ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಕೊರೊನಾ ಸೋಂಕಿನ ಪ್ರಮಾಣ ಏರುತ್ತಿದೆ. ಇತ್ತ ಸಾರಿಗೆ ಸೇವೆಗಳು ಶುರುವಾಗಿದ್ದು, ರೈಲ್ವೇ ಇಲಾಖೆಯು ತನ್ನ ಪ್ರಯಾಣಿಕರ ಸುರಕ್ಷಿತ ಪ್ರಯಾಣಕ್ಕಾಗಿ ಇದೀಗ ಹೊಸ ಪ್ರಯೋಗ ಮಾಡಿದೆ.
ಮಾಸ್ಕ್, ಸ್ಯಾನಿಟೈಸರ್ ಹಾಗೂ ಪಿಪಿಇ ಕಿಟ್ ಒಳಗೊಂಡ ಮಷಿನ್‌ವೊಂದನ್ನು ನೈರುತ್ಯ ರೈಲ್ವೇ ಇಲಾಖೆ ನಿರ್ಮಿಸಿದೆ. ಎಲ್ಲಾ ಮುಖಬೆಲೆಯ ಫೇಸ್ ಮಾಸ್ಕ್, ಫೇಸ್ ಶೀಲ್ಡ್, ಗ್ಲೌಸ್, ಹ್ಯಾಂಡ್ ಸ್ಯಾನಿಟೈಸರ್ ಇದ್ರಲ್ಲಿ ದೊರೆಯಲಿದೆ.
ಒಂದ್ವೇಳೆ ರೈಲು ನಿಲ್ದಾಣಕ್ಕೆ ಬರುವವರು ಮಾಸ್ಕ್ ಮರೆತು ಬಿಟ್ಟರೆ, ಇದಕ್ಕಾಗಿ ಹುಡುಕಾಟ ಮಾಡುವ ತಾಪತ್ರಯ ಇರೋದಿಲ್ಲ. ಪ್ಲಾಟ್ ಫಾರ್ಮ್ ನಂ. 1 ಹಾಗೂ 8 ರಲ್ಲಿ ಈ ಮಷಿನ್ ಅಳವಡಿಸಲಾಗಿದೆ.
ಈ ರೀತಿಯ ಒಟ್ಟು 5 ಮಷಿನ್ಗಳಿದ್ದು, ಮೆಜೆಸ್ಟಿಕ್ ರೈಲ್ವೆ ನಿಲ್ದಾಣ, ಯಶವಂತಪುರ, ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣದಲ್ಲಿ ಅಳವಡಿಸಲಾಗಿದೆ.
ಗೂಗಲ್ ಪೇ, ಪೇಟಿಎಮ್ ಮೂಲಕ ಹಣ ಪಾವತಿ ಮಾಡಬಹುದು. ಸದ್ಯ ಪೈಲೆಟ್ ಪ್ರಾಜೆಕ್ಟ್ ಇದಾಗಿದ್ದು, ನ್ಯೂ ಇನೋವೇಶನ್ ನಾನ್ ಫೇರ್ ಐಡಿಯಾಸ್ ಸ್ಕೀಮ್ ಅಡಿಯಲ್ಲಿ ಅಳವಡಿಸಲಾಗಿದೆ.