ETV Bharat / state

ಬಿಬಿಎಂಪಿ ನೂತನ ಮೇಯರ್‌ 100 ದಿನದ ಚಾಲೆಂಜ್.. ಆ ಸವಾಲೇನು? - garbage management in bengaluru

ಬೆಂಗಳೂರು ನಗರದಲ್ಲಿ ಕಸ ನಿರ್ವಹಣೆಯೇ ಒಂದು ಡೊಡ್ಡ ಸವಾಲಾಗಿದೆ. ನೂತನ ಮೇಯರ್‌ ಗೌತಮ್‌ಕುಮಾರ್‌ ಕಸ ನಿರ್ವಹಣೆಯನ್ನು ಸರಿಪಡಿಸುತ್ತೇವೆ. ತ್ಯಾಜ್ಯ ನಿರ್ವಹಣೆ ಸರಿದಾರಿಗೆ ತರಲು ನೂರು ದಿನದ ಕಾಲಾವಕಾಶ ನೀಡಿ, ಅಷ್ಟರಲ್ಲಿ ಸರಿಪಡಿಸುತ್ತೇವೆ ಎಂದು ಸವಾಲೆಸೆದಿದ್ದಾರೆ.

ಕಸ ನಿರ್ವಹಣೆ ಸರಿದಾರಿಗೆ ತರುತ್ತೇನೆ ಎಂದ ನೂತನ ಮೇಯರ್​​
author img

By

Published : Oct 5, 2019, 7:08 PM IST

ಬೆಂಗಳೂರು: ಪ್ರಧಾನಿ ಮೋದಿಯವರ ವಿಷನ್‌ನಂತೆ ನೂರು ದಿನದಲ್ಲಿ ಕಸ ನಿರ್ವಹಣೆಯಲ್ಲಿ ಹಿಡಿತ ತರಲಾಗುವುದು. ದೂರದೃಷ್ಟಿಯಿಂದ ಕಸ ನಿರ್ವಹಣೆಗೆ ಯೋಜನೆ ರೂಪಿಸಲಾಗುವುದು ಎಂದು ಮೇಯರ್ ಗೌತಮ್ ಕುಮಾರ್ ಹೇಳಿದರು.

ಇಂದು ಬೆಳ್ಳಂಬೆಳಗ್ಗೆ ಘನತ್ಯಾಜ್ಯ ಭೂಭರ್ತಿ ಪ್ರದೇಶಗಳಾದ ಮಿಟಗಾನಹಳ್ಳಿ, ಬೆಳ್ಳಳ್ಳಿ ಹಾಗೂ ಬಾಗಲೂರು ಕ್ವಾರಿಗಳಿಗೆ ಭೇಟಿ ನೀಡಿ, ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಸ್ಥಳ ಪರಿಶೀಲನೆ ನಡೆಸಿದರು. ಕಸ ವಿಲೇವಾರಿ ಕುರಿತು ಪ್ರತಿದಿನ ಅಧಿಕಾರಿಗಳ ಜೊತೆ ಸಭೆ ನಡೆಸಲಾಗುತ್ತಿದೆ. ಕ್ವಾರಿಗಳ ಪರಿಸ್ಥಿತಿ ನೋಡಲಾಯಿತು. ತಕ್ಷಣ ಕ್ವಾರಿಗಳನ್ನು ಬಂದ್ ಮಾಡಿದರೆ, ಬೇರೆ ವ್ಯವಸ್ಥೆ ಇಲ್ಲದೆ ಕಷ್ಟವಾಗಬಹುದು. ಹೀಗಾಗಿ ಮುಂದಿನ ಆರು ತಿಂಗಳು ಅಥವಾ ಒಂದು ವರ್ಷ ಕ್ವಾರಿಗಳಲ್ಲೇ ಕಸ ಸುರಿಯಬೇಕಾಗಿದೆ‌. ನೂರು ದಿನಗಳನ್ನು ಕೊಡಿ, ಕಸದ ಸಮಸ್ಯೆ ಸರಿದಾರಿಗೆ ತರುತ್ತೇನೆ ಎಂದು ಸವಾಲೆಸೆದರು.

