ETV Bharat / state

ನಾಳೆಯಿಂದ ಮೈಸೂರು ರಸ್ತೆ-ಕೆಂಗೇರಿ ಮೆಟ್ರೋ ಸಂಚಾರ: ಒಡಾಟ ಸಮಯ, ದರ ನಿಗದಿ ಹೀಗಿದೆ..

author img

By

Published : Aug 29, 2021, 5:19 PM IST

ನಮ್ಮ ಮೆಟ್ರೋ ಎರಡನೇ ಹಂತದ ಮತ್ತೊಂದು ವಿಸ್ತರಿತ ಮಾರ್ಗವಾದ ಮೈಸೂರು ರಸ್ತೆ-ಕೆಂಗೇರಿಗೆ ನಾಳೆಯಿಂದ ವಾಣಿಜ್ಯ ಸಂಚಾರ ಆರಂಭವಾಗಲಿದೆ. ಈ ವಿಭಾಗದ ನಿರ್ಮಾಣ ಕಾಮಗಾರಿಯನ್ನು ಫೆಬ್ರವರಿ 2016 ರಲ್ಲಿ ಆರಂಭಿಸಲಾಯಿತು. ನೂತನ ಮಾರ್ಗದಲ್ಲಿ ಆರು ನಿಲ್ದಾಣಗಳು ಇದ್ದು, ನಾಯಂಡನಹಳ್ಳಿ, ರಾಜರಾಜೇಶ್ವರಿ ನಗರ, ಜ್ಞಾನಭಾರತಿ, ಪಟ್ಟಣಗೆರ, ಕೆಂಗೇರಿ ಬಸ್ ಟರ್ಮಿನಲ್ ನಿಲ್ದಾಣ ಮತ್ತು ಕೆಂಗೇರಿ ಮೆಟ್ರೋ ನಿಲ್ದಾಣಗಳಿವೆ.

ನಾಳೆಯಿಂದ ಮೈಸೂರು ರಸ್ತೆ-ಕೆಂಗೇರಿ ಮೆಟ್ರೋ ಸಂಚಾರ ಆರಂಭ

ಬೆಂಗಳೂರು: ನಮ್ಮ ಮೆಟ್ರೋ ಎರಡನೇ ಹಂತದ ಮತ್ತೊಂದು ವಿಸ್ತರಿತ ಮಾರ್ಗವಾದ ಮೈಸೂರು ರಸ್ತೆ-ಕೆಂಗೇರಿಗೆ ನಾಳೆಯಿಂದ ವಾಣಿಜ್ಯ ಸಂಚಾರ ಆರಂಭವಾಗಲಿದೆ. ಬೈಯಪ್ಪನಹಳ್ಳಿಯಿಂದ ಕೆಂಗೇರಿಗೆ ಪ್ರಯಾಣ ದರ ರೂ.56 ನಿಗದಿ ಮಾಡಲಾಗಿದೆ. ಇತ್ತ ಉದ್ದದ ಪ್ರಯಾಣ ಕೆಂಗೇರಿಯಿಂದ ಸಿಲ್ಕ್ ಇನ್‌ಸ್ಟಿಟ್ಯೂಟ್‌ಗೆ ರೂ.60 ನಿಗದಿ ಮಾಡಲಾಗಿದೆ. ಬೈಯಪ್ಪನಹಳ್ಳಿಯಿಂದ ಕೆಂಗೇರಿಗೆ 52 ನಿಮಿಷಗಳಲ್ಲಿ ಬರಬಹುದಾಗಿದೆ.

ರೈಲಿನ ಓಡಾಟ ಹೀಗಿರಲಿದೆ: ರೈಲುಗಳ ಅಂತರ ಎಲ್ಲಾ ಕೆಲಸದ ದಿನಗಳ ಜನದಟ್ಟಣೆ ಸಮಯದಲ್ಲಿ ಹೀಗಿರಲಿದೆ.

