ETV Bharat / state

ಎಂ ಆರ್ ಸೀತಾರಾಮ್, ಸುಧಾಂ ದಾಸ್, ಉಮಾಶ್ರೀ ನಾಮನಿರ್ದೇಶನಕ್ಕೆ ರಾಜ್ಯಪಾಲರ ಅನುಮೋದನೆ - Congress MLC Nomination

ವಿಧಾನ ಪರಿಷತ್ ಸ್ಥಾನಕ್ಕೆ ನಾಮನಿರ್ದೇಶಿತರಾದ ಎಂ.ಆರ್.ಸೀತಾರಾಮ್, ಸುಧಾಂ ದಾಸ್ ಹಾಗೂ ಉಮಾಶ್ರೀ ಅವರಿಗೆ ರಾಜ್ಯಪಾಲರು ಅನುಮೋದನೆ ನೀಡಿದ್ದಾರೆ.

m-r-sitharam-sudham-das-umashree-nominated-as-legislative-council
ಎಂ ಆರ್ ಸೀತಾರಾಮ್, ಸುಧಾಂ ದಾಸ್, ಉಮಾಶ್ರೀ ನಾಮನಿರ್ದೇಶನಕ್ಕೆ ರಾಜ್ಯಪಾಲರ ಅನುಮೋದನೆ
author img

By

Published : Aug 19, 2023, 6:21 PM IST

ಬೆಂಗಳೂರು : ವಿಧಾನ ಪರಿಷತ್ ಸ್ಥಾನಕ್ಕೆ ನಾಮನಿರ್ದೇಶಿತರಾಗಿ ಎಂ.ಆರ್.ಸೀತಾರಾಮ್, ಸುಧಾಂ ದಾಸ್ ಹಾಗೂ ಉಮಾಶ್ರೀ ಹೆಸರಿಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ರಾಜ್ಯ ಸರ್ಕಾರ ರಾಜ್ಯಪಾಲರಿಗೆ ಮೂವರ ಹೆಸರನ್ನು ನಾಮನಿರ್ದೇಶನಕ್ಕಾಗಿ ಶಿಫಾರಸು ಮಾಡಿತ್ತು. ಆದರೆ ಮೂವರು ನಾಮನಿರ್ದೇಶನ ಶಿಫಾರಸ್ಸಿಗೆ ಪಕ್ಷದಲ್ಲೇ ವಿರೋಧ ವ್ಯಕ್ತವಾಗಿತ್ತು. ಅದರಲ್ಲೂ ಸುಧಾಂ ದಾಸ್ ವಿರುದ್ಧ ಪಕ್ಷದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಸುಧಾಂ ದಾಸ್ ನಾಮನಿರ್ದೇಶನ ಶಿಫಾರಸು ವಿರುದ್ಧ ನಾಲ್ವರು ಹಿರಿಯ ಸಚಿವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಪತ್ರ ಬರೆದಿದ್ದರು.

ಹಿರಿಯ ಸಚಿವರ ಆಕ್ಷೇಪದ ಮಧ್ಯೆಯೂ ಕಾಂಗ್ರೆಸ್ ಹೈ ಕಮಾಂಡ್ ಸುಧಾಂ ದಾಸ್​ಗೆ ಮಣೆ ಹಾಕಿದೆ.‌ ಸುಧಾಂ‌ ದಾಸ್ ನಿವೃತ್ತ ಇಡಿ ಅಧಿಕಾರಿಯಾಗಿದ್ದಾರೆ. ಸುಧಾಂ ದಾಸ್ ಪರ ಡಿಸಿಎಂ ಡಿ.ಕೆ.ಶಿವಕುಮಾರ್ ಬಲವಾಗಿ ಬ್ಯಾಟಿಂಗ್ ಮಾಡಿದ್ದರು. ಆದರೆ, ಸಚಿವರಾದ ಡಾ.ಜಿ.ಪರಮೇಶ್ವರ್, ಕೆ.ಹೆಚ್.ಮುನಿಯಪ್ಪ, ಹೆಚ್.ಸಿ.ಮಹದೇವಪ್ಪ, ಆರ್.ಬಿ.ತಿಮ್ಮಾಪುರ ಅವರು ಸುಧಾಂ‌ ದಾಸ್ ನಾಮನಿರ್ದೇಶನದ ಶಿಫಾರಸು ವಿರುದ್ಧ ಪತ್ರ ಬರೆದಿದ್ದರು.‌

