ETV Bharat / state

ರಸ್ತೆ ಗುಂಡಿ ತೇಪೆ ಕಾರ್ಯ ಪರಿಶೀಲಿಸಿದ ಮೇಯರ್​ ಗೌತಮ್ ಕುಮಾರ್ ಜೈನ್ - BBMP Commissioner

ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಜೈನ್ ಹಾಗೂ ಬಿಬಿಎಂಪಿ ಆಯುಕ್ತರು ಅಲಸೂರು ವಾರ್ಡ್ 2ನೇ ಅಡ್ಡ ರಸ್ತೆಯಲ್ಲಿ, ರಸ್ತೆ ಗುಂಡಿಗೆ ಜಲ್ಲಿಪುಡಿ ಹಾಕಿರುವುದನ್ನು ತಪಾಸಣೆ ನಡೆಸಿದರು.

​ ಗೌತಮ್ ಕುಮಾರ್ ಜೈನ್
author img

By

Published : Nov 7, 2019, 4:52 AM IST

ಬೆಂಗಳೂರು: ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಜೈನ್ ಹಾಗೂ ಬಿಬಿಎಂಪಿ ಆಯುಕ್ತರು ಬುಧವಾರ ಅಲಸೂರು ವಾರ್ಡ್ 2ನೇ ಅಡ್ಡ ರಸ್ತೆಯಲ್ಲಿ ರಸ್ತೆ ಗುಂಡಿಗಳಿಗೆ ತೇಪೆ ಹಾಕುತ್ತಿರುವುದನ್ನು ಪರಿಶೀಲನೆ ನಡೆಸಿದರು. ಇದೇ ವೇಳೆ ನಿರಾಶ್ರಿತ ಕೇಂದ್ರಗಳಿಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಭೇಟಿ ನೀಡಿ ತಪಾಸಣೆ ನಡೆಸಿದರು.

ರಸ್ತೆ ಗುಂಡಿ ತೇಪೆ ಕಾರ್ಯ ಪರಿಶೀಲಿಸಿದ ಮೇಯರ್​ ಗೌತಮ್ ಕುಮಾರ್ ಜೈನ್

ಮೊದಲಿಗೆ ಅಲಸೂರು ವಾರ್ಡ್ 2ನೇ ಅಡ್ಡ ರಸ್ತೆಯಲ್ಲಿ ರಸ್ತೆ ಗುಂಡಿಗೆ ಜಲ್ಲಿಪುಡಿ ಹಾಕಿರುವುದನ್ನು ತಪಾಸಣೆ ಮಾಡಿದ ಮೇಯರ್, ವೈಜ್ಞಾನಿಕವಾಗಿ ರಸ್ತೆಗುಂಡಿ ಮುಚ್ಚಬೇಕು ಎಂದು ಮುಖ್ಯ ಅಭಿಯಂತರರಿಗೆ ಸೂಚನೆ ನೀಡಿದರು. ಇದಲ್ಲದೆ ಅಲಸೂರು ವಾರ್ಡ್ ವ್ಯಾಪ್ತಿಯ ಗುರುದ್ವಾರ ಜಂಕ್ಷನ್ ಬಳಿ ರಾಜ ಕಾಲುವೆಯನ್ನು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವುದನ್ನು ಕಂಡು, ಸಂಬಂಧಪಟ್ಟ ಬೃಹತ್ ನೀರುಗಾಲುವೆ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಚನ್ನಕೇಶವ್​ಗೆ ಶೋಕಾಸ್ ನೋಟೀಸ್ ಹಾಗೂ ಗುತ್ತಿಗೆದಾರರ ಮೇಲೆ ಕೂಡಲೇ ಶಿಸ್ತು ಕ್ರಮ ಕೈಗೊಳ್ಳಲು ಆಯುಕ್ತರಿಗೆ ಸೂಚಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮೇಯರ್, ಎಲ್ಲಾ ಕಡೆ ರಸ್ತೆಗುಂಡಿ ಸಮರ್ಪಕವಾಗಿ ಮುಚ್ಚುತ್ತಿದ್ದಾರೆ. ಮೇಯರ್ ಆದ ಬಳಿಕ ಪಶ್ಚಿಮ ವಾರ್ಡ್​ನಲ್ಲಿ ದಿಚಕ್ರ ವಾಹನದ ಮೂಲಕ ತಪಾಸಣೆ ನಡೆಸಲಾಗಿತ್ತು. ಈ ವೇಳೆ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ‌ ನೀಡಲಾಗಿತ್ತು. ಆದರೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದು, ಇನ್ನೂ ಗುಂಡಿಗಳನ್ನು ಮುಚ್ಚಿಲ್ಲ. ಈ ಸಂಬಂಧ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಲು ಆಯುಕ್ತರಿಗೆ ಸೂಚನೆ ನೀಡಲಾಗಿದೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಬದ್ಧವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ನಂತರ ಗೂಡ್ ಶೆಡ್ ರಸ್ತೆಯಲ್ಲಿರುವ ನಿರಾಶ್ರಿತ ಕೇಂದ್ರಕ್ಕೆ ಭೇಟಿ ನೀಡಿ ತಪಾಸಣೆ ನಡೆಸಿದರು. ಈ ವೇಳೆ ಪಾಲಿಕೆ ವ್ಯಾಪ್ತಿಯಲ್ಲಿ ನಿರಾಶ್ರಿತರಿಗಾಗಿ 9 ಕೇಂದ್ರಗಳಿದ್ದು, ಹೊಸದಾಗಿ 22 ನಿರಾಶ್ರಿತ ಕೇಂದ್ರ ನಿರ್ಮಾಣ ಮಾಡಲು ಸ್ಥಳ ಹಾಗೂ ಕಟ್ಟಡಗಳನ್ನು ಗುರುತಿಸಲಾಗಿದೆ. ಈಗಾಗಲೇ ಕಳೆದ ಬಾರಿ ಸುಮಾರು 5,000 ನಿರಾಶ್ರಿತರನ್ನು ಗುರುತಿಸಲಾಗಿದ್ದು, ಇದೀಗ ಎಲ್ಲಾ ವಾರ್ಡ್​ವಾರು ಎನ್.ಜಿ.ಒಗಳ ಮೂಲಕ ಸಮೀಕ್ಷೆ ಪ್ರಾರಂಭಿಸಲಾಗಿದ್ದು, ಎಷ್ಟು ಮಂದಿ ನಿರಾಶ್ರಿತರಿದ್ದಾರೆ ಎಂಬುದನ್ನು ಸಮೀಕ್ಷೆ ಮಾಡಿ ವರದಿ ಸಿದ್ಧಪಡಿಸಲಾಗುತ್ತಿದೆ. 15 ದಿನಕ್ಕೊಮ್ಮೆ ವೈದ್ಯರು ಬಂದು ಆರೋಗ್ಯ ತಪಾಸಣೆ ಮಾಡುತ್ತಿದ್ದಾರೆ ಎಂದು ಪಾಲಿಕೆ ಕಲ್ಯಾಣ ಅಧಿಕಾರಿ ನಾಗೆಂದ್ರ ನಾಯ್ಕ್ ತಿಳಿಸಿದರು.

