ETV Bharat / state

ಕನ್ನಡ ಸಾಹಿತ್ಯ ಪರಿಷತ್ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಮಹೇಶ್ ಜೋಷಿ - ಸಚಿವ ವಿ.ಸುನೀಲ್ ಕುಮಾರ್

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನೀಲ್ ಕುಮಾರ್ ನೇತೃತ್ವದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ನಾಡೋಜ ಡಾ.ಮಹೇಶ್ ಜೋಷಿ ಅವರು ಅಧಿಕಾರ ವಹಿಸಿಕೊಂಡರು.

mahesh joshi
ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಹೇಶ್ ಜೋಷಿ
author img

By

Published : Nov 26, 2021, 5:52 PM IST

Updated : Nov 26, 2021, 6:33 PM IST

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾಗಿ ಡಾ.ಮಹೇಶ್ ಜೋಷಿ ಅವರಿಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನೀಲ್ ಕುಮಾರ್ ನೇತೃತ್ವದಲ್ಲಿ ಅಧಿಕಾರ ಸ್ವೀಕರಿಸಿದರು.

ನಂತರ ಮಾತನಾಡಿದ ಡಾ.ಜೋಷಿ, 'ಅರ್ಥಪೂರ್ಣವಾದ, ಐತಿಹಾಸಿಕ ಸ್ಥಳದಲ್ಲಿ ಅಧಿಕಾರ ಸ್ವೀಕರಿಸಿದ್ದೇನೆ. ಮುಂದೆ ಕನ್ನಡ ಸಾಹಿತ್ಯ ಪರಿಷತ್ತನ್ನು ಜನಸಾಮಾನ್ಯರ ಪರಿಷತ್ತನ್ನಾಗಿ ಮಾಡಬೇಕೆಂಬ ಗುರಿ ಇದೆ. 20 ಅಭ್ಯರ್ಥಿಗಳು ಠೇವಣಿ ಕಳೆದುಕೊಳ್ಳುವಷ್ಟು ಮಟ್ಟಿಗೆ ದಾಖಲೆ ಮತದಲ್ಲಿ ನನ್ನನ್ನು ಗೆಲ್ಲಿಸಿದ್ದಾರೆ. ಅಪಾರ ನಿರೀಕ್ಷೆಯ‌ನ್ನು ಹುಸಿ ಮಾಡುವುದಿಲ್ಲ, ಕ್ರಾಂತಿಕಾರಕ ಬದಲಾವಣೆಯನ್ನು ತಂದು ಕನ್ನಡ ಸಾಹಿತ್ಯ ಪರಿಷತ್ತನ್ನು ಎಲ್ಲರೂ ಘನತೆ, ಗೌರವದಿಂದ ನಾನೂ ಸದಸ್ಯ ಎಂದು ಹೇಳುವ ರೀತಿ ಮಾಡುತ್ತೇನೆ' ಎಂದರು.

'ಸಾಹಿತ್ಯ, ಸಂಸ್ಕೃತಿ, ಕಲೆಗಳನ್ನು ಒಟ್ಟಿಗೆ ಸೇರಿಸಲಾಗುವುದು. ಪರಿಷತ್ತನ್ನು ಶಕ್ತಿಯುತ ಮಾಡಲಾಗುವುದು. ಸದಸ್ಯತ್ವವನ್ನು ಈಗಿರುವ 3 ಲಕ್ಷ 40 ಸಾವಿರದಿಂದ ಒಂದು ಕೋಟಿಗೆ ಏರಿಸಲಾಗುವುದು. ಕೇವಲ ಮತದಾನ ಮಾಡುವುದಕ್ಕೋಸ್ಕರವಾಗಿ ಸದಸ್ಯರಲ್ಲ, ಗೌರವಾನ್ವಿತ ಸದಸ್ಯರು' ಎಂದರು. 'ಆಧುನಿಕ ತಂತ್ರಜ್ಞಾನ ಬಳಸಿ, ಮನೆಬಾಗಿಲಿಗೆ, ಹಳ್ಳಿಹಳ್ಳಿಗೆ ಸಾಹಿತ್ಯ ಪರಿಷತ್ತನ್ನು ಜನಸಾಮಾನ್ಯರ ಮನೆಬಾಗಿಲಿಗೆ ಮುಟ್ಟಿಸಲಾಗುವುದು' ಎಂದು ಜೋಷಿ ಹೇಳಿದರು.

ಹಾವೇರಿಯಲ್ಲಿ ನಡೆಯಬೇಕಿದ್ದ ಕನ್ನಡ ಸಾಹಿತ್ಯ ಸಮ್ಮೇಳನದ ಕುರಿತು ಪ್ರಶ್ನಿಸಿದಾಗ, 'ಹಾವೇರಿ ಸಾಹಿತ್ಯ ಸಮ್ಮೇಳನ ನಡೆಯಬೇಕು, ಕೋವಿಡ್ ಹಿನ್ನೆಲೆಯಲ್ಲಿ ನಡೆದಿರಲಿಲ್ಲ. ಮುಂದೆ ಅರ್ಥಪೂರ್ಣವಾಗಿ ನಡೆಸಲಾಗುವುದು. ಆರೋಗ್ಯ ದೃಷ್ಟಿಯಿಂದ ಯಾರಿಗೂ ಸಮಸ್ಯೆ ಆಗದಂತೆ, ಸಿಎಂ ಜೊತೆ ಚರ್ಚೆ ಮಾಡಿ ನಡೆಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು' ಎಂದರು.

ಹಿರಿಯ ಸಾಹಿತಿ, ಹಂಪ ನಾಗರಾಜಯ್ಯ ಮಾತನಾಡಿ, 'ಬಹಳ ಸಮರ್ಥ ಅಧ್ಯಕ್ಷರು ಆರಿಸಿ ಬಂದಿದ್ದಾರೆ. ಇದು ಪರ್ವಕಾಲ, ಸ್ಥಿತ್ಯಂತರದ ಕಾಲಘಟ್ಟದಲ್ಲಿ ಕನ್ನಡಕ್ಕೆ ಅನೇಕ ಸವಾಲುಗಳಿವೆ. ಇಡೀ ನಾಡು ದೊಡ್ಡ ನಿರೀಕ್ಷೆಯಲ್ಲಿದೆ. ಎಲ್ಲರೂ ಪರಿಷತ್ತಿನ ಜೊತೆ ನಿಂತು ಕೆಲಸ ಮಾಡಬೇಕಿದೆ' ಎಂದು ಕಿವಿಮಾತು ಹೇಳಿದರು.

ಈ ವೇಳೆ ಮಾಜಿ ಅಧ್ಯಕ್ಷ, ನಾಡೋಜ ಮನು ಬಳಿಗಾರ್,‌ ಸಾಹಿತಿ ದೊಡ್ಡರಂಗೇಗೌಡ, ಭಗವಾನ್ ಭಾಗಿಯಾಗಿದ್ದರು.‌

Last Updated : Nov 26, 2021, 6:33 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.