ETV Bharat / state

ಅಷ್ಟೊಂದು ಪ್ರೀತಿ ಇದ್ರೆ ಬಿಎಸ್​ವೈ ಅವ್ರನ್ನು ಸಿಎಂ ಮಾಡ್ತೀವಿ ಎಂದು ಬಿಜೆಪಿ ಘೋಷಿಸಲಿ: ಎಂಬಿಪಿ

ಬಿಜೆಪಿ ನಾಯಕರಿಗೆ ಯಡಿಯೂರಪ್ಪ ಅವರ ಮೇಲೆ ಅಷ್ಟೊಂದು ಪ್ರೀತಿ ಇದ್ರೆ ಮುಂದೆ ಸಿಎಂ ಮಾಡ್ತೀವಿ ಎಂದು ಘೋಷಣೆ ಮಾಡಲಿ ಎಂದು ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷ ಎಂ ಬಿ ಪಾಟೀಲ ತಿಳಿಸಿದ್ದಾರೆ.

ಎಂಬಿಪಿ ಹಾಗೂ ಬಿಎಸ್​ವೈ
ಎಂಬಿಪಿ ಹಾಗೂ ಬಿಎಸ್​ವೈ
author img

By

Published : Aug 18, 2022, 10:58 PM IST

ಬೆಂಗಳೂರು: ಮುಂದಿನ ಚುನಾವಣೆಯಲ್ಲಿ ಅಸ್ತಿತ್ವ ಉಳಿಸಿಕೊಳ್ಳುವ ಸಲುವಾಗಿ ಬಿಜೆಪಿಯಲ್ಲಿ ಬಿ ಎಸ್ ಯಡಿಯೂರಪ್ಪಗೆ ವಿಶೇಷ ಸ್ಥಾನ ಕಲ್ಪಿಸಲಾಗಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷ ಎಂ ಬಿ ಪಾಟೀಲ ಅಭಿಪ್ರಾಯ ಪಟ್ಟಿದ್ದಾರೆ.

ಸದಾಶಿವನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಯಡಿಯೂರಪ್ಪ ಅವರನ್ನು ಕೇಂದ್ರ ಸಂಸದೀಯ ಸಮಿತಿಯ ಸದಸ್ಯರಾಗಿ ನೇಮಕ ಮಾಡಿರುವ ವಿಚಾರ ತಿಳಿದಿದೆ. ಯಡಿಯೂರಪ್ಪ ಅವರು ಹಿರಿಯರು. ಅವರಿಗೆ 75 ವರ್ಷ ಆಗಿದೆ ಅಂತ ಸಿಎಂ ಸ್ಥಾನದಿಂದ ಕೆಳಗಿಳಿಸಿದ್ರು. ಇವಾಗ ಮತ್ತೆ ಅವರಿಗೆ ಕೇಂದ್ರ ಸಂಸದೀಯ ಸಮಿತಿ ಸದಸ್ಯ ಸ್ಥಾನ ನೀಡಿದ್ದಾರೆ. ಬಿಜೆಪಿ ನಾಯಕರಿಗೆ ಇವಾಗ ಯಡಿಯೂರಪ್ಪ ಅವರ ಮೇಲೆ ಪ್ರೀತಿ ಬಂದಿದೆಯಾ?. ನಾನು 75 ವರ್ಷಕ್ಕೆ ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ ಎಂದರು.

ಬಿಜೆಪಿಯಲ್ಲಿ ಕೆಲವು ಬೆಳವಣಿಗೆ ನಡೆದಿದೆ. ಮಾಧುಸ್ವಾಮಿ ಹೇಳಿಕೆಯಿಂದ ಬಿಜೆಪಿಗೆ ಆಘಾತ ಆಗಿದೆ. ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವ ಕಾರ್ಯಕ್ರಮದಿಂದ ಬಿಜೆಪಿಗೆ ಆಘಾತ ಆಗಿದೆ. ಹಾಗಾಗಿ, ರಾಜ್ಯದಲ್ಲಿ ಬಿಜೆಪಿ ತನ್ನ ಅಸ್ಥಿತ್ವ ಉಳಿಸಿಕೊಳ್ಳಲು ಯಡಿಯೂರಪ್ಪ ಅವರಿಗೆ ಈ ಹುದ್ದೆ ನೀಡಿದ್ದಾರೆ. ಯಡಿಯೂರಪ್ಪ ಅವರನ್ನು ಕೇಂದ್ರ ಬಿಜೆಪಿ ಸರ್ಕಾರ ಯಾಕೆ ಯುಸ್ ಆಂಡ್ ಥ್ರೋ ಮಾಡ್ತಿದೆ ಎಂದು ಹೇಳಿದರು.

ಯಡಿಯೂರಪ್ಪ ಅವರನ್ನು ಉಪಯೋಗಿಸಿ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಈ ರೀತಿ ಮಾಡಿದ್ದಾರೆ. ಬಿಜೆಪಿ ನಾಯಕರಿಗೆ ಯಡಿಯೂರಪ್ಪ ಅವರ ಮೇಲೆ ಅಷ್ಟೊಂದು ಪ್ರೀತಿ ಇದ್ರೆ ಮುಂದೆ ಸಿಎಂ ಮಾಡ್ತಿವಿ ಎಂದು ಘೋಷಣೆ ಮಾಡಲಿ. ಬಿಜೆಪಿ ಹೈಕಮಾಂಡ್ ನಾಯಕರಿಗೆ ಬಿಎಸ್​ವೈ ಮಹತ್ವ ಈಗ ಗೊತ್ತಾಗಿದೆ ಎಂದರು.

ನಾನು ಕಾಂಗ್ರೆಸ್ ಪಕ್ಷದ ಸಾಧನೆಗಳನ್ನು ಜನರ ಮುಂದೆ ಇಡುತ್ತೇನೆ. ನಾನು ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷ. ಹಾಗಾಗಿ, ಪಕ್ಷದ ಪ್ರಚಾರ ಮಾಡುವುದು ನನ್ನ ಜವಾಬ್ದಾರಿ. ಕಾಂಗ್ರೆಸ್ ಸರ್ಕಾರದ ಸಾಧನೆ ಜೊತೆಗೆ ಬಿಜೆಪಿ ಸರ್ಕಾರದ ವೈಫಲ್ಯ ಜನರ ಮುಂದೆ ಇಡಬೇಕು. ಬಿಜೆಪಿ ಸರ್ಕಾರ 40% ಕಮಿಷನ್ ಹಾಗೂ ಮಾಧುಸ್ವಾಮಿ ಹೇಳಿಕೆ ಇದೆಲ್ಲವನ್ನು ನಾನು ಜನರ ಮುಂದೆ ಇಡುತ್ತೇನೆ. ಇದೇ ನನ್ನ ಕೆಲಸ ಎಂದು ಹೇಳಿದರು.

ಓದಿ: ಬಿಎಸ್​ವೈಗೆ ಉನ್ನತ ಹುದ್ದೆ: ಬೊಮ್ಮಾಯಿ ಸಿಎಂ ಕುರ್ಚಿ ಮತ್ತಷ್ಟು ಭದ್ರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.