ETV Bharat / state

ಸುಧಾಕರ್, ರಮೇಶ್ ಕುಮಾರ್​ ನಡುವಿನ 'ಅನರ್ಹ' ವಾದ ಮುಂದುವರಿಕೆ... - ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಹೇಳಿಕೆ

ಸಚಿವ ಡಾ. ಸುಧಾಕರ್ ಹಾಗೂ ಮಾಜಿ ಸ್ಪೀಕರ್ ರಮೇಶ್ ಕುಮಾರ್ ನಡುವೆ ವಿಧಾನಸಭೆಯಲ್ಲಿ ನಡೆದ ವಾಗ್ವಾದದ ಹಿನ್ನೆಲೆ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಂಡಿಸಿರುವ ಹಕ್ಕುಚ್ಯುತಿ ಪ್ರಸ್ತಾವನೆ ಮೇಲಿನ ಚರ್ಚೆ ಮುಂದುವರಿಯಿತು.

Medical Education minister Dr. Sudhakar
ಹಕ್ಕುಚ್ಯುತಿ ಪ್ರಸ್ತಾವನೆ ಮೇಲಿನ ಚರ್ಚೆ
author img

By

Published : Mar 12, 2020, 6:24 PM IST

ಬೆಂಗಳೂರು: ನಾವು 17 ಜನ ತಂದೆ ತಾಯಿ ಹೆಸರಿನ ಮೇಲೆ ಬೆಳೆದು ಬಂದಿಲ್ಲ. ಸ್ವಂತ ಪರಿಶ್ರಮದಿಂದ ಬಂದಿದ್ದೇವೆ. ನಮ್ಮನ್ನು ಅನರ್ಹ ಎಂದು ಹೇಳಿ ತೀರ್ಪು ಕೊಟ್ಟ ರಮೇಶ್ ಕುಮಾರ್, ಸ್ಥಾನದಿಂದ ಇಳಿದು ನಮ್ಮ ವಿರುದ್ಧ ಪ್ರಚಾರ ನಡೆಸಿದರು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಹೇಳಿದ್ರು.

ಸಚಿವ ಡಾ. ಸುಧಾಕರ್ ಹಾಗೂ ಮಾಜಿ ಸ್ಪೀಕರ್ ರಮೇಶ್ ಕುಮಾರ್ ನಡುವೆ ವಿಧಾನಸಭೆಯಲ್ಲಿ ನಡೆಸಿದ ವಾಗ್ವಾದದ ಹಿನ್ನೆಲೆ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಂಡಿಸಿರುವ ಹಕ್ಕುಚ್ಯುತಿ ಪ್ರಸ್ತಾವನೆ ಮೇಲಿನ ಚರ್ಚೆ ಮುಂದುವರಿಯಿತು. ಭೋಜನ ವಿರಾಮದ ನಂತರ ವಿಧಾನಸಭೆಯಲ್ಲಿ ಹಕ್ಕುಚ್ಯುತಿ ಪ್ರಸ್ತಾವನೆ ಮೇಲೆ ನಡೆದ ಚರ್ಚೆಯಲ್ಲಿ ಆಡಳಿತ-ಪ್ರತಿಪಕ್ಷ ಸದಸ್ಯರು ಪಾಲ್ಗೊಂಡರು.

ಆರಂಭದಲ್ಲಿ ಕೆಲ ಗೊಂದಲದ ನಂತರ ಸ್ಪೀಕರ್ ಮಾತನಾಡಿ, ಮೊನ್ನೆ ಅರ್ಧಕ್ಕೆ ನಿಲ್ಲಿಸಿದ್ದ ವಿಚಾರ ಹಾಗೂ ಹಕ್ಕುಚ್ಯುತಿ ಮೇಲೆ ಮಾತಾಡಿ ಎಂದರು. ಸಿದ್ದರಾಮಯ್ಯ ವಿರೋಧದ ನಡುವೆ ಮಾತು ಮುಂದುವರೆಸಿದ ಸುಧಾಕರ್, ನಾನು ಅಂದೇ ಮಾತನಾಡಿದ್ದರೆ ಹಕ್ಕುಚ್ಯುತಿ ಪ್ರಸ್ತಾಪವೇ ಬರುತ್ತಿರಲಿಲ್ಲ ಎಂದರು .

ಹಕ್ಕುಚ್ಯುತಿ ಪ್ರಸ್ತಾವನೆ ಮೇಲಿನ ಚರ್ಚೆ

ಸಂವಿಧಾನ ಮೇಲಿನ ಚರ್ಚೆಯಲ್ಲಿ ಮೊನ್ನೆ ಸಂಜೆ ಆರಂಭಿಸಿದೆ. ಸಂವಿಧಾನದ ಮೇಲೆ ಆರೋಪ, ಪ್ರತ್ಯಾರೋಪ ಕೇಳಿ ಬಂದವು. ಸದನದಲ್ಲಿ ನನಗೆ ಅವಕಾಶ ಸಿಕ್ಕಾಗ ಐತಿಹಾಸಿಕ ವಿಚಾರ ಪ್ರಸ್ತಾಪಿಸಿದಾಗ ಅವಕಾಶ ಸಿಗಲಿಲ್ಲ ಎಂದರೆ ಹೇಗೆ..? ನನ್ನ ಮಾತಿನಲ್ಲಿ 10 ಶೆಡ್ಯೂಲ್ ವಿಚಾರ ಬಂತು. ಪೀಠಕ್ಕೆ ಗೌರವ ಕೊಟ್ಟಿದ್ದೇನೆ. ಸ್ಪೀಕರ್ ಸ್ಥಾನದ ಮೇಲೆ ನಮಗೆ ಗೌರವವಿದೆ. ಆ ಸ್ಥಾನದಲ್ಲಿದ್ದಾಗ ರಮೇಶ್ ಕುಮಾರ್ ನೀಡಿದ ತೀರ್ಪು ನಮ್ಮನ್ನು ಅತಂತ್ರವಾಗಿಸಿತ್ತು ಎಂದರು.

