ಬೆಂಗಳೂರು: ಅತೃಪ್ತ ಶಾಸಕರನ್ನು ಭೇಟಿ ಮಾಡಲು ತೆರಳಿದ್ದ ಡಿ.ಕೆ ಶಿವಕುಮಾರ್ ನೇತೃತ್ವದ ತಂಡವನ್ನು ಬಂಧಿಸಿರುವ ಮುಂಬೈ ಪೊಲೀಸರ ನಡೆ ಹಾಗೂ ಅಲ್ಲಿನ ಸರ್ಕಾರದ ವಿರುದ್ಧ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಟ್ವೀಟ್ ಮೂಲಕ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
-
Manhandling Ministers and MLAs is very annoying and unbecoming of #MumbaiPolice. Such hasty Act by Maharashtra Government reinforces the suspicion on #BJP of #HorseTrading. This is a blackmark on the republic setup of our country.@CMOMaharashtra @narendramodi @Dev_Fadnavis
— H D Kumaraswamy (@hd_kumaraswamy) July 10, 2019 " class="align-text-top noRightClick twitterSection" data="
">Manhandling Ministers and MLAs is very annoying and unbecoming of #MumbaiPolice. Such hasty Act by Maharashtra Government reinforces the suspicion on #BJP of #HorseTrading. This is a blackmark on the republic setup of our country.@CMOMaharashtra @narendramodi @Dev_Fadnavis
— H D Kumaraswamy (@hd_kumaraswamy) July 10, 2019Manhandling Ministers and MLAs is very annoying and unbecoming of #MumbaiPolice. Such hasty Act by Maharashtra Government reinforces the suspicion on #BJP of #HorseTrading. This is a blackmark on the republic setup of our country.@CMOMaharashtra @narendramodi @Dev_Fadnavis
— H D Kumaraswamy (@hd_kumaraswamy) July 10, 2019
ಸಚಿವರು ಹಾಗೂ ಶಾಸಕರ ಮೇಲೆ ಮ್ಯಾನ್ ಹ್ಯಾಂಡ್ಲಿಂಗ್ ಮಾಡುವುದು ಅಲ್ಲಿನ ಪೊಲೀಸ್ ಇಲಾಖೆಗೆ ಕಪ್ಪು ಚುಕ್ಕೆಯಾಗಿದ್ದು, ಮಹಾರಾಷ್ಟ್ರ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿ ನಿಜಕ್ಕೂ ಸರಿಯಿಲ್ಲ ಎಂದು ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ. ಇದರ ಮಧ್ಯೆ ಬಿಜೆಪಿ ನಡೆಸುತ್ತಿರುವ ಕುದುರೆ ವ್ಯಾಪಾರ ಪ್ರಜಾಪ್ರಭುತ್ವ ಹಾಗೂ ದೇಶಕ್ಕೆ ಮಾಡುತ್ತಿರುವ ಅನ್ಯಾಯ ಎಂದು ಬರೆದು ಆಕ್ರೋಶ ಹೊರಹಾಕಿದ್ದಾರೆ.
ಮುಂಬೈನ ರಿನೈಸಾನ್ಸ್ ಹೋಟೆಲ್ ಒಳಗೆ ಬಿಡುವಂತೆ ಒತ್ತಾಯಿಸಿ ಕಾದು ಕುಳಿತಿದ್ದ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ತಡೆದ ಮುಂಬೈ ಪೊಲೀಸರು ವಶಕ್ಕೆ ಪಡೆದಿದ್ದಾರೆ.