ETV Bharat / state

ಹೊಸ ಕಂಪನಿ ತೆರೆಯಲು QNET ಚಿಂತನೆ; ಮೋಸ ಹೋದವ್ರಿಂದ ಪ್ರತಿಭಟನೆ, ಪೊಲೀಸರ ದಾಳಿ

ಹಲವು ಮಂದಿಗೆ ವಂಚಿಸಿದ QNET ಕಂಪನಿ ಮತ್ತೆ ಸಭೆ ನಡೆಸಿದ್ದು ಬೆಂಗಳೂರು ಪೊಲೀಸರು ವಿಫಲಗೊಳಿಸಿದ್ದಾರೆ.

author img

By

Published : Sep 22, 2019, 3:52 PM IST

QNET ಕಂಪನಿಯಿಂದ ಮತ್ತೆ ಸಭೆ

ಬೆಂಗಳೂರು: ಹಲವು ಮಂದಿಗೆ ವಂಚಿಸಿದ QNET ಕಂಪನಿ ಮತ್ತೆ ಸಭೆ ನಡೆಸಿದ್ದು, ವಿಷಯ ತಿಳಿದು ವಂಚನೆಗೊಳಗಾದವರು ಪ್ರತಿಭಟನೆ ನಡೆಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು.

ನಗರ ಪೊಲೀಸರು ಹಾಗೂ ಸಿಸಿಬಿ ಅಧಿಕಾರಿಗಳು ಜಂಟಿಯಾಗಿ ದಾಳಿ ನಡೆಸಿ ಕಂಪನಿ ಸಭೆಯನ್ನು ಸ್ಥಗಿತಗೊಳಿಸಿದ್ದಾರೆ. ಯಲಹಂಕದ ರಾಯಲ್ ಆರ್ಕಿಡ್ ಹಾಲ್‌ನಲ್ಲಿ ಸಭೆ ಸೇರಲಾಗಿದೆ. ಈ ಸಭೆಯಲ್ಲಿ ವಿದೇಶದ ಸುಮಾರು 500ಕ್ಕೂ ಹೆಚ್ಚು ಕಂಪನಿಯ ಪದಾಧಿಕಾರಿಗಳು ಭಾಗಿಯಾಗಿದ್ದರು. ಈಗಾಗಲೇ ದೇಶದಲ್ಲಿ QNET ನಿಷೇಧಿಸಿ ಕೇಂದ್ರ ಸರ್ಕಾರ ಆದೇಶ ನೀಡಿದೆ.
ನೂತನ ಕಂಪನಿ ಹೆಸರಿನಲ್ಲಿ ಮತ್ತೆ ಕಾರ್ಯನಿರ್ವಹಿಸಲು ಈ ಸಭೆ ಕರೆಯಲಾಗಿತ್ತು ಎಂಬ ವಿಚಾರ ಬಹಿರಂಗವಾಗಿದೆ. ಕ್ಯೂನೆಟ್ ಚೈನ್ ಲಿಂಕ್ ಬ್ಯುಸಿನೆಸ್ ಇದಾಗಿದ್ದು ಕಡಿಮೆ ಅವಧಿಯಲ್ಲಿ ಹೆಚ್ಚಿನ ಹಣ ಗಳಿಸಿ ಎಂದು ನಂಬಿಸಿ ದೇಶದಲ್ಲಿ ಹಲವೆಡೆ ಕೋಟ್ಯಂತರ ರೂ ವಂಚಿಸಿರುವ ಆರೋಪ ಕಂಪನಿ ಮೇಲಿದೆ.

Intro:ಹಲವು ಮಂದಿಗೆ ವಂಚನೆ ಮಾಡಿದ QNET ಕಂಪನಿ ಮತ್ತೆ ಸಭೆ
ವಿಚಾರ ತಿಳಿದು ಪೊಲೀಸರ ದಾಳಿ

ಹಲವು ಮಂದಿಗೆ ವಂಚನೆ ಮಾಡಿದ QNET ಕಂಪನಿ ಮತ್ತೆ ಸಭೆ ನಡೆಸಲು ನಿರ್ಧಾರ ಮಾಡಿದ್ದು ಈ ವಿಚಾರ ತಿಳಿದು QNETನಿಂದ ವಂಚನೆಗೊಳಗಾದವರು ಇಂದು ಪ್ರತಿಭಟನೆ ನಡೆಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಹೀಗಾಗಿ ಬೆಂಗಳೂರು ಪೊಲೀಸರು ಹಾಗೂ ಸಿಸಿಬಿ ಜಂಟಿ ದಾಳಿ ಮಾಡಿ ಸಭೆಯನ್ನ ಸ್ಥಗಿತ ಗೊಳಿಸಿದ್ದಾರೆ.

ಯಲಹಂಕಾದ ರಾಯಲ್ ಆರ್ಕಿಡ್ ಹಾಲ್ ನಲ್ಲಿ ಸಭೆ ಸೇರಿದ್ದರು. ಈ ಸಭೆಗೆ ವಿದೇಶದ ಸುಮಾರು 500ಕ್ಕೂ ಹೆಚ್ಚು QNET ಪದಾಧಿಕಾರಿಗಳು ಭಾಗಿಯಾಗಿದ್ದರು .ಈಗಾಗ್ಲೇ‌ ದೇಶಾದ್ಯಂತ QNET ಬ್ಯಾನ್ ಮಾಡಿ ಕೇಂದ್ರ ಸರ್ಕಾರ ಆದೆಶ ನೀಡಿದೆ

ಆದ್ರು ಮತ್ತೆ ನೂತನ ಕಂಪನಿ ಹೆಸರಿನಲ್ಲಿ ಮತ್ತೆ ಕಾರ್ಯನಿರ್ವಹಿಸಲು ಸಭೆ ಕರೆದಿರುವ ವಿಚಾರ ಬಹಿರಂಗವಾಗಿದೆ. ಕ್ಯೂನೆಟ್ ಚೈನ್ ಲಿಂಕ್ ಬ್ಯುಸಿನೆಸ್ ಆಗಿದ್ದು ಕಡಿಮೆ ಅವಧಿಯಲ್ಲಿ ಹೆಚ್ಚಿನ ಹಣ ಗಳಿಸಿ ಎಂದು ದೇಶದಲ್ಲಿ ಕೋಟ್ಯಾಂತರ ಜನಕ್ಕೆ ವಂಚನೆ ಮಾಡಿತ್ತು.Body:KN_BNG_06-QNET_7204498Conclusion:KN_BNG_06-QNET_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.