ETV Bharat / state

ತುಪ್ಪ ಮಾರಾಟ ನೆಪದಲ್ಲಿ ನಕಲಿ ಚಿನ್ನ ಮಾರಾಟ: ಇಬ್ಬರು ಗುಜರಾತಿ ಮಹಿಳೆಯರ ಬಂಧನ - ಇಬ್ಬರು ಮಹಿಳೆಯರನ್ನು ಬಂಧಿಸಿದ ಮಾಗಡಿ ಪೊಲೀಸರು

ಬೆಂಗಳೂರಿನಲ್ಲಿ ತುಪ್ಪ ಮಾರಾಟ ಮಾಡುವ ನೆಪದಲ್ಲಿ ನಕಲಿ ಚಿನ್ನ ಮಾರಾಟ ಮಾಡಿ ಅಸಲಿ ಚಿನ್ನಾಭರಣ ಎಗರಿಸುತ್ತಿದ್ದ ಇಬ್ಬರು ಗುಜರಾತಿ ಮಹಿಳೆಯರನ್ನು ಮಾಗಡಿ ಪೊಲೀಸರು ಬಂಧಿಸಿದ್ದಾರೆ.

Magadi police arrested two gujarati women
ಇಬ್ಬರು ಗುಜರಾತಿ ಮಹಿಳೆಯರ ಬಂಧನ
author img

By

Published : Sep 24, 2021, 3:23 PM IST

ಬೆಂಗಳೂರು: ತುಪ್ಪ ಮಾರಾಟ ಮಾಡುವ ಸೋಗಿನಲ್ಲಿ ಒಂಟಿ ಮಹಿಳೆಯರ ವಿಶ್ವಾಸ ಗಿಟ್ಟಿಸಿಕೊಂಡು ಅಸಲಿ ಚಿನ್ನ ಎಂದು ನಂಬಿಸಿ ನಕಲಿ ಚಿನ್ನ ಸೇಲ್ ಮಾಡುತ್ತಿದ್ದ ಇಬ್ಬರು ಗುಜರಾತಿ ಮಹಿಳೆಯರನ್ನು ಮಾಗಡಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಅಹಮದಾಬಾದ್ ಇಂಡಿ ಗ್ರಾಮದ ಗೌರಿ ಕಿಶೋರ್ ಹಾಗೂ ನಿರುದಾ ಬಂಧಿತರು. ಇವರು ಗುಜರಾತ್​​ ಮೂಲದವರಾಗಿದ್ದು, ಸುಲಭವಾಗಿ ಹಣ ಸಂಪಾದನೆ ಮಾಡಬೇಕೆಂದು ಬೆಂಗಳೂರಿಗೆ ಬಂದಿದ್ದರು. ಇವರು ಗುಜರಾತಿಗಳು ಹೆಚ್ಚಾಗಿ ನೆಲೆಸಿರುವ ಪ್ರದೇಶಗಳನ್ನೇ ಕೃತ್ಯಕ್ಕೆ ಗುರಿಯಾಗಿಸಿಕೊಳ್ಳುತ್ತಿದ್ದರು.

police seized items
ಪೊಲೀಸರು ವಶಕ್ಕೆ ಪಡೆದಿರುವ ವಸ್ತುಗಳು

ತುಪ್ಪ ಮಾರಾಟ‌ ಮಾಡುವ ಸೋಗಿನಲ್ಲಿ ಬೀದಿ ಬೀದಿ ಅಲೆಯುತ್ತಿರುವ ಇವರು, ಸೆ.20 ರಂದು ಗುಜರಾತಿ ಮಹಿಳೆಯೊಬ್ಬರನ್ನು ಪರಿಚಯಿಸಿಕೊಂಡಿದ್ದರು. ಈ ಪರಿಚಯ ಸಲುಗೆಯಾಗಿ ಬೆಳೆದು ವಂಚಕಿಯರನ್ನು ಮಹಿಳೆ ಮನೆಗೆ ಬರಮಾಡಿಕೊಂಡಿದ್ದಾರೆ.

ಜಮೀನಿನಲ್ಲಿ ಚಿನ್ನದ ನ್ಯಾಣಗಳು ದೊರೆತಿವೆ.‌ ಕಡಿಮೆ‌ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದೇವೆ ಎಂದು ಹೇಳಿ ವಂಚಕಿಯರು ಅಸಲಿ ಚಿನ್ನದ ನಾಣ್ಯಗಳನ್ನು ತೋರಿಸಿದ್ದಾರೆ. ಇದನ್ನು ಪರೀಕ್ಷಿಸಿದಾಗ ಅಸಲಿ ಚಿನ್ನ ಎಂದು ದೃಢಪಡಿಸಿಕೊಂಡ ಮಹಿಳೆ, ಆರೋಪಿಗಳೊಂದಿಗೆ ವ್ಯವಹಾರ‌ ಮಾಡಲು ಮುಂದಾಗಿದ್ದರು.

ಮರುದಿನ ವಂಚಕಿಯರು 100 ಗ್ರಾಂ ತೂಕದ ನಕಲಿ ಚಿನ್ನದ ನಾಣ್ಯವನ್ನು ಮಹಿಳೆಗೆ ನೀಡಿ ಆಕೆಯಿಂದ 90 ಸಾವಿರ ಹಣ ಪಡೆದು ಪರಾರಿಯಾಗಿದ್ದರು. ಇತ್ತ ಮಹಿಳೆ ಗಿರವಿ ಅಂಗಡಿಯಲ್ಲಿ ಪರೀಕ್ಷಿಸಿದಾಗ ನಕಲಿ ಚಿನ್ನ ಎಂದು ತಿಳಿದು ಬಂದಿತ್ತು. ಕೂಡಲೇ ಮಹಿಳೆ ಮಾಗಡಿ‌ ರಸ್ತೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಘಟನೆಯ ಕುರಿತು ಕಾರ್ಯಾಚರಣೆ ನಡೆಸಿದ ಪೊಲಿಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರಿಂದ 6 ಗ್ರಾಂ. ತೂಕದ ಮೂರು ಅಸಲಿ ಚಿನ್ನದ ನಾಣ್ಯಗಳು, 27 ನಕಲಿ ಚಿನ್ನದ ನಾಣ್ಯ ಹಾಗೂ 90 ಸಾವಿರ ನಗದು ಜಪ್ತಿ ಮಾಡಿ ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

ಇದನ್ನೂ ಓದಿ: ಮೈಸೂರು ಅತ್ಯಾಚಾರ ಪ್ರಕರಣದ ಆರೋಪಿಗಳ ರಕ್ಷಣೆ ಪ್ರಶ್ನೆಯೇ ಇಲ್ಲ: ಮಾಧುಸ್ವಾಮಿ ಭರವಸೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.