ಮೇಯರ್ ಅನುದಾನದಲ್ಲಿ ನಿರಾಶ್ರಿತ ಕೇಂದ್ರ ನಿರ್ಮಾಣ ಮಾಡಲು ಅನುದಾನ ಮೀಸಲಿಡಲಾಗುವುದು. ಕೂಡಲೇ ಕೆಲಸ ಪ್ರಾರಂಭಿಸುವಂತೆ ಮೇಯರ್ ಅಧಿಕಾರಿಗೆ ಸೂಚನೆ ನೀಡಿದರು. ಈ ವೇಳೆ ವಿಧಾನ ಪರಿಷತ್ ಸದಸ್ಯರಾದ ಎನ್.ರವಿಕುಮಾರ್ ಉಪಸ್ಥಿತರಿದ್ದರು.

Intro:ಬಿಬಿಎಮ್ ಪಿ ಮೇಯರ್ ಹಾಗೂ ಆಯುಕ್ತರಿಂದ ರಸ್ತೆ ಗುಂಡಿ ಮುಚ್ಚು ಕಾರ್ಯ ತಪಾಸಣೆ:

ಬಿಬಿಎಮ್ ಪಿ ಮೇಯರ್ ಗೌತಮ್ ಕುಮಾರ್ ಜೈನ್ ಹಾಗೂ ಬಿಬಿಎಮ್ ಪಿ ಆಯುಕ್ತರು ಇಂದು ರಸ್ತೆ ಗುಂಡಿಗಳು ಮುಚ್ಚುತ್ತಿರುವ ಹಾಗೂ ನಿರಾಶ್ರಿತ ಕೇಂದ್ರಗಳಿಗೆ ಸಂಭಂದಪಟ್ಟ ಅಧಿಕಾರಿಗಳೂಂದಿಗೆ ಭೇಟಿ ನೀಡಿ ತಪಾಸಣೆ ನಡೆಸಿದರು. ಮೊದಲಿಗೆ ಅಲಸೂರು ವಾರ್ಡ್ 2ನೇ ಅಡ್ಡ ರಸ್ತೆಯಲ್ಲಿ ರಸ್ತೆ ಗುಂಡಿಗೆ ಜಲ್ಲಿಪುಡಿ ಹಾಕಿರುವುದನ್ನು ತಪಾಸಣೆ ಮಾಡಿದ ಮೇಯರ್ ವೈಜ್ಞಾನಿಕವಾಗಿ ರಸ್ತೆಗುಂಡಿ ಮುಚ್ಚಬೇಕು ನಿರ್ಮಾಣ ಮಾಡಬೇಕು ಎಂದು ಮುಖ್ಯ ಅಭಿಯಂತರರಿಗೆ ಸೂಚನೆ ನೀಡಿದರು.

