ETV Bharat / state

ಕುಡಿದು ತಾಯಿಗೆ ಕಿರುಕುಳ ಕೊಡ್ತಿದ್ದ ಅಪ್ಪನಿಗೆ ಲಟ್ಟಣಿಗೆಯಿಂದ ಹೊಡೆದು ಕೊಂದ ಮಗ! - ಚೌಡಪ್ಪ ಚಿಕ್ಕಬಾಣವಾರದ ಬಳಿ‌ ಖಾಸಗಿ ಬ್ಯಾಂಕಿನ ನೌಕರ

ನಿತ್ಯ ಮದ್ಯಪಾನ ಮಾಡಿ ಬಂದು ಕುಟುಂಬಸ್ಥರ ಮೇಲೆ ಹಲ್ಲೆ ನಡೆಸುತ್ತಿದ್ದ ವ್ಯಕ್ತಿಯನ್ನು ಆತನ ಪುತ್ರನೇ ಕೊಲೆ ಮಾಡಿರುವ ಘಟನೆ ನಗರದ ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

shashikumar
ಶಶಿಕುಮಾರ್. ಡಿಸಿಪಿ ಉತ್ತರ ವಿಭಾಗ
author img

By

Published : Feb 3, 2020, 8:21 PM IST

ಬೆಂಗಳೂರು: ನಿತ್ಯ ಮದ್ಯಪಾನ ಮಾಡಿ ಬಂದು ಕುಟುಂಬಸ್ಥರ ಮೇಲೆ ಹಲ್ಲೆ ನಡೆಸುತ್ತಿದ್ದ ವ್ಯಕ್ತಿಯನ್ನು ಆತನ ಪುತ್ರನೇ ಕೊಲೆ ಮಾಡಿರುವ ಘಟನೆ ನಗರದ ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ದೊಡ್ಡ ಚೌಡಪ್ಪ ಎಂಬಾತ ಚಿಕ್ಕಬಾಣವಾರದ ಬಳಿ‌ ಖಾಸಗಿ ಬ್ಯಾಂಕಿನ ನೌಕರನಾಗಿದ್ದರು. ಆದರೆ, ಜನವರಿ 28ರ ರಾತ್ರಿ ಮನೆಯಲ್ಲಿ ನಿದ್ದೆಗೆ ಜಾರಿದ್ದವ ಮುಂಜಾನೆ ಸಾವನ್ನಪ್ಪಿದ್ದ.

ಕುಡಿದು ಬಂದು ಕಿರುಕುಳ ಕೊಡ್ತಿದ್ದ ಅಪ್ಪನನ್ನೇ ಕೊಲೆಗೈದ ಪುತ್ರ..

ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮೃತದೇಹದ ಮೇಲಿದ್ದ ಗಾಯದ ಗುರುತು ಕಂಡು ಅನುಮಾನಾಸ್ಪದ ಸಾವಿನ ಹಿನ್ನೆಲೆ ಕೇಸ್ ದಾಖಲಿಸಿಕೊಂಡು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ರು. ನಂತರ ಮನೆಯ ಸದಸ್ಯರನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದಾಗ, ಘಟನೆ ನಡೆದ ರಾತ್ರಿ ಎಂದಿನಂತೆ ತಂದೆ ದೊಡ್ಡ ಚೌಡಪ್ಪ ಮದ್ಯ ಸೇವಿಸಿ ಬಂದು ತಾಯಿ ತಿಪ್ಪಮ್ಮ ಮತ್ತು 2ನೇ ಪುತ್ರ ಗಹನ್​​​​​ಗೆ ಕಿರುಕುಳ ನೀಡಿದ್ದನಂತೆ.

ನಿತ್ಯ ಕಿರುಕುಳ ತಾಳಲಾರದೆ ಮಗನಿಗೂ ತಂದೆ ವಿರುದ್ಧ ರೋಸಿ ಹೋಗಿದ್ದ. ಜನವರಿ 28 ರ ರಾತ್ರಿ ಅಪ್ಪ ಹಾಗೂ ಮಗನ ನಡುವೆ ಮಾತಿಗೆ ಮಾತು ಬೆಳೆದು ಜಗಳ ನಡೆದಿದೆ. ಈ ವೇಳೆ ಮೊದಲಿಗೆ ತಾಯಿ ಬಿಡಿಸಿ ನಿದ್ದೆಗೆ ಜಾರಿದ್ದಾರೆ. ಆದರೆ, ಮತ್ತೆ ಇಬ್ಬರ ನಡುವಿನ ಜಗಳ ತಾರಕಕ್ಕೇರಿದೆ. ಮನೆಯಲ್ಲಿದ್ದ ಲಟ್ಟಣಿಗೆಯಲ್ಲಿ ಪುತ್ರ ಗಹನ್ ತಂದೆಗೆ ಹಿಗ್ಗಾಮುಗ್ಗಾ ಥಳಿಸಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದ. ಕೊನೆಗೆ ತೀವ್ರ ರಕ್ತಸ್ರಾವದಿಂದಾಗಿ ಚೌಡಪ್ಪ ಸಾವನ್ನಪ್ಪಿದ್ದ.

ಮರಣೋತ್ತರ ಪರೀಕ್ಷೆ ವರದಿಯಲ್ಲಿ ಇದು ಕೊಲೆ ಅಂತಾ ಸಾಬೀತಾಗಿದೆ. ಹಾಗಾಗಿ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಗಹನ್‌ ಕೈಗೆ ಕೋಳ ತೊಡಿಸಿದ್ದಾರೆ.

