ETV Bharat / state

ಮುಂದಿನ ಹೋರಾಟದ ನಿರ್ಧಾರಕ್ಕೆ ಶನಿವಾರ ಎಲ್ಲ ಸಂಘ ಸಂಸ್ಥೆ, ಸಂಘಟನೆಗಳ ಜೊತೆ ಸಭೆ: ಕುರಬೂರು ಶಾಂತಕುಮಾರ್ - ಫ್ರೀಡಂ ಪಾರ್ಕ್​

ಚಿಂತನ ಮಂಥನ ವಿಚಾರಗೋಷ್ಠಿಯಲ್ಲಿ ರೈತ ನಾಯಕ ಕುರುಬೂರು ಶಾಂತಕುಮಾರ್ ಸೇರಿ ಪ್ರಮುಖರು ಹಲವು ನಿರ್ಣಯಗಳನ್ನು ಕೈಗೊಂಡಿದ್ದಾರೆ.

Kuraburu Shanthakumar
ಕುರಬೂರು ಶಾಂತಕುಮಾರ್
author img

By ETV Bharat Karnataka Team

Published : Sep 21, 2023, 5:47 PM IST

ಬೆಂಗಳೂರು: ತಮಿಳುನಾಡಿಗೆ ನೀರು ಹರಿಸುವುದು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ ಸಲ್ಲಿಸಬೇಕು. ಸ್ವತಂತ್ರ ನೀರು ನಿರ್ವಹಣಾ ಸಮಿತಿ ರಚಿಸಬೇಕು. ಕನ್ನಡ ಪರ ಹೋರಾಟಗಾರರ ಮೇಲಿನ ಪ್ರಕರಣಗಳನ್ನು ವಾಪಸ್ ಪಡೆಯಬೇಕು ಎನ್ನುವ ಮೂರು ನಿರ್ಣಯಗಳನ್ನು ಕರ್ನಾಟಕ ಜಲ ಸಂರಕ್ಷಣಾ ಸಮಿತಿ ಕೈಗೊಂಡಿದ್ದು, ಕರ್ನಾಟಕ ಬಂದ್ ಸೇರಿದಂತೆ ಕಾವೇರಿ ವಿಚಾರದಲ್ಲಿ ಮುಂದಿನ ಹೋರಾಟದ ಸ್ವರೂಪದ ಬಗ್ಗೆ ನಿರ್ಧಾರ ಕೈಗೊಳ್ಳಲು ಶನಿವಾರ ಬೆಂಗಳೂರಿನ ಎಲ್ಲಾ ಸಂಘ ಸಂಸ್ಥೆ, ಸಂಘಟನೆಗಳ ಸಭೆಯನ್ನು ಕರೆಯಲಾಗಿದೆ.

ಕರ್ನಾಟಕ ಜಲ ಸಂರಕ್ಷಣಾ ಸಮಿತಿಯಿಂದ ನಗರದ ರೇಸ್ ಕೋರ್ಸ್ ರಸ್ತೆಯಲ್ಲಿರುವ ಭಾರತೀಯ ವಿದ್ಯಾಭವನದಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೈಸರ್ಗಿಕ ವಿಕೋಪ ಕುಡಿಯುವ ನೀರಿನ ಅಗತ್ಯತೆ ಅರಿತುಕೊಳ್ಳದ ಅವೈಜ್ಞಾನಿಕ ಕರಡು ಆದೇಶವನ್ನು ಖಂಡಿಸಲು ಸರ್ಕಾರದ ವಚನ ಭ್ರಷ್ಟತೆ ಖಂಡಿಸಲು ನಮ್ಮ ನೀರು ನಮ್ಮ ಹಕ್ಕು ಪ್ರತಿಪಾದಿಸಲು ಚಿಂತನ ಮಂಥನ ವಿಚಾರಗೋಷ್ಠಿ ನಡೆಸಲಾಯಿತು. ರೈತ ಸಂಘ, ಆಮ್ ಆದ್ಮಿ ಪಕ್ಷ, ಜನತಾದಳ ಹಾಗು ಕನ್ನಡ ಪರ ಸಂಘಟನೆಗಳ ಪ್ರಮುಖರು ಸಭೆಯಲ್ಲಿ ಪಾಲ್ಗೊಂಡಿದ್ದರು. ಎಲ್ಲ ನಾಯಕರು ತಮ್ಮ ತಮ್ಮ ಅಭಿಪ್ರಾಯವನ್ನು ಸಭೆಯಲ್ಲಿ ವ್ಯಕ್ತಪಡಿಸಿದರು. ನಂತರ ಪ್ರಮುಖ ಮೂರು ನಿರ್ಣಯಗಳನ್ನು ಕೈಗೊಳ್ಳಲಾಯಿತು.