ಕಸ ನಿರ್ವಹಣೆ ಸರಿದಾರಿಗೆ ತರುತ್ತೇನೆ ಎಂದ ನೂತನ ಮೇಯರ್..​​

ಕಸ ನಿರ್ವಹಣೆಗೆ ಬಯೋಮಿಥನೈಸೇಷನ್ ಆರಂಭಿಸಲು ಚಿಂತನೆ: ಸಿಪಿಆರ್‌ಐ, ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್ ಬ್ಯುಸಿನೆಸ್ ಮ್ಯಾನೆಜ್ಮೆಂಟ್‌ಗಳಲ್ಲಿ ಈಗಾಗಲೇ ಅಲ್ಲಿ ಉತ್ಪತ್ತಿಯಾಗುವ ಹತ್ತು ಟನ್ ಕಸದಲ್ಲಿ ಸ್ವಲ್ಪವೂ ಹೊರಗೆ ಬಾರದಂತೆ ಬಯೋಮಿಥನೈಸೇಷನ್ ಅಳವಡಿಸಿದ್ದಾರೆ. ಬುಧವಾರ ಅಲ್ಲಿಗೆ ಭೇಟಿ ನೀಡಿ ಅಧ್ಯಯನ ನಡೆಸಲಾಗುವುದು. ಉತ್ತಮ ವ್ಯವಸ್ಥೆಯಾಗಿದ್ದರೆ, ಪ್ರತೀ ವಾರ್ಡ್‌ಗಳಲ್ಲಿ ಆರು ಲಕ್ಷ ವೆಚ್ಚದಲ್ಲಿ ಬಯೋಮಿಥನೈಸೇಷನ್ ಪ್ಲಾಂಟ್ ಆರಂಭಿಸಲಾಗುವುದು ಎಂದರು. ಇದರಿಂದ ಕಸ ಸಾಗಾಣಿಕೆಗೆ ಆಗುವ ವೆಚ್ಚ ಉಳಿತಾಯವಾಗಲಿದೆ. ಪ್ರಸ್ತುತ ಎರಡೂವರೆ ಲಕ್ಷ ರೂ. ಒಂದು ಕಾಂಪ್ಯಾಕ್ಟರ್‌ಗೆ ತಿಂಗಳಿಗೆ ಮಾಡುವ ವೆಚ್ಚ ಉಳಿತಾಯವಾಗಲಿದೆ. 286 ಕಾಂಪ್ಯಾಕ್ಟರ್‌ಗಳು ಬೆಳ್ಳಳ್ಳಿ ಕ್ವಾರಿಗೆ ಹೋಗುತ್ತಿವೆ. ಇದರಿಂದಾಗುವ ಸಂಚಾರ ದಟ್ಟಣೆಯೂ ಕಡಿಮೆಯಾಗಲಿದೆ ಅಥವಾ ಕಸದಿಂದ ವಿದ್ಯುತ್ ಉತ್ಪಾನೆ ಮಾಡುವ ಘಟಕಗಳನ್ನೂ ಆರಂಭಿಸುವ ಬಗ್ಗೆಯೂ ಚಿಂತನೆ ನಡೆಯುತ್ತಿದೆ. ಈ ವೇಸ್ಟ್ ಟೂ ಎನರ್ಜಿ ಪ್ಲಾಂಟ್ ಕುರಿತ ಅಧ್ಯಯನಕ್ಕೆ ದೆಹಲಿಗೆ ಭೇಟಿ ನೀಡಲು ತೀರ್ಮಾನಿಸಿರುವುದಾಗಿ ಮೇಯರ್ ಗೌತಮ್ ತಿಳಿಸಿದರು.

ಕಸ ನಿರ್ವಹಣೆಗೆ ಎರಡು ವರ್ಷಕ್ಕೆ ಬೇಕಾದ ಕ್ವಾರಿಗಳ ವ್ಯವಸ್ಥೆ ಬಿಬಿಎಂಪಿ ಬಳಿ ಇದೆ: ಮಿಟಗಾನಹಳ್ಳಿ ಕ್ವಾರಿ ಈಗಾಗಲೇ ಸಿದ್ಧವಿದ್ದು, ಸರ್ಕಾರದ ಆದೇಶ ಪಡೆದ ನಂತರ ಕಸ ಸುರಿಯಲಾಗುವುದು ಎಂದರು. ಸದ್ಯ ಬೆಳ್ಳಳ್ಳಿ ಕ್ವಾರಿಯಲ್ಲಿ ಇನ್ನೂ ಕಸ ಹೋಗುತ್ತಿದೆ. ಎನ್‌ಜಿಟಿಯವರಿಂದ ಯಾವುದೇ ವಿರೋಧ ಇಲ್ಲ. ಬಾಗಲೂರಿನಲ್ಲಿ ಆಕ್ಷೇಪ ಇದ್ದ ಕಡೆಯೂ, ಉತ್ತಮ ವ್ಯವಸ್ಥೆಯಿಂದ ಪಾರ್ಕ್ ಮಾಡಲಾಗಿದೆ. ದುರ್ವಾಸನೆಯೂ ಬರುತ್ತಿಲ್ಲ. ಕಸದ ಲಿಚೆಟ್ ನೀರನ್ನೂ ಸಂಸ್ಕರಿಸಿ ಗಾರ್ಡನ್‌ಗಳಿಗೆ ಬಳಸಲಾಗ್ತಿದೆ ಎಂದರು.