ಅಲ್ಲದೆ‌ ವಲಯ ವೀಕ್ಷಣೆ ಮಾಡಬೇಕು, ಪಾದಚಾರಿ ಮಾರ್ಗ ಸರಿಪಡಿಸಬೇಕು. ರಸ್ತೆ ಗುಂಡಿಗಳನ್ನು ಕೂಡಲೆ ಮುಚ್ಚಬೇಕು ಎಂದು ಜಂಟಿ ಆಯುಕ್ತರಿಗೆ ಸ್ಥಳದಲ್ಲೆ ಮೇಯರ್ ಸೂಚನೆ ನೀಡಿದರು.ಇದಲ್ಲದೆ ಅಲಸೂರು ವಾರ್ಡ್ ವ್ಯಾಪ್ತಿಯ ಗುರುದ್ವಾರ ಜಂಕ್ಷನ್ ಬಳಿ ರಾಜ
ಕಾಲುವೆಯನ್ನು ಅವೈಜ್ಞಾನಿಕವಾಗಿ ನಿರ್ಮಾಣ ಮಾಡದಿರುವುದನ್ನು ಕಂಡು, ಸಂಬಂಧಪಟ್ಟ ಬೃಹತ್ ನೀರುಗಾಲುವೆ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಚನ್ನಕೇಶವ ರವರಿಗೆ ಶೋಕಾಸ್ ನೋಟೀಸ್ ಹಾಗೂ ಗುತ್ತಿಗೆದಾರರ ಮೇಲೆ ಕೂಡಲೆ ಶಿಸ್ತು ಕ್ರಮ ಕೈಗೊಳ್ಳಲು ಆಯುಕ್ತರಿಗೆ ಸೂಚಿಸಿದರು.