  • ಮೈಸೂರು ರಸ್ತೆ ಮತ್ತು ಬೈಯಪ್ಪನಹಳ್ಳಿ ವಿಭಾಗ; 5 ನಿಮಿಷಕ್ಕೊಂದು ರೈಲು
  • ಕೆಂಗೇರಿ ಮತ್ತು ಬೈಯಪ್ಪನಹಳ್ಳಿ ವಿಭಾಗ; 10 ನಿಮಿಷಕ್ಕೊಂದು ರೈಲು
  • ಜನದಟ್ಟಣೆಯಿಲ್ಲದ ಸಮಯದಲ್ಲಿ ಕೆಂಗೇರಿ ಮತ್ತು ಬೈಯಪ್ಪನಹಳ್ಳಿ ವಿಭಾಗ; 10 ನಿಮಿಷಕ್ಕೊಂದು ರೈಲು

ಭಾನುವಾರ ಸೇರಿದಂತೆ ಎಲ್ಲಾ ರಜಾದಿನಗಳಲ್ಲಿ ರೈಲುಗಳ ಅಂತರವೂ ಕೆಂಗೇರಿ ಮತ್ತು ಬೈಯಪ್ಪನಹಳ್ಳಿ ವಿಭಾಗದಲ್ಲಿ 10 ನಿಮಿಷಗಳ ಅಂತರದಲ್ಲಿ ಓಡಾಡಲಿದೆ. ಟರ್ಮಿನಲ್‌ಗಳಾದ ಬೈಯಪ್ಪನಹಳ್ಳಿ, ಕೆಂಗೇರಿ, ನಾಗಸಂದ್ರ ಮತ್ತು ಸಿಲ್ಕ್ ಇನ್ಸಿಟ್ಯೂಟ್​ನಿಂದ ಮೊದಲ ವಾಣಿಜ್ಯ ರೈಲು ಬೆಳಿಗ್ಗೆ 07:00 ಗಂಟೆಗೆ ಹೊರಡಲಿದೆ.

ಟರ್ಮಿನಲ್ ನಿಲ್ದಾಣಗಳಿಂದ ಕೊನೆಯ ರೈಲು ನಿರ್ಗಮನವೂ ಬೈಯಪ್ಪನಹಳ್ಳಿಯಿಂದ ರಾತ್ರಿ 08:05 ಗಂಟೆಗೆ ಮತ್ತು ಕೆಂಗೇರಿಯಿಂದ ರಾತ್ರಿ 08:00 ಗಂಟೆಗೆ, ನಾಗಸಂದ್ರದಿಂದ ರಾತ್ರಿ 08:05 ಗಂಟೆಗೆ ಮತ್ತು ಸಿಲ್ಕ್ ಇನ್ಸಿಟ್ಯೂಟ್​ನಿಂದ ರಾತ್ರಿ 08.00 ಗಂಟೆಗೆ ಹೊರಡಲಿದೆ. ಕೆಂಪೇಗೌಡ ಮೆಜೆಸ್ಟಿಕ್ ನಿಲ್ದಾಣದಿಂದ ಕೊನೆಯ ರೈಲು ಎಲ್ಲಾ ನಿಲ್ದಾಣಗಳಿಗೆ ರಾತ್ರಿ 08:30 ಗಂಟೆಗೆ ಹೊರಡುತ್ತದೆ.

ಏನೆಲ್ಲ ಇದೆ‌ ಹೊಸ ಮಾರ್ಗದಲ್ಲಿ?:

ಈ ವಿಭಾಗದ ನಿರ್ಮಾಣ ಕಾಮಗಾರಿಯನ್ನು ಫೆಬ್ರವರಿ 2016 ರಲ್ಲಿ ಆರಂಭಿಸಲಾಯಿತು. ನೂತನ ಮಾರ್ಗದಲ್ಲಿ ಆರು ನಿಲ್ದಾಣಗಳು ಇದ್ದು, ನಾಯಂಡನಹಳ್ಳಿ, ರಾಜರಾಜೇಶ್ವರಿ ನಗರ, ಜ್ಞಾನಭಾರತಿ, ಪಟ್ಟಣಗೆರ, ಕೆಂಗೇರಿ ಬಸ್ ಟರ್ಮಿನಲ್ ನಿಲ್ದಾಣ ಮತ್ತು ಕೆಂಗೇರಿ ಮೆಟ್ರೋ ನಿಲ್ದಾಣಗಳು‌ ಇವೆ.