Intro:ಕಸ ನಿರ್ವಹಣೆ ಸರಿದಾರಿಗೆ ತರಲು ನೂರು ದಿನಗಳ ಚಾಲೆಂಜ್ ಮಾಡಿದ ಮೇಯರ್!

ಬೆಂಗಳೂರು- ಪ್ರಧಾನಿ ಮೋದಿಯವರ ವಿಷನ್ ನಂತೆ ನೂರು ದಿನದಲ್ಲಿ ಕಸ ನಿರ್ವಹಣೆಯಲ್ಲಿ ಹಿಡಿತ ತರಲಾಗುವುದು. ದೂರದೃಷ್ಟಿಯಿಂದ ಕಸ ನಿರ್ವಹಣೆಗೆ ಯೋಜನೆ ರೂಪಿಸಲಾಗುವುದು ಎಂದು ಮೇಯರ್ ಗೌತಮ್ ಕುಮಾರ್ ಹೇಳಿದರು.
ಇಂದು ಬೆಳ್ಳಂಬೆಳಗ್ಗೆ ಘನತ್ಯಾಜ್ಯ ಭೂಭರ್ತಿ ಪ್ರದೇಶಗಳಾದ ಮಿಟಗಾನಹಳ್ಳಿ , ಬೆಳ್ಳಳ್ಳಿ ಹಾಗೂ ಬಾಗಲೂರು ಕ್ವಾರಿಗಳಿಗೆ ಭೇಟಿ ನೀಡಿ, ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಸ್ಥಳ ಪರಿಶೀಲನೆ ನಡೆಸಿದರು.
ಕಸ ವಿಲೇವಾರಿ ಕುರಿತು ಪ್ರತೀದಿನ ಅಧಿಕಾರಿಗಳ ಜೊತೆ ಸಭೆ ನಡೆಸಲಾಗುತ್ತಿದೆ. ಕ್ವಾರಿಗಳ ಪರಿಸ್ಥಿತಿ ನೋಡಲಾಯಿತು. ತಕ್ಷಣ ಕ್ವಾರಿಗಳನ್ನು ಬಂದ್ ಮಾಡಿದರೆ, ಬೇರೆ ವ್ಯವಸ್ಥೆ ಇಲ್ಲದೆ ಕಷ್ಟವಾಗಬಹುದು. ಹೀಗಾಗಿ ಮುಂದಿನ ಆರು ತಿಂಗಳು ಅಥವಾ ಒಂದು ವರ್ಷ ಕ್ವಾರಿಗಳಲ್ಲೇ ಕಸ ಸುರಿಯಬೇಕಾಗಿದೆ‌. ನೂರು ದಿನಗಳನ್ನು ಕೊಡಿ, ಕಸದ ಸಮಸ್ಯೆ ಸರಿದಾರಿಗೆ ತರುತ್ತೇನೆ ಎಂದು ಸವಾಲೆಸೆದರು.

ಕಸ ನಿರ್ವಹಣೆಗೆ ಬಯೋಮಿಥನೈಸೇಷನ್ ಆರಂಭಿಸಲು ಚಿಂತನೆ
ಸಿಪಿಆರ್ ಐ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಬ್ಯುಸ್ ನೆಸ್ ಮ್ಯಾನೆಜ್ಮೆಂಟ್ ಗಳಲ್ಲಿ ಈಗಾಗಲೇ ಅಲ್ಲಿ ಉತ್ಪತ್ತಿಯಾಗುವ ಹತ್ತು ಟನ್ ಕಸದಲ್ಲಿ ಸ್ವಲ್ಪವೂ ಹೊರಗೆ ಬಾರದಂತೆ ಬಯೋಮಿಥನೈಸೇಷನ್ ಅಳವಡಿಸಿದ್ದಾರೆ. ಬುಧವಾರ ಇಲ್ಲಿಗೆ ಭೇಟಿ ನೀಡಿ ಅಧ್ಯಯನ ನಡೆಸಲಾಗುವುದು. ಉತ್ತಮ ವ್ಯವಸ್ಥೆಯಾಗಿದ್ದರೆ, ಪ್ರತೀ ವಾರ್ಡ್ ಗಳಲ್ಲಿ ಆರು ಲಕ್ಷ ವೆಚ್ಚದಲ್ಲಿ ಬಯೋಮಿಥನೈಸೇಷನ್ ಪ್ಲಾಂಟ್ ಆರಂಭಿಸಲಾಗುವುದು ಎಂದರು. ಇದರಿಂದ ಕಸ ಸಾಗಾಣಿಕೆಗೆ ಆಗುವ ವೆಚ್ಚ ಉಳಿತಾಯವಾಗಲಿದೆ. ಪ್ರಸ್ತುತ ಎರಡುವರೇ ಲಕ್ಷ ರೂ. ಒಂದು ಕಾಂಪ್ಯಾಕ್ಟರ್ ಗೆ ತಿಂಗಳಿಗೆ ಮಾಡುವ ವೆಚ್ಚ ಉಳಿತಾಯವಾಗಲಿದೆ. 286 ಕಾಂಪ್ಯಾಕ್ಟರ್ ಗಳು ಬೆಳ್ಳಳ್ಳಿ ಕ್ವಾರಿಗೆ ಹೋಗುತ್ತಿವೆ, ಇದರಿಂದಾಗುವ ಸಂಚಾರ ದಟ್ಟಣೆಯೂ ಕಡಿಮೆಯಾಗಲಿದೆ ಅಥವಾ ಕಸದಿಂದ ವಿದ್ಯುತ್ ಉತ್ಪಾನೆ ಮಾಡುವ ಘಟಕಗಳನ್ನು ಆರಂಭಿಸುವ ಬಗ್ಗೆಯೂ ಚಿಂತನೆ ನಡೆಯುತ್ತಿದೆ. ಈ ವೇಸ್ಟ್ ಟು ಎನರ್ಜಿ ಪ್ಲಾಂಟ್ ಕುರಿತ ಅಧ್ಯಯನಕ್ಕೆ ದೆಹಲಿಗೆ ಭೇಟಿ ನೀಡಲು ತೀರ್ಮಾನಿಸಿರುವುದಾಗಿ ಮೇಯರ್ ಗೌತಮ್ ತಿಳಿಸಿದರು.

