ಬೆಂಗಳೂರು: ಮಹಾಲಕ್ಷ್ಮೀ ಲೇಔಟ್ ಉಪಚುನಾವಣೆ ಹಿನ್ನೆಲೆ ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದ್ದು,
ಮತದಾನಕ್ಕೆ ಬಿಜೆಪಿ ಅಭ್ಯರ್ಥಿ ಗೋಪಾಲಯ್ಯ ಕುಟುಂಬ ಸಮೇತ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದ್ದಾರೆ.
ಪತ್ನಿ ಹೇಮಲತಾ ಗೋಪಾಲಯ್ಯ, ತಾಯಿ ಕಾಳಮ್ಮ ಪುತ್ರ ಮಂಜುನಾಥ್ ಗೌಡ, ಸಂಜೀವ್ ಗೌಡ ಜೊತೆಗೂಡಿ ಮತದಾನ ಮಾಡಿದ್ದಾರೆ. ಮತದಾನದ ನಂತರ ಮಾತಾನಾಡಿದ ಅಭ್ಯರ್ಥಿ ಗೋಪಾಲಯ್ಯ,ತಾಯಿಯ ಅರ್ಶೀವಾದ ಪಡೆದು ಮತದಾನ ಮಾಡಿದ್ದೇನೆ.
ಜನ ಈ ಕ್ಷೇತ್ರಕ್ಕೆ ಸೇವೆ ಮಾಡಿದರವನ್ನು ಗೆಲ್ಲಿಸ್ತಾರೆ. ಎಲ್ಲ ಬೂತ್ನಲ್ಲಿ ಈಗ ಜನರಿದ್ದಾರೆ. ಸರ್ಕಾರಿ ರಜೆ ಇರೋದ್ರಿಂದ ಮತದಾನಕ್ಕೆ ಜನ ಬರುತ್ತಾರೆ ಎಂಬ ನಂಬಿಕೆ ಇದೆ. ನಾವು ಕೂಡ ಮತಯಾಚನೆ ಮಾಡುವ ಸಂದರ್ಭದಲ್ಲಿ ಹತ್ತು ಗಂಟೆಯೊಳಗೆ ಮತದಾನ ಮಾಡುವಂತೆ ಜನರಿಗೆ ಮನವಿ ಮಾಡಿ ಜಾಗೃತಿ ಮೂಡಿಸಿದ್ದೇವೆ ಎಂದರು.