ಸುಪ್ರೀಂಕೋರ್ಟ್​​ಗೆ ಹೋದಾಗ ಅಲ್ಲಿ ಬಂದ ತೀರ್ಪಿನಲ್ಲಿ ಆರೇಳು ಪುಟ ಸ್ಪೀಕರ್ ನಡವಳಿಕೆ ಹೇಗಿರಬೇಕೆಂದು ವಿವರಿಸಿದ್ದರು. ಅದನ್ನೇ ನಾನು ಓದಿದ್ದೆ. ಅದು ಗದ್ದಲಕ್ಕೆ ಕಾರಣವಾಯಿತು ಎಂದಾಗ ಸಿದ್ದರಾಮಯ್ಯ ಎದ್ದು ನಿಂತು ವಿರೋಧ ವ್ಯಕ್ತಪಡಿಸಿದರು. ಶಾಸಕ ರಾಜೀನಾಮೆ ಸ್ವಇಚ್ಛೆಯಿಂದ ರಾಜೀನಾಮೆ ನೀಡಿದ್ದರೆ ಸ್ಪೀಕರ್​​​ಗೆ ಇದನ್ನು ಒಪ್ಪುವುದಕ್ಕಿಂತ ಬೇರೆ ಆಯ್ಕೆ ಇರುವುದಿಲ್ಲ ಎಂದು ಸುಪ್ರೀಂ ತಿಳಿಸಿದೆ ಎಂದು ಸುಧಾಕರ್ ಹೇಳಿದಾಗ ಸಿದ್ದರಾಮಯ್ಯ ಖಂಡಿಸಿದರು.

ರಮೇಶ್ ಕುಮಾರ್ ಅವರಿಂದಲೇ ಇಂದು ನಾನು ಮಂತ್ರಿ ಆಗಿದ್ದೇನೆ. ಸುಪ್ರೀಂಕೋರ್ಟ್ ನೀಡಿದ ಪ್ರತಿ ಅಂಶವನ್ನು ವಿವರಿಸಿ ಇದರ ಅಡಿಯಲ್ಲೇ ನಾವು ಗೆದ್ದಿದ್ದೇವೆ ಎಂದರು. ರಮೇಶ್ ಕುಮಾರ್ ಸ್ಪೀಕರ್ ಆಗಿದ್ದಾಗ ಆಡಿದ ಮಾತಿದ ದಾಖಲೆ ಪ್ರಸ್ತಾಪಿಸಿ ಓದಿದರು. ನಾವು 17 ಜನ ತಂದೆ ತಾಯಿ ಹೆಸರಿನ ಮೇಲೆ ಬೆಳೆದು ಬಂದಿಲ್ಲ. ಸ್ವಂತ ಪರಿಶ್ರಮದಿಂದ ಬಂದಿದ್ದೇವೆ. ನಮ್ಮನ್ನು ಅನರ್ಹ ಎಂದು ಹೇಳಿ ತೀರ್ಪು ಕೊಟ್ಟ ರಮೇಶ್ ಕುಮಾರ್, ಸ್ಥಾನದಿಂದ ಇಳಿದು ನಮ್ಮ ವಿರುದ್ಧ ಪ್ರಚಾರ ನಡೆಸಿದರು. ಇವರು ತೀರ್ಪು ನೀಡುವಾಗ ಪೂರ್ವಾಗ್ರಹ ಪೀಡಿತರಾಗಿದ್ದರು ಎಂದರು.

ಪಕ್ಷಾಂತರ ಮಾಡಿದ್ದನ್ನು ಸಮರ್ಥಿಸಿಕೊಳ್ಳಲು ಹಕ್ಕುಚ್ಯುತಿ ಚರ್ಚೆ ಬಳಸಬೇಡಿ ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದರು. ನಾನು ಸ್ಪೀಕರ್ ಸ್ಥಾನಕ್ಕೆ ಅಗೌರವ ತೋರಿಸಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ. ನಾನು ಪೀಠದ ಬಗ್ಗೆ ಅಪಾರ ಗೌರವ ಹೊಂದಿದ್ದೇನೆ. ನಾನು ರಮೇಶ್ ಕುಮಾರ್ ವಿಚಾರವಾಗಿ ಮಾತನಾಡಿದ್ದು, ಪೀಠಕ್ಕೆ ಅಗೌರವ ತೋರಿಸಿದ್ದರೆ ವಿಷಾಧ ವ್ಯಕ್ತಪಡಿಸುತ್ತೇನೆ. ತುಂಬಾ ಹಿರಿಯ ಸದಸ್ಯರು ರಮೇಶ್ ಕುಮಾರ್ ಅವರು ಸದನದಲ್ಲಿ ಆಡಿದ ಮಾತು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ಅವರಾಡಿದ ಮಾತನ್ನು ಒಪ್ಪಿ ಮಾತು ಹಿಂಪಡೆದರೆ ಗೌರವ ಹೆಚ್ಚಾಗುತ್ತದೆ ಎಂದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.