ETV Bharat / state

ಗ್ರಾಹಕರು ಮಾಸ್ಕ್ ಧರಿಸದಿದ್ರೆ ವಾಣಿಜ್ಯ ಕಟ್ಟಡಗಳ ಮಾಲೀಕರಿಗೆ, ಆಯೋಜಕರಿಗೆ ಭಾರೀ ದಂಡ!

ಸಾರ್ವಜನಿಕರು, ಗ್ರಾಹಕರು ಕೋವಿಡ್ ಮುನ್ನೆಚ್ಚರಿಕಾ ನಿಯಮ ಪಾಲಿಸದಿದ್ರೆ ಮಾಲೀಕರು ಹತ್ತು ಸಾವಿರದಿಂದ ಒಂದು ಲಕ್ಷದವರೆಗೆ ದಂಡ ತೆರಬೇಕಾಗಿದೆ.

BBMP Circular
BBMP Circular
author img

By

Published : Dec 6, 2020, 2:24 AM IST

ಬೆಂಗಳೂರು: ನಗರದ ಅಂಗಡಿ ಮುಂಗಟ್ಟು, ಹೋಟೇಲ್, ರೆಸ್ಟೋರೆಂಟ್ ಮಾಲೀಕರು, ಹಾಗೂ ಸಾರ್ವಜನಿಕ ಕಾರ್ಯಕ್ರಮಗಳ ಆಯೋಜಕರಿಗೆ ಬಿಬಿಎಂಪಿ ಶಾಕ್ ನೀಡಿದೆ. ಸಾರ್ವಜನಿಕರು, ಗ್ರಾಹಕರು ಕೋವಿಡ್ ಮುನ್ನೆಚ್ಚರಿಕಾ ನಿಯಮ ಪಾಲಿಸದಿದ್ರೆ ಮಾಲೀಕರು ಹತ್ತು ಸಾವಿರದಿಂದ ಒಂದು ಲಕ್ಷದವರೆಗೆ ದಂಡ ತೆರಬೇಕಾಗಿದೆ.

ಪಾಲಿಕೆ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಾದ ಹೊಟೇಲ್, ಕಲ್ಯಾಣಮಂಟಪಗಳು, ಚಿತ್ರಮಂದಿರ, ಮಾಲ್​ಗಳು, ಅಂಗಡಿ- ಮುಂಗಟ್ಟುಗಳ ಮಾಲೀಕರು ತಮ್ಮ ಆವರಣಗಳ ವ್ಯಾಪ್ತಿಯಲ್ಲಿ ಸಾರ್ವಜನಿಕರು ಮಾಸ್ಕ್ ಧರಿಸುವ, ಸಾಮಾಜಿಕ ಅಂತರ ಕಾಪಾಡುವ ಮತ್ತು ಒಳ ಆವರಣಗಳಲ್ಲಿ ಮಾಸ್ಕ್ ಧರಿಸುವ ಕುರಿತು ಪರಿಶೀಲಿಸಿಸಬೇಕು ತಪ್ಪಿದಲ್ಲಿ ಪಾಲಿಕೆ ದಂಡ ವಿಧಿಸಲಿದೆ.

BBMP Circular
ಬಿಬಿಎಂಪಿ ಸುತ್ತೋಲೆ

ಈ ಬಗ್ಗೆ ಬಿಬಿಎಂಪಿ ಸುತ್ತೋಲೆ ಹೊರಡಿಸಿದ್ದು, ಕರ್ನಾಟಕ ಸಾಂಕ್ರಾಮಿಕ ರೋಗಗಳ ಸುಗ್ರೀವಾಜ್ಞೆ-2020ರ ನಿಯಮಗಳಿಗೆ ತಿದ್ದುಪಡಿಯನ್ನು ಪ್ರಕಟಿಸಿದೆ.

ಎಲ್ಲೆಲ್ಲಿ ಎಷ್ಟೆಷ್ಟು ದಂಡ

  • ಸ್ವಸಹಾಯ ಪದ್ಧತಿ ಹೋಟೆಲ್, ದರ್ಶಿನಿ, ಆಹಾರ ಮಳಿಗೆಗಳು, ಸಣ್ಣ ಅಂಗಡಿ ಮುಂಗಟ್ಟುಗಳು, ಬೀದಿ ಬದಿ ವ್ಯಾಪಾರಿಗಳ ಮಳಿಗೆಗಳಿಗೆ - 5,000 ರೂ.
  • ಹವಾ ನಿಯಂತ್ರಣವಲ್ಲದ ರೆಸ್ಟೋರೆಂಟ್​ಗಳು, ಪಾರ್ಟಿ ಹಾಲ್​ಗಳು, ಅಂಗಡಿ ಮಳಿಗೆಗಳು, ಡಿಪಾರ್ಟ್​ಮೆಂಟಲ್ ಸ್ಟೋರ್ಸ್, ಖಾಸಗಿ ಬಸ್ ನಿಲ್ದಾಣ, ಇತರೆ ಸಾರ್ವಜನಿಕ ಸ್ಥಳಗಳು- 25,000 ರೂ.
  • ಹವಾ ನಿಯಂತ್ರಿತ ರೆಸ್ಟೋರೆಂಟ್​ಗಳು, ಪಾರ್ಟಿ ಹಾಲ್​ಗಳು, ಅಂಗಡಿ ಮಳಿಗೆಗಳು, ಡಿಪಾರ್ಟ್​ಮೆಂಟಲ್ ಸ್ಟೋರ್ಸ್, ಮಲ್ಟಿಪ್ಲೆಕ್ಸ್, ಶಾಪಿಂಗ್ ಮಾಲ್​ ಇತರೆ ಸಾರ್ವಜನಿಕ ಸ್ಥಳಗಳು- 50,000 ರೂ.
  • ತ್ರಿ(Three) ಸ್ಟಾರ್ ಮೇಲ್ಪಟ್ಟ ಹೋಟೇಲ್​ಗಳು, 500 ಅಥವಾ ಅದಕ್ಕಿಂತ ಮೇಲ್ಪಟ್ಟ ಆಸನ ಹೊಂದಿದ ಕಲ್ಯಾಣ ಮಂಟಪ ಅಥವಾ ಸಮುದಾಯ ಭವನಗಳು, ಸಾರ್ವಜನಿಕ ಸ್ಥಳಗಳು- 1,00,000 ರೂ.
  • ಸಾರ್ವಜನಿಕ ಸಭೆ, ಸಮಾರಂಭ, ಕಾರ್ಯಕ್ರಮ, ರ‍್ಯಾಲಿ, ಕೂಟಗಳು, ಆಚರಣೆಗಳ ಆಯೋಜಕರಿಗೆ- 50,000 ರೂ.
  • ಮೇಲಿನ ಸಾರ್ವಜನಿಕ ಸ್ಥಳಗಳನ್ನು ಹೊರತುಪಡಿಸಿ ಇತರೆ ಸಾರ್ವಜನಿಕ ಸ್ಥಳಗಳು - 10,000 ರೂ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.