ಬೆಂಗಳೂರು: ಅಬಕಾರಿ, ಉಪನ್ಯಾಸಕ ಸೇರಿದಂತೆ ಹಲವಾರು ಸರ್ಕಾರಿ ಇಲಾಖೆಯುಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಉದ್ಯೋಗ ಆಕಾಂಕ್ಷಿಗಳಿಂದ ಕೋಟ್ಯಂತರ ರೂಪಾಯಿ ವಂಚಿಸಿದ್ದ ದಾವಣಗೆರೆ ಮೂಲದ ಅರುಣ್ ಕುಮಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಪಿಎಸ್‌ಸಿ ಹೆಸರಲ್ಲಿ ಸರ್ಕಾರಿ ಉದ್ಯೋಗಗಳು ಡೀಲ್ ಆಗುತ್ತಿವೆ, ತಾನು ಕೆಪಿಎಸ್ಐ ಮೆಂಬರ್ ಎಂದೇಳಿ ಉದ್ಯೋಗ ಕೊಡಿಸುವುದಾಗಿ ಅಮಾಯಕರನ್ನು ನಂಬಿಸಿ ಲಕ್ಷಾಂತರ ರೂಪಾಯಿ ಲೂಟಿ ಮಾಡುತ್ತಿದ್ದ ದಾವಣಗೆರೆಯ ಅರುಣ್ ಕುಮಾರ್‌ನನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಅರುಣ್ ಕುಮಾರ್ ಮನೆ ಬಾಗಿಲಿಗೆ ನೇಮಕಾತಿ ಪತ್ರ ಬರುವಂತೆ ಮಾಡುತ್ತೀನಿ ಎಂದೇಳಿ ಲಕ್ಷಾಂತರ ಹಣವನ್ನು ಸ್ವೀರಿಸಿದ್ದಾನೆ. ತಾನು ಕೆಪಿಎಸ್ಸಿ ಸದಸ್ಯ ಎಂದು ಹೇಳಿ ಹಲವರಿಗೆ ಹೇಳಿ ಅಬಕಾರಿ, ಉಪನ್ಯಾಶಕ ಹುದ್ದೆಗಳನ್ನು ಕೊಡಿಸುವುದಾಗಿ ಸಾಕಷ್ಟು ಜನರಿಗೆ ಮೋಸ ಮಾಡಿರುವುದು ತನಿಖೆ ವೇಳೆ ತಿಳಿದುಬಂದಿದೆ.
1.67 ಕೋಟಿ ರೂ ವಂಚನೆ
ವಂಚಕ ಅರುಣ್ ಕುಮಾರ್ ಸರ್ಕಾರಿ ಉದ್ಯೋಗದ ಆಸೆ ಇಟ್ಟುಕೊಂಡಿದ್ದ ಯುವಕರನ್ನ ಮೊದಲು ಪರಿಚಯ ಮಾಡಿಕೊಳ್ಳುತ್ತಿದ್ದ. ನಂತರ ನನಗೆ ಎಲ್ಲಾ ರೀತಿಯ ಲಿಂಕ್ ಇದೆ. ಅಬಕಾರಿ ಇಲಾಖೆಯ ಸಬ್ ಇನ್ಸ್‌ಪೆಕ್ಟರ್ ಹುದ್ದೆ ಕೊಡಿಸುತ್ತೇನೆ ಎಂದು ಯುವಕರಿಗೆ ಅಮಿಷವೊಡ್ಡಿ, ಹುದ್ದೆ ಕೊಡಿಸಲು 70 ಲಕ್ಷ ಖರ್ಚಾಗುತ್ತೆ ಎಂದು ಮುಂಚೆಯೇ ಆಕಾಂಕ್ಷಿಗಳಿಗೆ ತಿಳಿಸುತ್ತಿದ್ದನೆಂದು ತಿಳಿದುಬಂದಿದೆ.