7.5 ಕಿಮೀ ಉದ್ದದ ಎಲಿವೇಟೆಡ್ ಮೆಟ್ರೋ ಆಗಿದ್ದು, ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ 18.1 ಕಿಮೀ ಪೂರ್ವ ಪಶ್ಚಿಮ ಕಾರಿಡಾರ್​ನ (ನೇರಳೆ ಮಾರ್ಗದ) ಪಶ್ಚಿಮ ತುದಿಯಲ್ಲಿದೆ. ಈ ವಿಸ್ತರಣೆಯೊಂದಿಗೆ ಪೂರ್ವ-ಪಶ್ಚಿಮ ಕಾರಿಡಾರ್ 23 ನಿಲ್ದಾಣಗಳೊಂದಿಗೆ 25.6 ಕಿಮೀ ಉದ್ದವಾಗುತ್ತದೆ.

ಪ್ರಯಾಣಿಕರ ಅನುಕೂಲಕ್ಕಾಗಿ ಪ್ರತಿಯೊಂದು ನಿಲ್ದಾಣಕ್ಕೂ ಎಂಟು ಎಸ್ಕಲೇಟರ್‌ಗಳು ಮತ್ತು ನಾಲ್ಕು ಲಿಫ್ಟ್​ಗಳನ್ನು ಒದಗಿಸಲಾಗಿದೆ.‌ ರಸ್ತೆ ಪಕ್ಕದಲ್ಲಿರುವ ಒಂದು ನಿಲ್ದಾಣ ಕೆಂಗೇರಿ ಬಸ್ ಟರ್ಮಿನಲ್ ನಿಲ್ದಾಣದಲ್ಲಿ 6 ಎಸ್ಕಲೇಟರ್‌ಗಳು ಮತ್ತು 6 ಲಿಫ್ಟ್​ಗಳನ್ನು ಒದಗಿಸಲಾಗಿದೆ. ಈ ವಿಸ್ತರಣಾ ಮಾರ್ಗದ ಎಲ್ಲಾ 6 ನಿಲ್ದಾಣಗಳು ಒಟ್ಟು 1.5 ಮೆಗಾವ್ಯಾಟ್ ಸಾಮರ್ಥ್ಯದ ಛಾವಣಿಯ ಮೇಲ್ಭಾಗದ ಸೌರ ಶಕ್ತಿಯನ್ನು ಹೊಂದಲಿವೆ.

ಸೌರ ವಿದ್ಯುತ್ ಸ್ಥಾವರಗಳ ಸ್ಥಾಪನೆಯನ್ನು ಮಾರ್ಚ್ 2022 ರೊಳಗೆ ಪೂರ್ಣಗೊಳಿಸುವ ಗುರಿ ಹೊಂದಿದೆ. ಎಲ್ಲಾ 6 ನಿಲ್ದಾಣಗಳಲ್ಲಿ ಇಂಧನ ಕ್ಷಮತೆಯ ಎಲ್ಇಡಿ ದೀಪಗಳನ್ನು ಒದಗಿಸಲಾಗಿದೆ. ಎಲ್ಲಾ ನಿಲ್ದಾಣಗಳಿಗೆ ಹೊಸದಾಗಿ ನಿರ್ಮಿಸಿರುವ ಸರ್ವಿಸ್ ರಸ್ತೆಗೆ ಪ್ರವೇಶ/ನಿರ್ಗಮನಗಳನ್ನು ಒದಗಿಸಲಾಗಿದೆ.

2 ಕಿ.ಮೀ ಉದ್ದದ ಕಂಗೇರಿ-ಚಲಘಟ್ಟ, ಮುಂದುವರಿದ ವಿಸ್ತರಣೆಯನ್ನು ಮಾರ್ಚ್ 2022 ರೊಳಗೆ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ. ಈ ವಿಭಾಗವನ್ನು ಕಾರ್ಯಾರಂಭ ಮಾಡಿದ ನಂತರ, ಬೆಂಗಳೂರಿನಲ್ಲಿ 51 ನಿಲ್ದಾಣಗಳಿರುವ 56 ಕಿ.ಮೀ ಮೆಟ್ರೋ ಮಾರ್ಗ ಇದಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.