ನಾಮನಿರ್ದೇಶಿತ ಅಭ್ಯರ್ಥಿಗಳ ಆಯ್ಕೆ ವೇಳೆ ಪ್ರಾದೇಶಿಕ ಸಮತೋಲನ ಹಾಗೂ ಸಾಮಾಜಿಕ ನ್ಯಾಯವನ್ನು ಅನುಸರಿಸಬೇಕು. ಅಚ್ಚರಿಯ ಕಾರಣಕ್ಕಾಗಿ ಸುಧಾಂ ದಾಸ್ ಕೆಲ ವರ್ಷಗಳ ಹಿಂದೆ ಜಾರಿ ನಿರ್ದೇಶನಾಲಯಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಕರ್ನಾಟಕ ಮಾಹಿತಿ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡರು. ಬಳಿಕ ಅವರು ಮಾರ್ಚ್ 2023ಗೆ ಆಯುಕ್ತ ಸ್ಥಾನಕ್ಕೆ ರಾಜೀನಾಮೆ ನೀಡಿ, ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದರು. ಅವರು ಇತ್ತೀಚೆಗಷ್ಟೇ ಪಕ್ಷ ಸೇರಿಸುವುದರಿಂದ ವಿಧಾನಸಭೆ ಚುನಾವಣೆಯಲ್ಲಿ ಅವರ ಕೊಡುಗೆ ಏನೂ ಇಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು.

ನಾವು ಇಂತಹ ವ್ಯಕ್ತಿ ಮೇಲ್ಮನೆಗೆ ನಾಮನಿರ್ದೇಶಿತರಾಗುವುದನ್ನು ತೀವ್ರವಾಗಿ ವಿರೋಧಿಸುತ್ತೇವೆ. ಹಾಗಾಗಿ ಅವರ ಹೆಸರನ್ನು ಕೈ ಬಿಡಬೇಕು ಎಂದು ನಿಮ್ಮಲ್ಲಿ ಮನವಿ ಮಾಡುತ್ತೇವೆ. ಕಾಂಗ್ರೆಸ್​​ಗೆ ನಿಷ್ಠರಾಗಿರುವ ಹಾಗೂ ಹಲವು ವರ್ಷಗಳಿಂದ ಪಕ್ಷಕ್ಕೆ ದುಡಿಯುತ್ತಿರುವವರನ್ನು ಆಯ್ಕೆ ಮಾಡುವಂತೆ ಮನವಿ ಪತ್ರ ಸಲ್ಲಿಸಿದ್ದರು.

ಈ ಮುಂಚೆ ಮನ್ಸೂರ್ ಖಾನ್ ಹೆಸರನ್ನು ನಾಮನಿರ್ದೇನ ಮಾಡಲು ನಿರ್ಧರಿಸಲಾಗಿತ್ತು. ಆದರೆ ಮನ್ಸೂರ್ ಖಾನ್ ನಾಮನಿರ್ದೇಶನ ಆಕ್ಷೇಪಿಸಿ ಕೆಲ‌ ಸಂಘಟನೆಗಳು ರಾಜ್ಯಪಾಲರಿಗೆ ಪತ್ರ ಬರೆದಿದ್ದರು. ರಾಜ್ಯಪಾಲರು ಈ ಸಂಬಂಧ ಪರಿಶೀಲಿಸುವಂತೆ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದರು.‌ ಬಳಿಕ ಮನ್ಸೂರ್ ಖಾನ್ ಹೆಸರು ಕೈ ಬಿಟ್ಟು ಉಮಾಶ್ರೀ ಹೆಸರನ್ನು ಕಾಂಗ್ರೆಸ್ ಹೈ ಕಮಾಂಡ್ ಅಂತಿಮಗೊಳಿಸಿತ್ತು. ಇದೀಗ ಎಂ.ಆರ್.ಸೀತಾರಾಮ್, ಸುಧಾಂ ದಾಸ್ ಹಾಗೂ ಉಮಾಶ್ರೀ ಹೆಸರಿಗೆ ರಾಜ್ಯಪಾಲರು ಅನುಮೋದನೆ ನೀಡಿದ್ದಾರೆ.

ಇದನ್ನೂ ಓದಿ : ಪರಿಷತ್‌ ಸದಸ್ಯ ಸ್ಥಾನದ ನಾಮನಿರ್ದೇಶನಕ್ಕೆ ಎಂ.ಆರ್.ಸೀತಾರಾಮ್, ಸುಧಾಂ ದಾಸ್, ಉಮಾಶ್ರೀ ಹೆಸರು ಶಿಫಾರಸು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.