ETV Bharat / state

ಬೆಂಗಳೂರು: ಮಹಿಳೆಯ ಸೊಂಟ ಮುಟ್ಟಿ ಯುವಕ ಎಸ್ಕೇಪ್​​... ಕೊನೆಗೂ ಬಿಡಲಿಲ್ಲ ಪೊಲೀಸರು! - ಸೊಂಟ ಮುಟ್ಟಿ ಸಿಕ್ಕ ಬಿದ್ದ ಕಾಮುಕ

ರಸ್ತೆ ಬದಿ ಹೋಗುತ್ತಿದ್ದ ಮಹಿಳೆಯ ಸೊಂಟ ಮುಟ್ಟಿ ಬೈಕ್​​ನಲ್ಲಿ ಪರಾರಿಯಾಗಿದ್ದ ಆರೋಪಿಯ ಬಂಧಿಸುವಲ್ಲಿ ಬೆಂಗಳೂರು ಪೊಲೀಸರು ಯುಶಸ್ವಿಯಾಗಿದ್ದಾರೆ.

man arrested in Bangalore
man arrested in Bangalore
author img

By

Published : Jun 22, 2020, 4:01 PM IST

ಬೆಂಗಳೂರು: ರಸ್ತೆ ಮಧ್ಯೆ ಮಹಿಳೆಯ ಸೊಂಟ‌ ಮುಟ್ಟಿ ಚುಡಾಯಿಸಿದ ವ್ಯಕ್ತಿಯನ್ನು ಬಂಧಿಸುವಲ್ಲಿ ಉತ್ತರ ವಿಭಾಗದ ಆರ್​​.ಟಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ಆರ್‌.ಟಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಅಪಾರ್ಟ್‌ಮೆಂಟ್ ಹತ್ತಿರದ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ‌ಸುಮಾರು 40 ವರ್ಷದ ಮಹಿಳೆ ತಮ್ಮ ಮನೆಗೆ‌ ದಿನಸಿ ತರಲು‌ ರಸ್ತೆಯಲ್ಲಿ ‌ನಡೆದುಕೊಂಡು ಹೋಗುತ್ತಿದ್ದಾಗ ದ್ವಿಚಕ್ರ ವಾಹನದಲ್ಲಿ ಬಂದ ಯುವಕ ‌ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿ, ಆಕೆಯ ಸೊಂಟ ಮುಟ್ಟಿ ಪರಾರಿಯಾಗಿದ್ದಾನೆ.

ಮಹಿಳೆಯ ಸೊಂಟ ಮುಟ್ಟಿ ಸಿಕ್ಕಬಿದ್ದ ಯುವಕ

ನೊಂದ ಮಹಿಳೆ ಆರ್​.ಟಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ‌ ಕಾರಣ ಸ್ಥಳದಲ್ಲಿ ಸೆರೆಯಾದ ಸಿಸಿಟಿವಿ ದೃಶ್ಯಾವಳಿ ಆಧಾರದ ಮೇರೆಗೆ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಘಟನೆ ಬಗ್ಗೆ ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್ ಮಾತನಾಡಿ, ದಿನಸಿ ಸಾಮಾನು ತರಲು ತೆರಳಿದ್ದ ಸಂಧರ್ಭದಲ್ಲಿ ಮಹಿಳೆ ಜೊತೆ ಆರೋಪಿ ಈ ರೀತಿಯಾಗಿ ವರ್ತನೆ ತೋರಿದ್ದಾನೆ. ಆರೋಪಿ ವಾಟರ್ ಸಪ್ಲೆ ಕೆಲಸ ಮಾಡ್ತಿರುವ ಸಂತೋಷ್​ ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ. ತನಿಖೆ ವೇಳೆ ಆತ ಒಂದೇ ಸಲ ಮಹಿಳೆಯನ್ನ ಮುಟ್ಟಿದ್ದಾಗಿ ತಿಳಿಸಿದ್ದಾನೆ. ಸದ್ಯ ಈ ರೀತಿ ಬೇರೆ ಕಡೆ ಮಾಡಿರುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಡಿಸಿಪಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.