ಅದಕ್ಕಾಗಿ ಮುಂಗಡ ಹಣವಾಗಿ 70 ಲಕ್ಷ ಖರ್ಚಾಗುತ್ತದೆ ಎಂದು ಆಕಾಂಕ್ಷಿಗಳಿಗೆ ಡಿಮಾಂಡ್ ಮಾಡಿದ್ದಾನೆ. ಈ ವೇಳೆ ಒಮ್ಮೆಲೆ ಹಣ ಹಣ ಹೊಂದಿಸಲಾಗದ ಇಲ್ಲದ ಯುವಕರು ಎರಡು ಹಂತದಲ್ಲಿ 35 ಲಕ್ಷ ರೂ ಗಳನ್ನು ಮತ್ತೊಂದು ಬಾರಿ 35 ಲಕ್ಷ ರೂಪಾಯಿಗಳನ್ನು ಸ್ನೇಹಿತರಿಂದ ಪಡೆದು ವಂಚಕನಿಗೆ ನೀಡಿದ್ದಾರೆಂದು ತಿಳಿದುಬಂದಿದೆ. ಜೊತೆಗೆ ಹಣ ಹೊಂದಿಸಿಕೊಟ್ಟಿದ್ದ ಯುವಕರ ಸ್ನೇಹಿತರಿಗೂ ಕೆಲಸ ಕೊಡಿಸುವುದಾಗಿ ಮೋಸ ಮಾಡಿದ್ದಾನೆ. ಹೀಗೆ ಒಟ್ಟಾರೆ ಬರೋಬ್ಬರಿ 1.67 ಕೋಟಿ ರೂ ಹಣ ವಂಚನೆ ಮಾಡಿದ್ದಾನೆಂದು ತಿಳಿದುಬಂದಿದೆ.
ನಕಲಿ ಅಪಾಯಿಂಟ್ಮೆಂಟ್ ಲೆಟರ್ ಕೊಟ್ಟಿದ್ದ ವಂಚಕ
ರಾಜ್ಯಪಾಲರು ನನ್ನನ್ನು ಈ ಕೆಲಸಕ್ಕೆ ನೇಮಕ ಮಾಡಿದ್ದಾರೆ ಎಂದು ಪತ್ರ ತೋರಿಸಿ ಯುವಕರನ್ನು ನಂಬಿಸುತ್ತಿದ್ದ. ಬಳಿಕ ಇನ್ನೂ ಸ್ವಲ್ಪ ದಿನದಲ್ಲಿ ನಿಮಗೆ ನೇಮಕಾತಿ ಪತ್ರ ಕೊಡುವುದಾಗಿ ಅಮಿಷವೊಡ್ಡಿದ್ದಲ್ಲದೆ. ನಕಲಿ ನೇಮಕಾತಿ ಪತ್ರಗಳನ್ನು ಅರುಣ್ಕುಮಾರ್ ತಮಗೆ ಹಣ ನೀಡಿದ್ದ ಯುವಕರಿಗೆ ಕೊಟ್ಟಿದ್ದಾನೆ. ಆದರೆ ಉದ್ಯೋಕಾಂಕ್ಷಿಗಳು ಆರೋಪಿ ನೀಡಿದ್ದ ಪತ್ರ ನಕಲಿ ಪತ್ರಗಳೆಂದು ತಿಳಿದ ಮೇಲೆ ವಿಧಾನಸೌಧ ಠಾಣೆಯಲ್ಲಿ ದೂರು ನೀಡಿದ್ದರು.
ಇದೀಗ ದೂರು ಪಡೆದ ವಿಧಾನಸೌಧ ಪೊಲೀಸರು ಆರುಣ್ ಕುಮಾರ್ ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿ ಹಲವಾರು ಮಂದಿಗೆ ಇದೇ ರೀತಿ ವಂಚಿಸಿರುವುದರ ಬಗ್ಗೆ ಬೆಳಕಿಗೆ ಬಂದಿದೆ.