ನಿರ್ಣಯಗಳ ಕುರಿತು ಸಭೆ ಬಳಿಕ ಮಾಧ್ಯಮಗೋಷ್ಟಿ ನಡೆಸಿ ಮಾಹಿತಿ ನೀಡಿದ ರೈತ ನಾಯಕ ಕುರುಬೂರು ಶಾಂತಕುಮಾರ್, ಸುಪ್ರೀಂ ಕೋರ್ಟ್ ನೀರು ಹರಿಸುವ ವಿಚಾರದಲ್ಲಿ ಪ್ರಾಧಿಕಾರದ ಆದೇಶ ಪಾಲಿಸುವಂತೆ ಹೇಳಿದೆ. ಪ್ರಾಧಿಕಾರದ ಆದೇಶವನ್ನು ಸರ್ಕಾರ ಒಪ್ಪಬಾರದು. ಸಂಕಷ್ಟ ಸೂತ್ರ ತಯಾರು ಮಾಡದ ಕಾರಣ ಆದೇಶ ಪಾಲನೆ ಸಾಧ್ಯವಿಲ್ಲ ಎಂದು ಮರು ಪರಿಶೀಲನಾ ಅರ್ಜಿ ಸಲ್ಲಿಸಬೇಕು. ಅನಿವಾರ್ಯವಾದರೆ ಅಧಿಕಾರ ತ್ಯಾಗ ಮಾಡಲು ಸರ್ಕಾರದವರು ಸಿದ್ಧರಾಗುವಂತೆ ಕರೆ ನೀಡುವ ಮೊದಲ ನಿರ್ಣಯ ಕೈಗೊಳ್ಳಲಾಗಿದೆ.

ಇದರ ಜೊತೆ ಎರಡನೆಯ ಪ್ರಮುಖ ನಿರ್ಣಯ ಸ್ವತಂತ್ರ ನೀರು ನಿರ್ವಹಣಾ ಸಮಿತಿ ರಚಿಸಬೇಕು ಎನ್ನುವುದಾಗಿದೆ. ಕರ್ನಾಟಕ, ತಮಿಳುನಾಡು, ಪುದುಚೇರಿ, ಕೇರಳ ಸೇರಿ ನಾಲ್ಕು ರಾಜ್ಯಗಳ ರೈತ ಪ್ರತಿನಿಧಿಗಳ, ತಜ್ಞರ ಒಳಗೊಂಡ ಸಂವಿಧಾನ ಬದ್ಧ ಸಮಿತಿ ರಚಿಸಿ ಅದರ ವಶಕ್ಕೆ ಕಾವೇರಿ ನೀರು ನಿರ್ವಹಣಾ ಜವಾಬ್ದಾರಿ ವಹಿಸಬೇಕು ಎನ್ನುವ ನಿರ್ಣಯ ಕೈಗೊಳ್ಳಲಾಗಿದೆ. ಹಾಗು ಕನ್ನಡಪರ ಮತ್ತು ರೈತ ಹೋರಾಟಗಾರರ ಮೇಲಿನ ಪ್ರಕರಣಗಳನ್ನು ಕೈಬಿಡಬೇಕು ಎನ್ನುವ ಮೂರನೇಯ ನಿರ್ಣಯ ಕೈಗೊಳ್ಳಲಾಗಿದೆ.

ಬಿಜೆಪಿ ಅಧಿಕಾರಕ್ಕೆ ಬಂದಾಗ ಅವರ ಕಾರ್ಯಕರ್ತರ ಮೇಲಿನ ಕೇಸು ವಾಪಸ್ ಪಡೆಯಲಾಗುತ್ತದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಅವರ ಪಕ್ಷದವರ ಮೇಲಿನ ಕೇಸ್ ವಾಪಸ್ ಪಡೆಯುತ್ತಾರೆ. ಆದರೆ ನಮ್ಮ ಕೇಸ್ ಯಾರು ವಾಪಸ್ ಪಡೆಯಬೇಕು? ನಾವು ಸದಾ ಹೋರಾಟ ಮಾಡುತ್ತಲೇ ಇರುತ್ತೇವೆ. ಮೊದಲ ಸಂಪುಟದಲ್ಲೇ ಕಾಂಗ್ರೆಸ್​ನವರ ಕೇಸ್ ವಾಪಸ್ ಪಡೆದಿರಿ ನಾವು ಬಂದು ನಿಮ್ಮ ಮುಂದೆ ಭಿಕ್ಷೆ ಬೇಡಬೇಕಾ? ಕನ್ನಡಪರ, ನಾಡು ನುಡಿ, ನೆಲ ,ಜಲದ ವಿಷಯದ ಮೇಲೆ ಹೋರಾಟ ಮಾಡಿದವರ ಮೇಲಿನ ಕೇಸ್ ವಾಪಸ್ ಪಡೆಯಬೇಕು ಎನ್ನುವ ನಿರ್ಣಯ ಮಾಡಿದ್ದೇವೆ ಎಂದರು.