ಕಸ ನಿರ್ವಹಣೆಗೆ ಎರಡು ವರ್ಷಕ್ಕೆ ಬೇಕಾದ ಕ್ವಾರಿಗಳ ವ್ಯವಸ್ಥೆ ಬಿಬಿಎಂಪಿ ಬಳಿ ಇದೆ. ಮಿಟಗಾನಹಳ್ಳಿ ಕ್ವಾರಿ ಈಗಾಗಲೇ ಸಿದ್ಧವಿದ್ದು, ಸರ್ಕಾರದ ಆದೇಶ ಪಡೆದ ನಂತರ ಕಸ ಸುರಿಯಲಾಗುವುದು ಎಂದರು. ಸಧ್ಯ ಬೆಳ್ಳಳ್ಳಿ ಕ್ವಾರಿಯಲ್ಲಿ ಇನ್ನೂ ಕಸ ಹೋಗುತ್ತಿದೆ ಎಂದರು. ಎನ್ ಜಿಟಿ ಯವರಿಂದ ಯಾವುದೇ ವಿರೋಧ ಇಲ್ಲ. ಬಾಗಲೂರಿನಲ್ಲಿ ಆಕ್ಷೇಪ ಇದ್ದ ಕಡೆಯೂ, ಉತ್ತಮ ವ್ಯವಸ್ಥೆಯಿಂದ ಪಾರ್ಕ್ ಮಾಡಲಾಗಿದೆ. ದುರ್ವಾಸನೆಯೂ ಬರುತ್ತಿಲ್ಲ. ಕಸದ ಲಿಚೆಟ್ ನೀರನ್ನೂ ಸಂಸ್ಕರಿಸಿ ಗಾರ್ಡನ್ ಗಳಿಗೆ ಬಳಕೆಯಾಗ್ತಿದೆ ಎಂದರು.
ಮಹಾರಾಷ್ಟ್ರದಿಂದ ಪ್ಲಾಸ್ಟಿಕ್ ಬರ್ತಿದೆ. ಇದನ್ನು ತಡೆಹಿಡಿಯಬೇಕಾಗಿದೆ. ಕಸದಲ್ಲಿ ಪ್ಲಾಸ್ಟಿಕ್ ಗೆ ಕಡಿವಾಣ ಹಾಕಲೇ ಬೇಕಿದೆ. ನಗರದಲ್ಲಿ ಪ್ಲಾಸ್ಟಿಕ್ ಉತ್ಪಾದನೆಗೆ ಕಡಿವಾಣ ಬಿದ್ದಿದೆ.
ಹಸಿ ಕಸದ ಟೆಂಡರ್ ಕೆಲಸ ಜಾರಿಯಲ್ಲಿದೆ. ಕೋರ್ಟ್ ನಲ್ಲಿರುವ ಕೆಲವು ಪ್ರಕರಣಗಳ ಇತ್ಯರ್ಥ ಪಡಿಸಲಾಗುವುದು. ಹೊಸ ಹಸಿ ಕಸದ ಟೆಂಡರ್ ಜಾರಿಯಾದ ಮೇಲೂ ವಾರ್ಡ್ ಮಟ್ಟದಲ್ಲೇ ಕಸ ನಿರ್ವಹಣೆಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

ಸೌಮ್ಯಶ್ರೀ
Kn_bng_01_mayor_bbmp_7202707
Body:..Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.