ಹಾಗೂ ಪಾದಚಾರಿ ಮಾರ್ಗದಲ್ಲಿ ಬೆಸ್ಕಾಂ ಕಾಮಗಾರಿ ಸರಿಯಾಗಿ ಮಾಡದಿರುವುದನ್ನುಕಂಡುಸಿಡಿಮಿಡಿಗೊಂಡ
ಮೇಯರ್ ಕೂಡಲೆ ರಸ್ತೆ ಮೇಲೆ ಬಿದ್ದಿರುವತಂತಿಗಳನ್ನು
ತೆರವುಮಾಡುವಂತೆಅಧಿಕಾರಗಳಿಗೆಸೂಚನೆನೀಡಿದರು.ಇದಲ್ಲದೆಮಿಲ್ಲರ್ ರಸ್ತೆ ಕೆಳಸೇತುವೆ ನಿರ್ವಹಣೆಮಾಡಲು
ಆಯುಕ್ತರು ಅಭಿಯಂತರಿಗೆ ತಿಳಿಸಿದರು.ಹಾಗೂ
ಜಯಮಹಲ್ ಎಕ್ಸ್ಟೆಂಶನ್‌ ೧ ನೇಮುಖ್ಯರಸ್ತೆ (ನಂದಿದುರ್ಗ ರಸ್ತೆ)ಯಲ್ಲಿ ಪಾದಚಾರಿ ಮಾರ್ಗದ ಪಕ್ಕ ಚರಂಡಿ ಮುಚ್ಚಿದ್ದು, ಮಳೆಗಾಲದಲ್ಲಿ ನೀರು ನಿಲ್ಲುತ್ತದೆ. ಜೊತೆಗೆ ಪಾದಚಾರಿ ಮಾರ್ಗ ನಿರ್ಮಾಣಸಮರ್ಪಕವಾಗಿ
ನಿರ್ವಹಣೆ ಮಾಡದಿರುವುದನ್ನು ಕಂಡು ಕೂಡಲೆ ದುರಸ್ಥಿಪಡಿಸುವಂತೆ ಆಯುಕ್ತರು ಸ್ಥಳದಲ್ಲಿದ್ದ ಅಭಿಯಂತರಿಗೆ ಸೂಚನೆ ನೀಡಿದರು. Body:ಯಶವಂತಪುರ ಮೇಲ್ಸೇತುವೆ ಬಳಿ ಬಿದ್ದಿರುವ ರಸ್ತೆಗುಂಡಿಗೆ ಡಾಂಬರೀಕರಣ ಮಾಡುತ್ತಿರುವುದನ್ನು ಪರಿಶೀಲಿಸಿ ಗುಂಡಿಮುಚ್ಚುವ ಸಿಬ್ಬಂದಿಗೆ ಗಮ್ ಬೂಟ್ ನೋಡುವಂತೆ ಆಯುಕ್ತರು ಗುತ್ತಿಗೆದಾರರಿಗೆ ಸೂಚನೆ ನೀಡಿದರು ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮೇಯರ್ ಎಲ್ಲಾಕಡೆ ರಸ್ತೆಗುಂಡಿ ಸಮರ್ಪಕವಾಗಿ ಮುಚ್ಚುತ್ತಿದ್ದಾರೆ. ಮೇಯರ್ ಆದ ಬಳಿಕ ಪಶ್ಚಿಮ ವಾರ್ಡ್ ನಲ್ಲಿ ದಿಚಕ್ರ ವಾಹನದ ಮೂಲಕ ತಪಾಸಣೆ ನಡೆಸಲಾಗಿತ್ತು. ಈ ವೇಳೆ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ‌ ನೀಡಲಾಗಿತ್ತು. ಆದರೆ, ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದು, ಇನ್ನೂ ಗುಂಡಿಗಳನ್ನು ಮುಚ್ಚಿಲ್ಲ. ಈ ಸಂಬಂಧ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಲು ಆಯುಕ್ತರಿಗೆ ಸೂಚನೆ ನೀಡಲಾಗಿದೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಬದ್ಧವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ನಂತರ ಗೂಡ್ ಶೆಡ್ ರಸ್ತೆಯಲ್ಲಿರುವ ನಿರಾಶ್ರಿತ ಕೇಂದ್ರವನ್ನು ತಪಾಸಣೆ ನಡೆಸಿದರು. ಈ ವೇಳೆ ಪಾಲಿಕೆ ವ್ಯಾಪ್ತಿಯಲ್ಲಿ ನಿರಾಶ್ರಿತರಿಗಾಗಿ 9 ಕೇಂದ್ರಗಳಿದ್ದು, ಹೊಸದಾಗಿ 22 ನಿರಾಶ್ರಿತ ಕೇಂದ್ರ ನಿರ್ಮಾಣ ಮಾಡಲು ಸ್ಥಳ ಕಟ್ಟಡಗಳನ್ನು ಗುರುತಿಸಲಾಗಿದೆ. ಈಗಾಗಲೇ ಕಳೆದ ಬಾರಿ ಸುಮಾರು 5,000 ನಿರಾಶ್ರಿತರನ್ನು ಗುರುತಿಸಲಾಗಿದ್ದು, ಇದೀಗ ಎಲ್ಲಾ ವಾರ್ಡ್ ವಾರು ಎನ್.ಜಿ.ಒಗಳ ಮೂಲಕ ಸಮೀಕ್ಷೆ ಪ್ರಾರಂಭಿಸಲಾಗಿದ್ದು, ಎಷ್ಟು ಮಂದಿ ನಿರಾಶ್ರಿತರಿದ್ದಾರೆ ಎಂಬುದನ್ನು ಸಮೀಕ್ಷೆ ಮಾಡಿ ವರದಿ ಸಿದ್ದಪಡಿಸಲಾಗುತ್ತಿದೆ. 15 ದಿನಕ್ಕೊಮ್ಮೆ ವೈದ್ಯರು ಬಂದು ಆರೋಗ್ಯ ತಪಾಸಣೆ ಮಾಡುತ್ತಿದ್ದಾರೆ ಎಂದು ಪಾಲಿಕೆ ಕಲ್ಯಾಣ ಅಧಿಕಾರಿ ನಾಗೆಂದ್ರ ನಾಯ್ಕ್ ತಿಳಿಸಿದರು. ಮೇಯರ್ ಅನುದಾನದಲ್ಲಿ ನಿರಾಶ್ರಿತ ಕೇಂದ್ರನಿರ್ಮಾಣಮಾಡಲುಅನುದಾನಮೀಸಲಿಡಲಾಗುವುದು.ಕೂಡಲೆಕೆಲಸಪ್ರಾರಂಭಿಸುವಂತೆ ಮೇಯರ್
ಅಧಿಕಾರಿಗೆ ಸೂಚನೆ ನೀಡಿದರು.ಈ ವೇಳೆ ವಿಧಾನ
ಪರಿಷತ್ ಸದಸ್ಯರಾದ ಎನ್.ರವಿಕುಮಾರ್ ರವರು ಉಪಸ್ಥಿತರಿದ್ದರು.

ಸತೀಶ

(ಸ್ಕ್ರಪ್ಟ್ ಅಪ್ಡೇಟ್ ಮಾಡಿದೆ ಇದನ್ನು ತೆಗೆದುಕೊಳ್ಳಿ)Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.