ಮಂಡ್ಯ: ಕೊರೊನಾ ಹಿನ್ನೆಲೆ ಮೈಸೂರು ಜಿಲ್ಲಾಡಳಿತದ ನಡೆಯನ್ನು ಮಂಡ್ಯ ಜಿಲ್ಲಾಡಳಿತವೂ ಅನುಸರಿಸಿದ್ದು, ಅಕ್ಟೋಬರ್ 31ರ ವರೆಗೆ ಕೆಆರ್‌ಎಸ್ ಹಾಗೂ ರಂಗನತಿಟ್ಟಿಗೆ ಪ್ರವಾಸಿಗರನ್ನು ನಿಷೇಧ ಮಾಡಿ ಆದೇಶ ಹೊರಡಿಸಿದೆ.
![Mandya: Entry to Brindavan is banned during Dussehra](https://etvbharatimages.akamaized.net/etvbharat/prod-images/kn-mnd-03-krs-tourist-ban-av-7202530_15102020172808_1510f_1602763088_322.png)
ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಆದೇಶ ಮಾಡಿದ್ದು, ಅಕ್ಟೋಬರ್ 24ರಿಂದ ಪ್ರವಾಸಿಗರ ಪ್ರವೇಶಕ್ಕೆ ನಿಷೇಧ ಏರಲಾಗಿದೆ.
ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಹಿನ್ನಲೆ ಕೊರೊನಾ ಹರಡುವ ಸಂಭವವಿದ್ದು, ನಿಷೇಧ ಮಾಡಲಾಗಿದೆ. ಇನ್ನೂ ದಸರಾ ಸಮಯದಲ್ಲಿನ ಈ ಕ್ರಮ ಮೆಚ್ಚುಗೆ ಗಳಿಸಿದೆ ಎನ್ನಲಾಗಿದೆ.