ETV Bharat / state

₹39 ಕೋಟಿ ತೆರಿಗೆ ಬಾಕಿ ಉಳಿಸಿಕೊಂಡ ಮಂತ್ರಿ ಮಾಲ್: ಬೀಗ ಹಾಕಿ, ತೆರೆದು ಬಿಬಿಎಂಪಿ ಪ್ರಹಸನ - mantri mall

39 ಕೋಟಿ ರೂಪಾಯಿ ತೆರಿಗೆ ಬಾಕಿ ಉಳಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಮಂತ್ರಿ ಮಾಲ್​​ಗೆ ಬೀಗ ಜಡಿದಿದ್ದ ಬಿಬಿಎಂಪಿ, 5 ಕೋಟಿ ರೂ ಡಿಡಿ ಪಾವತಿ ಮಾಡಿದ ಕೂಡಲೇ ಬೀಗ ತೆರೆಯಲು ಅವಕಾಶ ನೀಡಿದೆ.

mantri mall to pay 39 crore tax dues
ಮಂತ್ರಿ ಮಾಲ್
author img

By

Published : Sep 30, 2021, 3:06 PM IST

ಬೆಂಗಳೂರು: ಬಾಕಿ ಉಳಿಸಿಕೊಂಡ ಕಂದಾಯ ವಸೂಲಿ ಕಾರ್ಯಕ್ರಮದ ಭಾಗವಾಗಿ, ಬಿಬಿಎಂಪಿ ಪಶ್ಚಿಮ ವಲಯ ಕಚೇರಿಯು ಬರೋಬ್ಬರಿ 39 ಕೋಟಿ ರೂಪಾಯಿ ತೆರಿಗೆ ಬಾಕಿ ಉಳಿಸಿಕೊಡ ಮಂತ್ರಿ ಮಾಲ್​​ಗೆ ಬೀಗ ಜಡಿದಿದೆ.

mantri mall to pay 39 crore tax dues
ಮಂತ್ರಿಮಾಲ್​​ಗೆ ಬೀಗ ಹಾಕಿದ ಬಿಬಿಎಂಪಿ ಅಧಿಕಾರಿಗಳು

ಆದರೆ ಕೇವಲ 5 ಕೋಟಿ ರೂ ಡಿಡಿ ಪಾವತಿ ಮಾಡಿದ ಕೂಡಲೇ ಬೀಗ ತೆರೆಯಲು ಅವಕಾಶ ಕೊಟ್ಟಿದೆ. ಬಿಬಿಎಂಪಿಯ ಈ ನಡೆ ಸಾರ್ವಜನಿಕರ ಟೀಕೆಗೆ ಒಳಗಾಗಿದೆ. ಪಾಲಿಕೆಯು ಬಡವರಿಗೊಂದು ನಿಯಮ, ಶ್ರೀಮಂತರಿಗೊಂದು ನಿಯಮ ಮಾಡುತ್ತಿದೆ. 2017 ರಿಂದಲೂ ಮಂತ್ರಿ ಮಾಲ್ ತೆರಿಗೆ ಪಾವತಿ ಮಾಡದೆ ಬಾಕಿ ಉಳಿಸಿಕೊಂಡಿದೆ. ಬಡ್ಡಿ ಹಣವೂ ಸೇರಿ 39 ಕೋಟಿ ರೂ ಬಾಕಿಯಾಗಿದೆ.

mantri mall to pay 39 crore tax dues
5 ಕೋಟಿ ರೂ ಡಿಡಿ ಪಾವತಿ

ಹಲವು ಬಾರಿ ನೋಟಿಸ್​ ನೀಡಿದರೂ ಕ್ಯಾರೆನ್ನದ ಮಂತ್ರಿ ಮಾಲ್ ಆಡಳಿತ ವರ್ಗಕ್ಕೆ ಈ ಹಿಂದೆಯೂ ಬೀಗ ಹಾಕಿ ಬಿಸಿ ಮುಟ್ಟಿಸಲಾಗಿತ್ತು. ತೆರಿಗೆ ಕಟ್ಟುವುದಾಗಿ ಮುಚ್ಚಳಿಕೆ ಬರೆದುಕೊಟ್ಟ ಬಳಿಕ ತೆರೆಯಲು ಅನುಮತಿಸಿದ್ದರು‌. ಇಂದು ಮತ್ತೆ ತೆರಿಗೆ ಸಂಗ್ರಹ ಅಭಿಯಾನದ ಭಾಗವಾಗಿ ಬಿಬಿಎಂಪಿ ಪಶ್ಚಿಮ ವಲಯದ ಜಂಟಿ ಆಯುಕ್ತ ಶಿವಸ್ವಾಮಿ ಹಾಗೂ ಬಿಬಿಎಂಪಿ ಅಧಿಕಾರಿಗಳು ಮಂತ್ರಿ ಮಾಲ್​ಗೆ ಬೀಗ ಹಾಕಿ, ಸ್ವಲ್ಪ ತೆರಿಗೆ ಪಾವತಿಸಿದ ಬಳಿಕ ತೆರೆಯಲು ಅವಕಾಶ ಕೊಟ್ಟರು.

2018ರಿಂದ ತೆರಿಗೆ ಪಾವತಿಸಿಲ್ಲ:

2018ರಿಂದ ಮಂತ್ರಿ ಮಾಲ್​ನಿಂದ ಆಸ್ತಿ ತೆರಿಗೆ ಪಾವತಿ ಆಗಿಲ್ಲ. ಪ್ರತಿ ವರ್ಷ ಮಂತ್ರಿ ಮಾಲ್ 6.77 ಲಕ್ಷ ರೂ ಆಸ್ತಿ ತೆರಿಗೆ ಪಾವತಿಸಬೇಕು. ಒಟ್ಟು ಮಾಲ್​​ನಿಂದ ಬಿಬಿಎಂಪಿಗೆ 39 ಕೋಟಿ ರೂ ಪಾವತಿ ಆಗಬೇಕು. ಮಂತ್ರಿ ಮಾಲ್ ಸಿಇಒ ನಿತಿನ್ ಗುಪ್ತಾ 5 ಕೋಟಿ ರೂ ಡಿಡಿ ಕೊಟ್ಟ ಕಾರಣ ಮಾಲ್ ತೆರೆಯಲು ಅವಕಾಶ ಮಾಡಿಕೊಡಲಾಗಿದೆ ಎಂದು ಶಿವಸ್ವಾಮಿ ತಿಳಿಸಿದರು.

ಇದನ್ನೂ ಓದಿ: ಡೆತ್​ನೋಟ್​ ಬರೆದಿಟ್ಟು ನಟಿ ಸೌಜನ್ಯ ಆತ್ಮಹತ್ಯೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.