Intro:ಕುಡುಕ ಅಪ್ಪನಿಗೆ ಮುಹೂರ್ತ ಇಟ್ಟ ಮಗ.
ಮರಣೋತ್ತರ ಪರೀಕ್ಷೆ ಬಿಚ್ಚಿಡ್ತು ಸಾವಿನ ರಹಸ್ಯ.

ಬೈಟ್:-ಶಶಿಕುಮಾರ್. ಡಿಸಿಪಿ ಉತ್ತರ ವಿಭಾಗ,

ಇಲ್ಲೊಬ್ಬ ತಂದೆ ಸತ್ತಾಗ ಕೊಳ್ಳಿ ಇಡಬೇಕಾದವನು ತಾನೆ ತಂದೆಯನ್ನು ಸಾಯಿಸಿ ಕೊಳ್ಳಿ ಇಟ್ಟಿದ್ದಾನೆ. ಸೋ ಲದೇವನಹಳ್ಳಿ ಪೊಲೀಸ್ ಠಾಣೆಯ ಚೌಡಪ್ಪ ಚಿಕ್ಕಬಾಣವಾರದ ಬಳಿ‌ ಖಾಸಗಿ ಬ್ಯಾಂಕನ್ ನೌಕರರಾಗಿ ಕೆಲಸ ನಿರ್ವಹಿಸ್ತಿದ್ರು. ಆದರೆ
ಜನವರಿ 28 ರ ರಾತ್ರಿ ಮನೆಯಲ್ಲಿ ನಿದ್ದೆಗೆ ಜಾರಿದ್ದವರು ಮುಂಜಾನೆ ಸಾವನ್ನಪ್ಪಿದ್ದು . ಮರು ದಿನ ಪತ್ನಿ ತಿಪ್ಪಮ್ಮ ನೋಡಿ ವಿಚಾರವನ್ನ ಸೋಲದೇವನಹಳ್ಳಿ ಪೊಲೀಸರಿಗೆ ತಿಳಿಸಿದ್ದರು..

ಇನ್ನು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮೃತದೇಹದ ಮೇಲಿದ್ದ ಗಾಯಾದ ಗುರುತುಗಳ ಕಂಡು ಅನುಮಾನಾಸ್ಪದ ಸಾವಿನ ಹಿನ್ನಲೆ ಕೇಸ್ ದಾಖಲಿಸಿಕೊಂಡು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ರು. ನಂತ್ರ ಮನೆಯ ಸದಸ್ಯರನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದಾಗ ಘಟನೆ ನಡೆದ ರಾತ್ರಿ ಎಂದಿನಂತೆ ತಂದೆ ಚೌಡಪ್ಪ ಮದ್ಯೆ ಸೇವಿಸಿ ಬಂದು ತಾಯಿ ತಿಪ್ಪಮ್ಮ ಮತ್ತು ಗಹನ್ ಗೆ ಕಿರುಕುಳ ನೀಡ್ತಿದ್ದನಂತೆ, ಮನೆಯಲ್ಲಿ ಅನ್ನ,ಆಹಾರ ಸೇವಿಸದೆ ಮಡದಿ ಮಕ್ಕಳೊಂದಿಗೆ ಹಗೆ ಸಾಧಿಸ್ತಿದ್ದನಂತೆ.

ದಿನತಿನ್ಯ ಚೌಡಪ್ಪನ ಕಿರುಕುಳ ತಾಳಲಾರದೆ ಮಗನಿಗೂ ತಂದೆ ದೊಡ್ಡ ಚೌಡಪ್ಪನಿಗೂ ಜನವರಿ 28 ರ ರಾತ್ರಿ ಮಾತಿಗೆ ಮಾತು ಬೆಳೆದು ಜಗಳ ನಡೆದಿದೆ. ಈ ವೇಳೆ ಮೊದಲಿಗೆ ತಾಯಿ ಬಿಡಿಸಿ ನಿದ್ದೆಗೆ ಜಾರಿದ್ದಾರೆ. ಆದ್ರೆ ಮತ್ತೆ ಇಬ್ಬರ ನಡುವಿನ ಜಗಳ ತಾರಕಕ್ಕೇರಿದ್ದು ಮನೆಯಲ್ಲಿದ್ದ ಲತ್ತಣಿಗೆಯಲ್ಲಿ ಪುತ್ರ ಗಹನ್ ತಂದೆಗೆ ಹಿಗ್ಗಾ ಮುಗ್ಗಾ ಥಳಿಸಿ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಈ ವೇಳೆ ತೀವ್ರ ಪೆಟ್ಟುಬಿದ್ದ ತಂದೆ ದೊಡ್ಡ ಚೌಡಪ್ಪ ಮಲಗಿದ್ದ ಕೋಣೆಯಲ್ಲೆ ಸಾವನ್ನಪ್ಪಿರುವ ವಿಚಾರ ತನೀಕೆಯಲ್ಲಿ ತಿಳಿದು ಬಂದಿದೆ. ಸದ್ಯ ಮರಣೋತ್ತರ ವರದಿ ಬಳಿಕ ಅನುಮಾನಾಸ್ಪದ ಸಾವಿನ ಪ್ರಕರಣವನ್ನು ಕೊಲೆ ಪ್ರಕರಣವನ್ನಾಗಿಸಿ ತನಿಖೆ ನಡೆಸ್ತಿರುವ ಪೊಲೀಸರು ಆರೋಪಿ ಪುತ್ರ ಗಹನ್ ಅನ್ನ ಬಂಧಿಸಿ ತನೀಕೆ ಮುಂದುವರೆಸಿದ್ದಾರೆBody:KN_bNG_08_MURDER_7204498Conclusion:KN_bNG_08_MURDER_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.