ಬೆಂಗಳೂರು: ಮಂಗಳವಾರ ನಿಗದಿಯಾಗಿದ್ದ ಮೇಯರ್, ಉಪ ಮೇಯರ್ ಚುನಾವಣೆ ಮುಂದೂಡಿಕೆಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದ ಬೆನ್ನಲ್ಲೇ ಪ್ರಾದೇಶಿಕ ಆಯುಕ್ತ ಬಿಜೆಪಿ ಸರ್ಕಾರಕ್ಕೆ ಶಾಕ್ ನೀಡಿದ್ದಾರೆ.
ಮೇಯರ್ ಉಪಮೇಯರ್ ಚುನಾವಣೆ ಮುಂದೂಡಿಕೆಗೆ ಬಿಎಸ್ವೈ ಪ್ಲಾನ್.. ಕಾರಣ?
ಸದ್ಯ ನಿಗದಿಯಾಗಿರುವ ಚುನಾವಣೆಯನ್ನು ಯಾವುದೇ ಕಾರಣಕ್ಕೂ ಮುಂದೂಡಿಕೆ ಮಾಡಲು ಸಾಧ್ಯವಿಲ್ಲ ಎಂದಿರುವ ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತಾ, ಈ ಬಗ್ಗೆ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆಯುವುದಾಗಿ ಹೇಳಿದ್ದಾರೆ.
ನಿಗದಿಯಾಗಿರುವ ಚುನಾವಣೆ ಕೆಎಂಸಿ ಆಕ್ಟ್ 10(1) , 112(b) ಪ್ರಕಾರವೇ ನಡೆಯಬೇಕಿದೆ ಎಂದು ಹರ್ಷ ಗುಪ್ತಾ ಹೇಳಿದ್ದಾರೆ. ಹಾಗಾಗಿ ನಾಳೆಯೇ ಚುನಾವಣೆ ನಡೆಯುವುದು ಬಹುತೇಕ ಪಕ್ಕಾ ಎನ್ನಲಾಗಿದೆ.