ETV Bharat / state

ಹೈದರಾಬಾದ್​ ರಾಷ್ಟ್ರೀಯ ಪೊಲೀಸ್ ಅಕಾಡೆಮಿ ಹಾಲ್​ಗೆ ದಿ. ಐಪಿಎಸ್​ ಅಧಿಕಾರಿ ಮಧುಕರ್ ಶೆಟ್ಟಿ ಹೆಸರು - ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ,

ಕರ್ನಾಟಕದ ದಕ್ಷ ಐಪಿಎಸ್ ಅಧಿಕಾರಿಯಾಗಿದ್ದ ಮಧುಕರ್ ಶೆಟ್ಟಿ ಅವರ ಕಾರ್ಯದಕ್ಷತೆ, ಪ್ರಾಮಾಣಿಕತೆಗೆ ಸಮರ್ಪಣಾ ಮನೋಭಾವ ಕಂಡು ಅಕಾಡೆಮಿಯ ಲೆಕ್ಚರಲ್ ಹಾಲ್ ಮಧುಕರ್ ಶೆಟ್ಟಿ ಹೆಸರಿಟ್ಟಿದೆ.‌

ಮಧುಕರ್ ಶೆಟ್ಟಿ
ಮಧುಕರ್ ಶೆಟ್ಟಿ
author img

By

Published : May 11, 2021, 10:57 PM IST

Updated : May 12, 2021, 12:22 AM IST

ಬೆಂಗಳೂರು(ಹೈದರಾಬಾದ್​): ಹೈದರಾಬಾದ್​ನಲ್ಲಿ ಇರುವ ಸರ್ದಾರ್​ ವಲ್ಲಭಬಾಯಿ ನ್ಯಾಷನಲ್ ಪೊಲೀಸ್ ಅಕಾಡೆಮಿಯ ಹಾಲ್​ಗೆ ದಿವಂಗತ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಅವರ ಹೆಸರು ಇಡಲಾಗಿದೆ.

ಹೈದರಾಬಾದ್​ನ​​ ರಾಷ್ಟೀಯ ಪೊಲೀಸ್ ಅಕಾಡೆಮಿಗೆ ದಿ.ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಹೆಸರು!
ಆದೇಶಿ ಪ್ರತಿ

ಕರ್ನಾಟಕದ ದಕ್ಷ ಐಪಿಎಸ್ ಅಧಿಕಾರಿಯಾಗಿದ್ದ ಮಧುಕರ್ ಶೆಟ್ಟಿ ಅವರ ಕಾರ್ಯದಕ್ಷತೆ, ಪ್ರಾಮಾಣಿಕತೆಗೆ ಸಮರ್ಪಣಾ ಮನೋಭಾವ ಕಂಡು ಅಕಾಡೆಮಿಯ ಲೆಕ್ಚರಲ್ ಹಾಲ್ ಮಧುಕರ್ ಶೆಟ್ಟಿ ಹೆಸರಿಟ್ಟಿದೆ.‌ ಈ ಮೂಲಕ ಪೊಲೀಸ್ ತರಬೇತಿ ಪಡೆಯುವ ಐಪಿಎಸ್ ಅಧಿಕಾರಿಗಳಿಗೆ ಅವರು ಸ್ಫೂರ್ತಿಯಾಗಲಿದ್ದಾರೆ.

1999 ರ ಬ್ಯಾಚ್ ಕರ್ನಾಟಕ ಕೇಡರ್​ನ ಐಪಿಎಸ್ ಅಧಿಕಾರಿಯಾಗಿದ್ದರು. ಕರ್ನಾಟಕದಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆ ವಿರುದ್ಧ ಕೆಲಸ ಮಾಡಿದ್ದರು. ಉಡುಪಿ ಜಿಲ್ಲೆಯವರಾಗಿದ್ದ ಶೆಟ್ಟಿ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆ ಬರೆಯುವ ಮುನ್ನ ದೆಹಲಿಯ ಜವಾಹರಲಾಲ್​ ವಿಶ್ವವಿದ್ಯಾಲಯದಲ್ಲಿ (ಜೆಎನ್​ಯು) ಸಮಾಜ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು.

ಮಧುಕರ್​ ಶೆಟ್ಟಿ ಅವರು ಕರ್ನಾಟಕ ಲೋಕಾಯುಕ್ತ ಕಚೇರಿಯಲ್ಲೂ ಪ್ರಾಮಾಣಿಕ ಅಧಿಕಾರಿಯಾಗಿ ಭ್ರಷ್ಟರಿಗೆ ಸಿಂಹ ಸ್ವಪ್ನವಾಗಿದ್ದರು. ಕೆಲ ವರ್ಷಗಳ ಬಳಿಕ ಅವರನ್ನು ಹೈದರಾಬಾದ್​ನ ರಾಷ್ಟ್ರೀಯ ಪೊಲೀಸ್​ ಅಕಾಡೆಮಿಗೆ ವರ್ಗಾವಣೆ ಮಾಡಲಾಗಿತ್ತು.

Last Updated : May 12, 2021, 12:22 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.