಳಿದ ಸಮಯದಲ್ಲಿ 12 ನಿಮಿಷಗಳ ಅಂತರದಲ್ಲಿ ರೈಲುಗಳು ಸಂಚರಿಸುತ್ತವೆ. ಪ್ರಯಾಣಿಕರ ಬೇಡಿಕೆ ಹೆಚ್ಚಳವಾದಲ್ಲಿ ಮಧ್ಯಂತರ ನಿಲ್ದಾಣಗಳಿಂದ ಹೆಚ್ಚುವರಿ ರೈಲು ಸೇವೆಗಳನ್ನು ಒದಗಿಸಲಾಗುತ್ತದೆ ಎಂದು ಅಧಿಕಾರಿ ವರ್ಗ ತಿಳಿಸಿದೆ.