ಬೆಂಗಳೂರು: ಸರ್ಕಾರ ಆದೇಶ ನೀಡಿದರೂ ಸಹ ಕೋವಿಡ್ ಸೋಂಕಿತರಿಗೆ ಬೆಡ್ ನೀಡದ ಸಾಕ್ರ ಆಸ್ಪತ್ರೆಗೆ ಬಿಬಿಎಂಪಿ ನೂತನ ಆಯುಕ್ತ ಮಂಜುನಾಥ್ ಪ್ರಸಾದ್ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಅಲ್ಲದೆ 6 ಗಂಟೆಯೊಳಗೆ ಬೆಡ್ ನಿಗದಿ ಮಾಡಿ ಮಾಹಿತಿ ನೀಡಿ.. ಕೊರೊನಾ ಸೋಂಕಿತರಿಗೆ ಬೆಡ್ ನೀಡದ ಖಾಸಗಿ ಆಸ್ಪತ್ರೆಯ ಮುಖ್ಯಸ್ಥರ ವಿರುದ್ಧ ವಿಪತ್ತು ಕಾಯ್ದೆ ಅಡಿ ಕ್ರಮ ಕೈಗೊಳ್ಳಲಾಗುತ್ತದೆ. ಸಾಕ್ರ ಆಸ್ಪತ್ರೆಯಲ್ಲಿ ಒಟ್ಟು 300 ಹಾಸಿಗೆಗಳಿದ್ದು, ಸರ್ಕಾರದ ಆದೇಶದಂತೆ ಶೇ 50 ರಷ್ಟು ಬೆಡ್ ನೀಡದ ನಿಮ್ಮ ವಿರುದ್ದ ಕ್ರಿಮಿನಲ್ ಕೇಸ್ ದಾಖಲು ಮಾಡುತ್ತೇವೆ ಎಂದು ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.
ನಿಮ್ಮ ಸಿಇಒ ಅವ್ರನ್ನ ಅರೆಸ್ಟ್ ಮಾಡಿಸುತ್ತೇನೆ. ನಾವು ಹಣ ನೀಡಿದರೂ ಸಹ ಯಾಕೆ ಬೆಡ್ ನೀಡುತ್ತಿಲ್ಲ ಎಂದು ಪ್ರಶ್ನಿಸಿದ ಆಯುಕ್ತರು, ಆಸ್ಪತ್ರೆಯ ಒಪಿಡಿ ಕ್ಲೋಸ್ ಮಾಡುವಂತೆ ಸೂಚನೆ ನೀಡಿದ್ದಾರೆ.
300 ಬೆಡ್ ಇರುವ ಈ ಆಸ್ಪತ್ರೆಯಲ್ಲಿ ಸರ್ಕಾರದ ನಿಯಮದ ಪ್ರಕಾರ 150 ಬೆಡ್ಗಳನ್ನು ಸರ್ಕಾರಕ್ಕೆ ಬಿಟ್ಟುಕೊಡಬೇಕು. ಆದರೆ ಸಾಕ್ರ ಅಸ್ಪತ್ರೆ ಕೇವಲ 30 ಬೆಡ್ ನೀಡಿದೆ ಎಂದು ತಿಳಿದು ಬಂದಿದೆ.