ಮುಂದುವರೆದ ಹೋರಾಟ ರೂಪುರೇಷೆ ಸಿದ್ಧಪಡಿಸಲು ಶನಿವಾರ ಫ್ರೀಡಂ ಪಾರ್ಕ್​ನಲ್ಲಿ ಬೆಂಗಳೂರಿನ ಎಲ್ಲ ಸಂಘ ಸಂಸ್ಥೆ, ಸಂಘಟನೆಗಳು, ಚಿತ್ರನಟರು, ವಕೀಲರ ಸಂಘ ಸೇರಿ ಎಲ್ಲರು ಸಭೆ ಸೇರಿ ಕರ್ನಾಟಕ ಬಂದ್ ಸೇರಿ ಮುಂದಿನ ಹೋರಾಟದ ಕುರಿತು ಚರ್ಚಿಸಿ ನಿರ್ಧಾರ ಮಾಡುತ್ತೇವೆ. ನೆಲ ಜಲ ವಿಚಾರದಲ್ಲಿ ಮಠಗಳ ಮುಖ್ಯಸ್ಥರು ಸರ್ಕಾರವನ್ನು ಎಚ್ಚರಿಸಲು ಮುಂದಾಗಬೇಕು ಎನ್ನುವ ಪ್ರಸ್ತಾಪವಾಗಿದೆ. ಅದರ ಬಗ್ಗೆಯೂ ಶನಿವಾರದ ಚರ್ಚೆಯಲ್ಲಿ ನಿರ್ಧರಿಸಲಾಗುತ್ತದೆ ಎಂದರು.

ರಾಜ್ಯದ ಎಲ್ಲ 28 ಸಂಸದರ ರಾಜೀನಾಮೆಗೆ ಆಗ್ರಹಿಸಬೇಕು. ಬೆಂಗಳೂರಿನ ಸಂಸದರ ಮನೆ ಮುಂದೆ ಪ್ರತಿಭಟನೆ ಮಾಡಬೇಕು. ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ರಾಜ್ಯದ ಪರ ದನಿ ಎತ್ತುತ್ತಿಲ್ಲ. ಹಾಗಾಗಿ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಬೇಕು. ನಮ್ಮ ರಾಜ್ಯ ಸರ್ಕಾರ ಬೆಂಗಳೂರಿನ ಜಿಎಸ್ಟಿ ಹಣ ತಡೆಯಬೇಕು. ಬೆಂಗಳೂರಿನಲ್ಲಿ ನೆಲೆಸಿರುವ ವಲಸಿಗರು ಹೋರಾಟದಲ್ಲಿ ಭಾಗಿಯಾಗಬೇಕು. ವಕೀಲರು, ಐಟಿ ಕಂಪನಿಗಳ ಮುಖ್ಯಸ್ಥರು ಬೆಂಬಲ ಕೊಡಬೇಕು. ಇಲ್ಲದೇ ಇದ್ದಲ್ಲಿ ಐಟಿ ಕಂಪನಿಗೆ ನೀರು ಪೂರೈಕೆ ಬಂದ್ ಮಾಡಿಸಬೇಕು. ದೊಡ್ಡ ದೊಡ್ಡ ಅಪಾರ್ಟ್​ಮೆಂಟ್​ಗಳಿಗೂ ನೀರು ನಿಲ್ಲಿಸುವ ಎಚ್ಚರಿಕೆ ನೀಡಬೇಕು. ನಿರ್ಮಾಣ ಸಂಸ್ಥೆ, ಕಾರ್ಖಾನೆಗಳಿಗೂ ನೀರು ಸ್ಥಗಿತವಾಗಲಿದೆ ಎನ್ನುವ ಎಚ್ಚರಿಕೆ ನೀಡಿ, ಎಲ್ಲರೂ ಕಾವೇರಿ ಹೋರಾಟದಲ್ಲಿ ಭಾಗವಹಿಸಬೇಕು ಎನ್ನುವ ಕರೆ ನೀಡುವ ಪ್ರಸ್ತಾಪವಾಗಿದೆ. ಮುಂದಿನ ಸಭೆಯಲ್ಲಿ ಇದರ ಬಗ್ಗೆ ಚರ್ಚಿಸಲಾಗುತ್ತದೆ ಎಂದು ಕುರಬೂರು ಶಾಂತಕುಮಾರ್ ಮಾಹಿತಿ ನೀಡಿದರು.

ಇದನ್ನೂ ಓದಿ : Cauvery water issue: ಕಾವೇರಿ ನಿರ್ವಹಣಾ ಮಂಡಳಿ, ಪ್ರಾಧಿಕಾರ ರದ್ದುಗೊಳಿಸಿ ಸ್ವತಂತ್ರ ಸಮಿತಿ ರಚಿಸಿ: ಕುರುಬೂರು ಶಾಂತಕುಮಾರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.