ETV Bharat / state

ನಕಲಿ ಅಂಕಪಟ್ಟಿ ನೀಡಿ ಪ್ರಮೋಷನ್: ತಾಲೂಕು ಪಂಚಾಯತ್ ಅಧಿಕಾರಿ ಅರೆಸ್ಟ್

author img

By

Published : Sep 15, 2022, 9:29 AM IST

ನಕಲಿ ಅಂಕಪಟ್ಟಿ ನೀಡಿ ಪ್ರಮೋಷನ್ ಪಡೆದ ನರೇಗಾ ಸಹಾಯಕ ನಿರ್ದೇಶಕ ಅರೆಸ್ಟ್. ಹಗರಿಬೊಮ್ಮನಹಳ್ಳಿ ಪಟ್ಟಣದ ತಾ.ಪಂ ನರೇಗಾ ಸಹಾಯಕ ನಿರ್ದೇಶಕ ಉಮೇಶ್ ಗೌಡ ಬಂಧಿತ ಆರೋಪಿ.

ನಕಲಿ ಅಂಕಪಟ್ಟಿ ನೀಡಿ ಪ್ರಮೋಷನ್
ನಕಲಿ ಅಂಕಪಟ್ಟಿ ನೀಡಿ ಪ್ರಮೋಷನ್

ವಿಜಯನಗರ: ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪಟ್ಟಣದ ತಾಲೂಕು ಪಂಚಾಯತಿ ನರೇಗಾ ಸಹಾಯಕ ನಿರ್ದೇಶಕ ಉಮೇಶ್ ಗೌಡ ಮುಂಬಡ್ತಿಗಾಗಿ ಪದವಿಯ ನಕಲಿ ಅಂಕಪಟ್ಟಿ ಮತ್ತು ಮೈಗ್ರೇಶನ್ ಪ್ರಮಾಣ ಪತ್ರಗಳನ್ನು ನೀಡಿದ್ದಾರೆ ಎಂಬ ಗಂಭೀರ ಆರೋಪದಡಿ ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾದ ಬೆನ್ನಲ್ಲೇ ಪೊಲೀಸರು ಉಮೇಶ ಗೌಡ ಅವರನ್ನು ಬಂಧಿಸಿದ್ದಾರೆ.

ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದ ಪರವಾಗಿ ಬಳ್ಳಾರಿ ಮತ್ತು ವಿಜಯನಗರ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಶೈಲಾ ಎಸ್.ಕುಲಕರ್ಣಿ ಅವರು ನೀಡಿದ ದೂರಿನನ್ವಯ ಪ್ರಕರಣ ದಾಖಲಾಗಿದೆ. ಈ ಹಿಂದೆ ಹಗರಿಬೊಮ್ಮನಹಳ್ಳಿ ತಾ.ಪಂ.ನಲ್ಲಿ ಅನುಕಂಪದ ಆಧಾರದಲ್ಲಿ ಸಹಾಯಕ ಸಾಂಖ್ಯಿಕ ಅಧಿಕಾರಿಯಾಗಿ ಕೆಲಸ ಪಡೆದ ಉಮೇಶ್ ಗೌಡ, ಮುಂಬಡ್ತಿ ಪಡೆಯುವ ದುರುದ್ದೇಶದಿಂದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಹೆಸರಲ್ಲಿ 2007, 2008 ಮತ್ತು 2009ನೇ ಸಾಲಿನ ಬಿಎ ಪದವಿಯ ನಕಲಿ ಅಂಕಪಟ್ಟಿ, ಪಾಸಿಂಗ್ ಸರ್ಟಿಫಿಕೆಟ್, ಮೈಗ್ರೇಶನ್ ಸೃಷ್ಟಿ ಮಾಡಿಕೊಂಡು ತಾ.ಪಂ.ಇಒ ಅವರಿಂದ ದೃಢೀಕರಿಸಿಕೊಂಡು ಮುಂಬಡ್ತಿ ಪಡೆದುಕೊಂಡಿದ್ದಾರೆ. ಹೀಗಾಗಿ ಹಗರಿಬೊಮ್ಮಹಳ್ಳಿ ತಾ.ಪಂ.ನಲ್ಲಿ ಕಾನೂನುಬಾಹಿರವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ ಉಮೇಶ್ ಗೌಡ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ಅಪಘಾತವಾದರೂ ಶಾಲೆಗೆ ತೆರಳಿದ 1ನೇ ತರಗತಿ ವಿದ್ಯಾರ್ಥಿ: ಪಾಠ ಕೇಳುತ್ತಲೇ ಕುಸಿದು ಬಿದ್ದು ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.